ಅಮೆರಿಕದ ಆ್ಯಂಥ್ರೋಪಿಕ್‌ ಕಂಪನಿಯು ತನ್ನ ಹೊಸ ಕೃತಕ ಬುದ್ಧಿಮತ್ತೆ (ಎಐ) ಟೂಲ್ ಮೂಲಕ ಜಾಗತಿಕ ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಬಾಗಲಕೋಟೆಯ ರಾಹುಲ್‌ ಪಾಟೀಲ್‌ ಅವರೇ ಈ ಹೊಸ ಆವಿಷ್ಕಾರದ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ.

ವಾಷಿಂಗ್ಟನ್‌: ತನ್ನ ಹೊಸ ಎಐ (ಕೃತಕ ಬುದ್ಧಿಮತ್ತೆ) ಟೂಲ್‌ ಮೂಲಕ ಜಾಗತಿಕ ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಅಮೆರಿಕ ಮೂಲದ ಆ್ಯಂಥ್ರೋಪಿಕ್‌ ಕಂಪನಿಯ ಹಿಂದಿನ ಶಕ್ತಿ ಕನ್ನಡಿಗ ರಾಹುಲ್‌ ಪಾಟೀಲ್‌!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದ ಬಾಗಲಕೋಟೆಯ ರಾಹುಲ್‌ ಪಾಟೀಲ್‌

ನಿಜ. ಕಳೆದೊಂದು ವಾರದಿಂದ ಇಡೀ ಜಗತ್ತಿನಾದ್ಯಂತ ಐಟಿ ಕಂಪನಿಗಳಿಗೆ, ಐಟಿ ಉದ್ಯೋಗಿಗಳಿಗೆ ಭವಿಷ್ಯದ ಬಗ್ಗೆ ಆತಂಕ ಹುಟ್ಟುಹಾಕಿರುವ ಆ್ಯಂಥ್ರೋಪಿಕ್‌ನಲ್ಲಿ ಸಿಟಿಒ (ಮುಖ್ಯ ತಾಂತ್ರಿಕ ಅಧಿಕಾರಿ) ಹುದ್ದೆಯಲ್ಲಿರುವುದು ಕರ್ನಾಟಕದ ಬಾಗಲಕೋಟೆಯ ರಾಹುಲ್‌ ಪಾಟೀಲ್‌. ಕಂಪನಿಯ ಈ ಹೊಸ ಎಐ ಟೂಲ್‌ ಸೇರಿದಂತೆ ಇತ್ತೀಚಿನದ ದಿನಗಳಲ್ಲಿನ ಎಲ್ಲಾ ಹೊಸ ಅವಿಷ್ಕಾರಗಳ ಮೆದುಳು ಇವರೇ ಎಂದು ಹೇಳಲಾಗಿದೆ.

ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ

ಕಳೆದ ಅಕ್ಟೋಬರ್‌ ತಿಂಗಳಲ್ಲಷ್ಟೇ ಎಐ ಸುರಕ್ಷತೆ ಮತ್ತು ಸಂಶೋಧನಾ ಸ್ಟಾರ್ಟಪ್‌ ಆಗಿರುವ ಆ್ಯಂಥ್ರೋಪಿಕ್‌ನ ಸಿಟಿಒ ಆಗಿ ರಾಹುಲ್‌ ನೇಮಕವಾಗಿದ್ದರು. ಅದಾದ ಕೆಲವೇ ತಿಂಗಳಲ್ಲಿ ಕಂಪನಿ, ಮಾನವನ ಅಗತ್ಯವೇ ಇಲ್ಲದೆ ಕೆಲಸ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಇದನ್ನೂ ಓದಿ: ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!

ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್‌ ಐಟಿ ಖಾಸಗಿ ವಿವಿಯಲ್ಲಿ 1998ರಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ರಾಹುಲ್, ನಂತರ ಅಮೆರಿಕದ ವಾಷಿಂಗ್ಟನ್‌ ವಿವಿಯಲ್ಲಿ ಎಂಬಿಎ ಮುಗಿಸಿದ್ದರು. ಮೈಕ್ರೋಸಾಫ್ಟ್‌, ಒರ್‍ಯಾಕಲ್ ಸೇರಿ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆ ಬಳಿಕ ಫಿನ್‌ಟೆಕ್‌ ಸಂಸ್ಥೆಯ ಸಿಟಿಒ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಆ್ಯಂಥ್ರೋಪಿಕ್‌ನ ಸಿಟಿಒ ಆಗಿದ್ದಾರೆ.

ಇದನ್ನೂ ಓದಿ: ಫೋಟೊ, ವಿಡಿಯೋ ಡಿಲೀಟ್​ ಮಾಡಿದ್ರೂ ಮೆಮೊರಿ ಫುಲ್​ ತೋರಿಸ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ