ಕೆಸರಲ್ಲಿ ಬಿದ್ದವನಿಗೆ ನೆರವಿನ ಕೈ ಚಾಚಿದ ಪೂರ್ವಜ: ಬೇಡವೆಂದ ಮನುಜ!

ಕೆಸರಲ್ಲಿ ಸಿಕ್ಕು ನರಳುತ್ತಿದ್ದವನ ಸಹಾಯಕ್ಕೆ ಬಂದ ಓರಾಂಗ್ಟನ್| ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆ| ಬೊರೆನೋ ಐಲ್ಯಾಂಡ್‌ನ ಕಾಡಿನಲ್ಲಿ ಕೆಸರಲ್ಲಿ ಸಿಕ್ಕ ವ್ಯಕ್ತಿ| ವ್ಯಕ್ತಿಯನ್ನು ಮೇಲೆತ್ತಲು ನೆರವಿನ ಕೈ ಚಾಚಿದ ಓರಾಂಗ್ಟನ್| ಸಾಮಾಜಿಕ ಜಾಲತಾಣದಲ್ಲಿ ಓರಾಂಗ್ಟನ್ ಫೋಟೋ ಭಾರೀ ವೈರಲ್|

 

An Orangutan Extends A Helping Hand To Man In River

ಬೊರೆನೋ(ಫೆ.07): ಮಂಗನಿಂದ ಮಾನವ ಎಂಬ ಸಿದ್ಧ ಸಿದ್ಧಾಂತಕ್ಕೆ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಮಾನವ ವಾನರ ಪ್ರಜಾತಿ ಸರಪಳಿಯ ಆಧುನಿಕ ರೂಪ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಮಾನವ ಇತರೆಲ್ಲಾ ಪ್ರಾಣಿ ಸಂಕುಲಗಳಿಂದ ಪ್ರತ್ಯೇಕ ಎಂದು ಕೆಲವರು ವಾದಿಸುತ್ತಾರೆ.

ಆದರೆ ಪ್ರೀತಿ, ಕರುಣೆ, ಒಬ್ಬರಿಗೊಬ್ಬರಿಗಾಗುವ ಹೃದಯ ಇದ್ದರೆ ಎಲ್ಲ ಪ್ರಜಾತಿಗಳಲ್ಲೂ ಇರುವ ಮೂಲ ಗುಣಗಳಲ್ಲಿ ನಮ್ಮನ್ನು ನಾವು ಕಾಣಬಹುದು. ಈ ಮೃದು ಹೃದಯ ಇರದಿದ್ದರೆ ಯಾವ ಪ್ರಜಾತಿಗೆ ಸೇರಿದರಾದರೂ ಏನು ಪ್ರಯೋಜನ.

ಎಲ್ಲ ಪ್ರಜಾತಿಗಳಲ್ಲೂ ಪರಸ್ಪರ ಪ್ರೀತಿ, ಕರುಣೆ, ಗೌರವ ಹಾಗೂ ಭಯ ಇದು ವಸುಧೆ ಹಾಕಿಕೊಟ್ಟ ಅಲಿಖಿತ ಕಾನೂನು. ಇದನ್ನು ಪಾಲಿಸುವುದು ಎಲ್ಲ ಪ್ರಜಾತಿಗಳಿಗೂ ಅನಿವಾರ್ಯವೂ ಹೌದು.

ಈ ಮೃದು ಹೃದಯದ ಜಗತ್ತಿಗೆ ವಸುಧೆಯ ನಿಯಮ ಈ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕಾಡಿನ ಕೆಸರಲ್ಲಿ ಸಿಕ್ಕಿ ಹಾಕಿಕೊಂಡ ಮನುಷ್ಯನ ನೆರವಿಗೆ ವಾನರ ಪ್ರಜಾತಿಯ ಓರಾಂಗಟನ್ ಮುಂದಾದ ಅದ್ಭುತ ಘಳಿಗೆ ಈ ಫೋಟೋದಲ್ಲಿ ಸೆರೆಯಾಗಿದೆ.

ಬೊರೆನೋ ಐಲ್ಯಾಂಡ್‌ನಲ್ಲಿ ವ್ಯಕ್ತಿಯೋರ್ವ ಕಾಡು ಕೆಸರಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾಗ ಓರಾಂಗಟನ್'ವೊಂದು ಆತನ ನೆರವಿಗೆ ಧಾವಿಸಿರುವ ಕ್ಷಣವನ್ನು ವನ್ಯಜೀವಿ ಛಾಯಾಗ್ರಾಹಕ ಅನಿಲ್ ಪ್ರಭಾಕರ್ ಎಂಬುವವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಓರಾಂಗ್ಟನ್ ಪ್ರಜಾತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಸಂಘಟನೆಯೊಂದರ ಸದಸ್ಯ ಕೆರೆಯಲ್ಲಿದ್ದ ಹಾವನ್ನು ಮೇಲೆತ್ತಲು ಹೋದಾಗ ಕೆಸರಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಆಗ ಆತನ ನೆರವಿಗೆ ಓರಾಂಗ್ಟನ್ ತನ್ನ ಕೈ ಚಾಚಿದೆ.

ಆದರೆ ಓರಾಂಗ್ಟನ್ ಕಾಡು ಪ್ರಾಣಿ ಎಂಬ ಕಾರಣಕ್ಕೆ ದಾಳಿಯ ಭಯದಿಂದ ವ್ಯಕ್ತಿ ಓರಾಂಗ್ಟನ್ ಸಹಾಯವನ್ನು ನಿರಾಕರಿಸಿದ್ದಾನೆ ಎಂದು ಹೇಳಲಾಗಿದೆ.

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios