ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾವನ್ನು ಒಪ್ಪಿಸಲು ಎಲ್ಲಾ ಅವಕಾಶಗಳು ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಇದನ್ನು ಕೈಗೊಳ್ಳಲು ಅವರು ನಡೆಸುವ ಎಲ್ಲಾ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬೈ (John Kirby) ಹೇಳಿದ್ದಾರೆ.
ನ್ಯೂಯಾರ್ಕ್: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾವನ್ನು ಒಪ್ಪಿಸಲು ಎಲ್ಲಾ ಅವಕಾಶಗಳು ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಇದನ್ನು ಕೈಗೊಳ್ಳಲು ಅವರು ನಡೆಸುವ ಎಲ್ಲಾ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬೈ (John Kirby) ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ, ಯುದ್ಧ ನಿಲ್ಲಿಸಲು ಮೋದಿ ಅವರಿಗೆ ಅವಕಾಶವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಿರ್ಬೈ, ಇಡೀ ಯುದ್ಧಕ್ಕೆ ಕಾರಣವಾಗಿರುವ ಏಕೈಕ ವ್ಯಕ್ತಿಯೆಂದರೆ ಅದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತ್ರ. ಯುದ್ಧವನ್ನು ನಿಲ್ಲಿಸಲು ಪುಟಿನ್ ಬಳಿ ಇನ್ನೂ ಸಮಯಾವಕಾಶವಿದೆ. ಅದೇ ರೀತಿ ಯುದ್ಧ ನಿಲುಗಡೆಯನ್ನು ರಷ್ಯಾಗೆ ಮನವರಿಕೆ ಮಾಡಿಕೊಡಲು ಮೋದಿ ಅವರಿಗೆ ಇನ್ನೂ ಸಮಯಾವಕಾಶ ಇದೆ. ಅವರು ಕೈಗೊಳ್ಳುವ ಎಲ್ಲಾ ಯತ್ನಗಳಿಗೂ ಸ್ವಾಗತ ಎಂದು ಅವರು ಹೇಳಿದ್ದಾರೆ. ಯುದ್ಧವನ್ನು ನಿಲ್ಲಿಸಿ ರಾಜತಾಂತ್ರಿಕ ಪರಿಹಾರ ಹುಡುಕಿಕೊಳ್ಳುವಂತೆ ಹಲವು ಬಾರಿ ಮೋದಿ ಪುಟಿನ್ ಅವರಿಗೆ ಸಲಹೆ ನೀಡಿದ್ದಾರೆ.
ಮಡಿದರೂ ಮಗುವಾಗಿ ಹುಟ್ಟಿ ಬರುವೆ, ಯೋಧ ಸತ್ತರೂ ಮಕ್ಕಳಾಗಲ್ಲವೆಂಬ ಭಯವಿಲ್ಲ !
ರಷ್ಯಾ ಅಧ್ಯಕ್ಷರಿಗೆ ಅಂತೂ ಇಂತೂ ಬುದ್ಧಿ ಬಂತಾ..? ಯುದ್ಧ ಮುಗಿಸಲು ಬಯಸುತ್ತೇನೆ ಎಂದ ಪುಟಿನ್..!
