Asianet Suvarna News Asianet Suvarna News

ಕೋವಿಡ್ ತನಿಖೆ : ಮತ್ತೆ ಚೀನಾದಿಂದ ಕ್ಯಾತೆ

  • ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹಬ್ಬಿಸಿದ ಕುಖ್ಯಾತಿಗೀಡಾಗಿರುವ ಚೀನಾ
  • ವಿಶ್ವ ಆರೋಗ್ಯ ಸಂಸ್ಥೆ  ನಡೆಸಲು ಉದ್ದೇಶಿಸಿರುವ 2ನೇ ಸುತ್ತಿನ ಅಧ್ಯಯನಕ್ಕೆ ಬಹಿರಂಗವಾಗಿಯೇ ವಿರೋಧ 
Again china oppose For investigation On Covid 19 snr
Author
Bengaluru, First Published Jul 23, 2021, 10:20 AM IST
  • Facebook
  • Twitter
  • Whatsapp

 ಬೀಜಿಂಗ್ (ಜು.23): ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹಬ್ಬಿಸಿದ ಕುಖ್ಯಾತಿಗೀಡಾಗಿರುವ ಚೀನಾ ಆ ಕುರಿತು ವಿಶ್ವ ಆರೋಗ್ಯ ಸಂಸ್ಥೆ  ನಡೆಸಲು ಉದ್ದೇಶಿಸಿರುವ 2ನೇ ಸುತ್ತಿನ ಅಧ್ಯಯನಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದೆ. 

ಅಲ್ಲದೇ ಚೀನಾದ ವುಹಾನ್ ಲ್ಯಾಬ್‌ನಿಂದಲೇ ವೈರಾಣು ಸೋರಿಕೆಯಾಗಿದೆ ವಿಶ್ವದಲ್ಲಿ ಕೊರೋನಾ ಕಾಣಿಸಿಕೊಳ್ಳುವ ಮೊದಲು ಆ ಲ್ಯಾಬಿನ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದರು ಎಂಬ ವಾದವನ್ನು ಅಲ್ಲಗಳೆದಿದೆ. 

ಪ್ರಯೋಗಾಲಯಕ್ಕೆ ಸಂಬಂಧಿಸಿದ ನಿಯಂತ್ರಣಗಳನ್ನು ಚೀನಾ ಉಲ್ಲಂಘಿಸಿದೆ ಹಾಗೂ ವೈರಾಣು ಸೋರಿಕೆ ಮಾಡಿದೆ. ಈ ಕುರಿತು ಅದ್ಯಯನ ನಡೆಯಬೇಕಾಗಿದೆ ಎಂಬ  ಡಬ್ಲ್ಯು ಎಚ್‌ಒ ಪ್ರಸ್ತಾಪ ನಡಿ ದಿಗ್ಬ್ರಮೆಯಾಗಿದೆ. ಹೀಗಾಗಿ ವಿಸ್ವ ಆರೋಗ್ಯ ಸಂಸ್ಥೆಯ ಎರಡನೇ ಸುತ್ತಿನ ಅಧ್ಯಯನ ಯೋಜನೆಯನ್ನು ನಾವು ಪಾಲಿಸುವುದಿಲ್ಲ ಎಂದು ರಾಷ್ಟ್ರೀಯ ಅರೋಗ್ಯ ಆಯೋಗದ ಉಪ ಸಚಿವ ಚೆಂಗ್ ಯಿಕ್ಸಿನ್ ತಿಳಿಸಿದ್ದಾರೆ. 

ಚೀನಾದ ಈ ರ್ಷಾರಂಭದಲ್ಲಿ 4 ವಾರಗಳ ಕಾಲ ಅಧ್ಯಯನ ನಡೆದಿದೆ. ಹೀಗಾಗಿ ಮುಂದಿನ ಸುತ್ತಿನಲ್ಲಿ ವಿವಿಧ ವಲಯ ಹಾಗು ದೇಶಗಳ ಬಗ್ಗೆ ಅಧ್ಯಯನ ನಡೆಯಬೇಕು. ಕೊರೋನಾ ವೈರಸ್ ವಿಶ್ವದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿತ್ತು. . ಆದರೆ ಅದನ್ನು 2019ರ ಡಿಸೆಂಬರ್ ನಲ್ಲಿ ಮೊದಲು ತಿಳಿಸಿದ್ದು ನಾವು ಅಷ್ಟೇ ಎಂಬ ವಾದವನ್ನು ಮುಂದಿಟ್ಟಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Follow Us:
Download App:
  • android
  • ios