Asianet Suvarna News Asianet Suvarna News

ರಾಜ್ಯದಲ್ಲಿ ಕೊರೋನಾಗೆ 6 ಬಲಿ, 1240 ಹೊಸ ಕೇಸ್ ಪತ್ತೆ

ರಾಜ್ಯದಲ್ಲಿ ಬುಧವಾರ (ಡಿಸೆಂಬರ್ 16) ಹೊಸದಾಗಿ 1240 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 6 ಮಂದಿ ಬಲಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

1240 New COVID 19 Cases Confirmed 6 death reported in Karnataka On December 16th kvn
Author
Bengaluru, First Published Dec 17, 2020, 11:01 AM IST

ಬೆಂಗಳೂರು(ಡಿ.17): ರಾಜ್ಯದಲ್ಲಿ ಕೊರೋನಾದಿಂದಾಗಿ ಮೃತರಾಗುತ್ತಿರುವವ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ದಾಖಲಾಗುತ್ತಿದೆ. ಕಳೆದ ನಾಲ್ಕು ದಿನದಲ್ಲಿ ಎರಡನೇ ಬಾರಿಗೆ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ. ಬುಧವಾರ ಆರು ಜನರು ಮೃತಪಟ್ಟಿದ್ದು, (ಭಾನುವಾರ ಐದು ಮಂದಿ) 1,240 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 1,403 ಜನರು ಗುಣಮುಖರಾಗಿದ್ದಾರೆ.

ಪ್ರಸ್ತುತ 15,476 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 248 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 9.04 ಲಕ್ಷ ಮಂದಿಯನ್ನು ಸೋಂಕು ಬಾಧಿಸಿದ್ದು, ಗುಣಮುಖರಾದವರ ಸಂಖ್ಯೆ 8.77 ಲಕ್ಷಕ್ಕೆ ಏರಿದೆ. ಒಟ್ಟು 11,971 ಮಂದಿ ಮೃತರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಕೊರೋನಾ ಸಾವಿನ ದರ ಶೇ. 1.33ರಷ್ಟಿದೆ.

ರಾಜ್ಯದಲ್ಲಿ ಮತ್ತೆ ಮೂರಂಕಿ ದಾಟಿದ ಕೊರೋನಾ ಸೊಂಕಿತರ ಸಂಖ್ಯೆ: ಇರಲಿ ಎಚ್ಚರಿಕೆ

ನಾಲ್ಕು ದಿನಗಳ ಬಳಿಕ ಕೊರೋನಾ ಪರೀಕ್ಷೆಯ ಪ್ರಮಾಣ ಲಕ್ಷ (1.01 ಲಕ್ಷ) ದಾಟಿದೆ. ಈವರೆಗೆ ಒಟ್ಟು 1.26 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ. ಬುಧವಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ನಾಲ್ಕು, ಬಳ್ಳಾರಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 676, ಬಾಗಲಕೋಟೆ, ಹಾವೇರಿ, ಯಾದಗಿರಿ ಮತ್ತು ಬೆಳಗಾವಿ ತಲಾ 5, ಬಳ್ಳಾರಿ ಮತ್ತು ಚಾಮರಾಜನಗರ ತಲಾ 17, ಬೆಂಗಳೂರು ಗ್ರಾಮಾಂತರ 28, ಬೀದರ್‌ 10, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 8, ಚಿತ್ರದುರ್ಗ 51, ದಕ್ಷಿಣ ಕನ್ನಡ 23, ದಾವಣಗೆರೆ 26, ಧಾರವಾಡ 15, ಗದಗ 7, ಹಾಸನ 34, ಕಲಬುರಗಿ 30, ಕೊಡಗು 46, ಕೋಲಾರ 16, ಕೊಪ್ಪಳ 8, ಮಂಡ್ಯ 32, ಮೈಸೂರು 47, ರಾಯಚೂರು 11, ರಾಮನಗರ 4, ಶಿವಮೊಗ್ಗ 13, ತುಮಕೂರು 57, ಉಡುಪಿ 16, ಉತ್ತರ ಕನ್ನಡ 8 ಮತ್ತು ವಿಜಯಪುರ ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
 

Follow Us:
Download App:
  • android
  • ios