Asianet Suvarna News Asianet Suvarna News

ಲಾಕ್‌ಡೌನ್, ಈಸ್ಟರ್ ಸಂಡೇ ಬಲಿಪೂಜೆ ನೇರ ಪ್ರಸಾರ: ಕ್ರೈಸ್ತರಿಗೆ ಮೋದಿ ಶುಭಾಶಯ!

ಶತಮಾನದ ಸಂಪ್ರದಾಯಕ್ಕೆ ಬ್ರೇಕ್ ಹಾಕಿಸಿದ ಕೊರೋನಾ| ಈಸ್ಟರ್ ಸಂಡೇ ಬಲಿಪೂಜೆ ಲೈವ್‌ ಸ್ಟ್ರೀಮಿಂಗ್| ಕ್ರೈಸ್ತ ಬಾಂಧವರಿಗೆ ಮೋದಿ ಶುಭಾಶಯ

Amid Of Lockdown Pope to livestream Easter mass PM Modi wishes nation on Easter
Author
Bangalore, First Published Apr 12, 2020, 2:54 PM IST

ನವದೆಹಲಿ(ಏ.12): ಕೊರೋನಾ ಅಟ್ಟಹಾಸದಿಂದಾಗಿ ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ಭಾರತವನ್ನೂ ಕಾಡುತ್ತಿರುವ ಈ ವೈರಸ್ ನಿಯಂತ್ರಿಸಲು ಲಾಕ್‌ಡೌನ್ ವಿಧಿಸಲಲಾಗಿದ್ದು, ಈ ಬಾರಿ ಈಸ್ಟರ್ ಸಂಡೇ ಆಚರಣೆ ಕೇವಲ ಮನೆಯಳಗೇ ಸೀಮಿತಗೊಂಡಿದೆ. ಏಸು ಪುನರುತ್ಥಾನದ ಈ ದಿನ ಪ್ರತಿ ವರ್ಷವೂ ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಚರ್ಚ್‌ನಲ್ಲಿ ಸೇರುತ್ತಿದ್ದರು. ಅಲ್ಲದೇ ಇಲ್ಲಿ ಧಾರ್ಮಿ ವಿಧಿವಿಧಾನಗಳೂ ನೆರವೇರುತ್ತಿದ್ದವು. ಆದರೆ, ಈ ಬಾರಿ ಮಹಾಮಾರಿ ಕೊರೋನಾ ಇದೆಲ್ಲಕ್ಕೂ ತಡೆಯೊಡ್ಡಿದೆ. ಇಂತಹ ಪರಿಸ್ಥಿತಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಎಲ್ಲರಿಗೂ ಈಸ್ಟರ್ ಹಬ್ಬದ ಶುಭ ಕೋರಿದ್ದು, ಶೀಘ್ರವಾಗಿ ಈ ವೈರಸ್ ಅಟ್ಟಹಾಸ ಕೊನೆಗೊಳ್ಳಲಿ ಎಂದು ಬರೆದಿದ್ದಾರೆ.

ಈಸ್ಟರ್ ಸಂಡೇ ಶುಭ ಕೋರಿ ಟ್ವೀಟ್ ಮಾಡಿರುವ ಪಿಎಂ ಮೋದಿ '‘ಈಸ್ಟರ್‌ನ ಈ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಇಂದು ಕ್ರಿಸ್ತನ ಉದಾತ್ತ ಆಲೋಚನೆಗಳನ್ನು ನಾವು ಸ್ಮರಿಸುತ್ತೇವೆ. ವಿಶೇಷವಾಗಿ ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಅವರ ಅಚಲ ಬದ್ಧತೆಯನ್ನು ನೆನೆಯುತ್ತೇವೆ. ಕೊರೋನಾ ವೈರಸ್‌ ವಿರುದ್ಧ ಯಶಸ್ವಿಯಾಗಿ ಜಯ ಸಾಧಿಸಲು, ಈ ಮೂಲಕ ಭೂಮಿಯಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸಲು ಈಸ್ಟರ್ ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ’  ಎಂದು ಬರೆದಿದ್ದಾರೆ.

ಇನ್ನು ಕೊರೋನಾದಿಂದಾಗಿ ಶತಮಾನಗಳಿಂದಲೂ ನಡೆದು ಬಂದ ಸಂಪ್ರದಾಯಕ್ಕೆ ಬ್ರೇಕ್ ಹಾಕಿರುವ ಪೋಪ್ ಫ್ರಾನ್ಸಿಸ್ ಈಸ್ಟರ್ ಸಂಡೇ ಬಲಿ ಪೂಜೆಯನ್ನು ನೇರ ಪ್ರಸಾರದ ಮೂಲಕ ನೆರವೇರಿಸಲಿದ್ದಾರೆ. ಈ ಮೂಲಕ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದಿರುವ ವಿಶ್ವದ 1.3 ಬಿಲಿಯನ್ ಕ್ರೈಸ್ತರು ಈ ಪವಿತ್ರ ದಿನವನ್ನು ಆಚರಿಸಲು ಸಾಧ್ಯವಾಗಲಿದೆ. 

Follow Us:
Download App:
  • android
  • ios