Asianet Suvarna News Asianet Suvarna News

ಲಂಕಾದಲ್ಲಿ ಎಮರ್ಜೆನ್ಸಿ, ರಾತ್ರೋರಾತ್ರಿ ಸಚಿವರ ಸಾಮೂಹಿಕ ಪದತ್ಯಾಗ!

* ಶ್ರೀಲಂಕಾದಲ್ಲಿ ಎಮರ್ಜೆನ್ಸಿ!

* ದ್ವೀಪರಾಷ್ಟ್ರದಲ್ಲಿ ತಲ್ಲಣ

* ಪ್ರತಿಭಟನೆ ಹತ್ತಿಕ್ಕಲು ತುರ್ತು ಸ್ಥಿತಿ ಘೋಷಣೆ

 ಕಫä್ರ್ಯಗೆ ಮುನ್ನ ಡೀಸೆಲ್‌ಗಾಗಿ ಕ್ಯೂ ನಿಂತ ಶ್ರೀಲಂಕಾ ಜನತೆ

All 26 Lankan Ministers Resign, Mahinda Rajapaksa To Remain PM pod
Author
Nagalapuram, First Published Apr 4, 2022, 6:16 AM IST | Last Updated Apr 4, 2022, 8:04 AM IST

ಕೊಲಂಬೊ(ಏ.04): ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿರುವ ಶ್ರೀಲಂಕಾದಲ್ಲಿ (Sri Lanka) ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಅಲ್ಲದೆ, ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ 36 ತಾಸಿನ ಕಫä್ರ್ಯ ಹೇರಿ, ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಯತ್ನಿಸಲಾಗಿದೆ.

ಏತನ್ಮಧ್ಯೆ, ಭಾನುವಾರ ರಾತ್ರಿ ದಿಢೀರ್‌ ಬೆಳವಣಿಗೆಗಳಾಗಿದ್ದು, ರಾಜಪಕ್ಸೆ ಸಂಪುಟದ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೂ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದು, ಇದನ್ನು ಪ್ರಧಾನಿ ಕಾರ್ಯಾಲಯ ಅಲ್ಲಗಳೆದಿದೆ. ಮಹಿಂದಾ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಯಾವ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ತುರ್ತು ಪರಿಸ್ಥಿತಿ ಘೋಷಣೆ:

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆಗಳಿಗೆ ಅವಕಾಶ ಇರುವುದಿಲ್ಲ. ಅಲ್ಲದೆ, ಸರ್ಕಾರದ ವಿರುದ್ಧ ಮಾತನಾಡುವ ವ್ಯಕ್ತಿಗಳನ್ನು ಬಂಧಿಸಲು ಭದ್ರತಾ ಪಡೆಗಳಿಗೆ ಅವಕಾಶವಿರುತ್ತದೆ. ಹೀಗಾಗಿ ಈ ಅವಕಾಶವನ್ನು ಬಳಸಿಕೊಂಡಿರುವ ರಾಜಪಕ್ಸೆ, ಶನಿವಾರ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

‘ಸಾರ್ವಜನಿಕ ಸುರಕ್ಷತೆ, ಶಾಂತಿ ಕಾಪಾಡುವಿಕೆ ಹಾಗೂ ಅಗತ್ಯವಸ್ತುಗಳ ಪೂರೈಕೆಗೆ ಅಡ್ಡಿ ಆಗಬಾರದೆಂದು ತುರ್ತುಪರಿಸ್ಥಿತಿ ಸಾರಲಾಗಿದೆ’ ಎಂದು ಅಧ್ಯಕ್ಷರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ನಡುವೆ, ಸರ್ಕಾರದ ವಿರುದ್ಧ ಜನಾಕ್ರೋಶ ಭುಗಿಲೆದ್ದ ಕಾರಣಕ್ಕೆ ಭಾನುವಾರ ನಡೆಯಬೇಕಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕಲು ಶನಿವಾರ ಸಂಜೆ ಗಂಟೆಯಿಂದ ಸೋಮವಾರ ಬೆಳಗ್ಗೆ 6ರವರೆಗೆ ಕಫä್ರ್ಯ ಕೂಡ ಸಾರಲಾಗಿತ್ತು. ‘ಜನರು ಯಾರೂ ಮನೆ ಬಿಟ್ಟು ಹೊರಬರಕೂಡದು’ ಎಂದು ಆದೇಶಿಸಲಾಗಿತ್ತು.

ಆದರೂ ಸರ್ಕಾರದ ಕಟ್ಟಳೆಗೆ ಬಗ್ಗದ ವಿಪಕ್ಷಗಳು ಹಾಗೂ ಜನರು, ಮನೆಯಿಂದ ಹೊರಬಂದು ಅಲ್ಲಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಭಾನುವಾರ ಶ್ರೀಲಂಕಾದ ಪ್ರಮುಖ ಪ್ರತಿಪಕ್ಷ ‘ಎಸ್‌ಜೆಬಿ’ ರಾಜಪಕ್ಸೆ ಸರ್ಕಾರದ ವಿರುದ್ಧ ಕೊಲಂಬೋದ ಮುಖ್ಯ ಚೌಕದಲ್ಲಿ ಪ್ರತಿಭಟನೆ ನಡೆಸಿ ‘ಗೋಟಬಾಯ ಗೋ ಹೋಮ್‌’ ಎಂಬ ಘೋಷಣೆ ಕೂಗಿದರು. ಈ ನಡುವೆ, ಕಫä್ರ್ಯ ಉಲ್ಲಂಘಿಸಿದ್ದಕ್ಕೆ 664 ಜನರನ್ನು ಲಂಕಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ವಾಟ್ಸಾಪ್‌ಗೆ ಕೆಲ ಹೊತ್ತು ನಿರ್ಬಂಧ:

ಶ್ರೀಲಂಕಾದಲ್ಲಿ ಭಾನುವಾರ ವಾಟ್ಸಾಪ್‌, ಟ್ವೀಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳನ್ನು ಕೆಲ ಸಮಯದ ಮಟ್ಟಿಗೆ ನಿರ್ಬಂಧಿಸಲಾಗಿತ್ತು. ಸರ್ಕಾರದ ಕ್ರಮಗಳ ವಿರುದ್ಧ ವಿಪಕ್ಷಗಳು ಕೊಲಂಬೋದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯಲ್ಲಿ ಜನರು ಸೇರುವುದನ್ನು ತಡೆಯಲು ಈ ಕ್ರಮ ಜರುಗಿಸಲಾಗಿತ್ತು. ಸಂಜೆ ವೇಳೆ ಇವುಗಳು ಮತ್ತೆ ಕೆಲಸ ಮಾಡಲು ಆರಂಭಿಸಿದವು.

Close

Latest Videos
Follow Us:
Download App:
  • android
  • ios