Asianet Suvarna News Asianet Suvarna News

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಯಲು ಹೊಸ ಗ್ರೀನ್‍‌ಪೀಸ್ ಐಡಿಯಾ!

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದ ಭಾರತದ ಹೆಚ್ಚಿನ ಭಾಗಗಳಲ್ಲಿ ಕಾಣುತ್ತೇವೆ. ಇನ್ನು ವಿದೇಶದಲ್ಲೂ ಈ ಸಂಪ್ರದಾಯ ಕಡಿಮೆ ಇಲ್ಲ. ಇದೀಗ ಪ್ರವಾಸಿಗರು ಹೆಚ್ಚು ಸಂದರ್ಶಿಸುವ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡದಂತೆ ತಡೆಯಲು ವಿನೂತನ ಗ್ರೀನ್‌ಪೀಸ್ ಐಡಿಯಾ ಜಾರಿ ಮಾಡಲಾಗಿದ್ದು, ಭರ್ಜರಿ ಯಶಸ್ಸು ಸಿಕ್ಕಿದೆ.

Amsterdam installed eight hemp filled sustainable urinals plant pots in the city wild peeing hot spots
Author
Bengaluru, First Published Aug 22, 2020, 8:20 PM IST

ಆಮ್‌ಸ್ಟ್ರೆಡಾಮ್(ಆ.22):  ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆಯನ್ನು ನೆದರ್ಲೆಂಡ್ ರಾಜಧಾನಿ ಆಮ್‌ಸ್ಟ್ರೆಡಾಮ್ ಹೆಚ್ಚಾಗಿ ಎದುರಿಸುತ್ತಿದೆ. ಅದರಲ್ಲೂ ಪ್ರವಾಸಿಗರು ಸಂದರ್ಶಿಸುವ ಹೆಚ್ಚಿನ ಸ್ಥಳಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಪಾರಂಪರಿಕ ಕಟ್ಟಡಗಳಿಗೂ ಹಾನಿಯಾಗುತ್ತಿದೆ. ಸಾರ್ವಜನಿಕ ಪ್ರದೇಶಗಳು ಗಬ್ಬುನಾರುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಮುಕ್ತಿ ಕಾಣಿಸಲು ಆಮ್‌ಸ್ಟೆಡಾಮ್ ಅಧಿಕಾರಿಗಳು ಗ್ರೀನ್‌ಪೀಸ್ ಐಡಿಯಾ ಜಾರಿ ಮಾಡಿ ಉತ್ತಮ ಫಲಿತಾಂಶ ಪಡೆದಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ 100 ದಿನದಿಂದ ಒಂದೇ ಒಂದು ಕೊರೋನಾ ಕೇಸಿಲ್ಲ!

ಅಮ್‌ಸ್ಟ್ರೆಡಾಮ್‌ನ ನಗರದ 12 ವಿವಿಧ ಭಾಗಗಳಲ್ಲಿ ವಿನೂತನ ಗಿಡ ಕುಂಡದ ಮೂತ್ರವಿಸರ್ಜನೆ ಪರಿಕರ ಅಳವಡಿಸಲಾಗಿದೆ. ವಿಶೇಷವಾಗಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿರ್ಸಜನೆ ಕಡಿಮೆ ಮಾಡಲು ಈ ವಿನೂತನ ಪ್ರಯೋಗ ಮಾಡಲಾಗಿದೆ. ಈ ಮೂತ್ರವಿರ್ಜನೆ ಪರಿಕರ ಮೇಲ್ನೋಟಕ್ಕೆ  ಗಿಡಗಳನ್ನು ನೆಟ್ಟಿರುವ ಕುಂಡಗಳಂತೆ ಕಾಣಿಸುತ್ತದೆ. ಹತ್ತಿರ ಹೋದಾಗ ಇದೇ ಗಿಡ ಕುಂಡದ ಮತ್ತೊಂದು ಬದಿಯಲ್ಲಿ ಮೂತ್ರವಿಸರ್ಜನೆಗೆ ಸ್ಥಳ ನೀಡಲಾಗಿದೆ. 

ಗಿಡಗಳನ್ನು ನೋಡಿದ ಹಲವರು ಮೂತ್ರ ವಿಸರ್ಜನೆಗೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಈ ಪರಿಕರದಲ್ಲಿ ಮೂತ್ರಗಳು ಶೇಖರಣೆಯಾಗುತ್ತದೆ. ಈ ಮೂತ್ರಗಳನ್ನು ಸಂಗ್ರಹಿಸಿ ಗೊಬ್ಬರ ಮಾಡಲಾಗುತ್ತದೆ. ಗಿಡಗಳನ್ನು ನೆಟ್ಟಿರುವ ಮೂತ್ರವಿಸರ್ಜನೆ ಪರಿಕರದಿಂದ ಹೆಚ್ಚಿನವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನಿಲ್ಲಿಸಿದ್ದಾರೆ.

Follow Us:
Download App:
  • android
  • ios