Asianet Suvarna News Asianet Suvarna News

ನಾಲಿಗೆ ಹಿಡಿತದಲ್ಲಿರಲಿ: ಇರಾನ್ ಪರಮೋಚ್ಛ ನಾಯಕನಿಗೆ ಟ್ರಂಪ್ ಎಚ್ಚರಿಕೆ!

ಇರಾನ್-ಅಮೆರಿಕ ನಾಯಕರ ನಡುವೆ ಮತ್ತೆ ಶುರುವಾದ ವಾಕ್ಸಮರ| ಇರಾನ್ ಪರಮೋಚ್ಛ ನಾಯಕನಿಗೆ ಮಾತಿನ ಛಾಟಿ ಬೀಸಿದ ಅಮೆರಿಕ ಅಧ್ಯಕ್ಷ| ಫ್ರಾನ್ಸ್, ಬ್ರಿಟನ್, ಜರ್ಮನಿ ರಾಷ್ಟ್ರಗಳು ಅಮೆರಿಕದ ದಾಸ ಎಂದ ಅಯುತೊಲ್ಲಾ ಅಲಿ ಕಮೇನಿ| ಮಾತಿನ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದ ಡೋನಾಲ್ಡ್ ಟ್ರಂಪ್|

After Iran Supreme Leader Takes Dig At US Allies Trump Says Careful
Author
Bengaluru, First Published Jan 18, 2020, 3:55 PM IST
  • Facebook
  • Twitter
  • Whatsapp

ವಾಷಿಂಗ್ಟನ್(ಜ.18): ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದ ತಣ್ಣಗಾಗಿದೆ ಎಂದು ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲೇ, ಇರಾನ್-ಅಮೆರಿಕದ ಪರಮೋಚ್ಛ ನಾಯಕರ ನಡುವೆ ಮತ್ತೆ ಮಾತಿನ ಸಮರ ಶುರುವಾಗಿರುವುದು ಆತಂಕ ಮೂಡಿಸಿದೆ.

ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ರಾಷ್ಟ್ರಗಳು ಅಮೆರಿಕದ ದಾಸರಾಗಿರುವುದು ದುರಂತ ಎಂದು ಇರಾನ್ ಪರಮೋಚ್ಛ ನಾಯಕ ಅಯುತೊಲ್ಲಾ ಅಲಿ ಕಮೇನಿ ಗುಡುಗಿದ್ದಾರೆ.

The threat of the French & German govts & the vicious British govt to send Iran's case to the Security Council proved once again that they are the footmen of the US. These 3 countries are the ones who helped Saddam as much as they could in his war against us.

— Khamenei.ir (@khamenei_ir) January 17, 2020

ಇರಾನ್-ಅಮೆರಿಕ ನಡುವಿನ ಬಿಗುವಿನ ವಾತಾವರಣದ ಸಮಯದಲ್ಲಿ ಈ ಮೂರು ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ಪರವಾಗಿ ನಿಂತಿದ್ದನ್ನು ಖಂಡಿಸಿರುವ ಕಮೇನಿ, ದುಷ್ಟ ರಾಷ್ಟ್ರದ ದಾಸರಾಗಬೇಡಿ ಎಂದು ಹರಿಯಾಯ್ದಿದ್ದಾರೆ.

ಇನ್ನು ಇರಾನ್ ಪರಮೋಚ್ಛ ನಾಯಕರ ಹೇಳಿಕೆಗೆ ಕೆಂಡಾಮಂಡಲವಾಗಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಆಡುವ ಮಾತಿನ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದ್ದಾರೆ.

The so-called “Supreme Leader” of Iran, who has not been so Supreme lately, had some nasty things to say about the United States and Europe. Their economy is crashing, and their people are suffering. He should be very careful with his words!

— Donald J. Trump (@realDonaldTrump) January 17, 2020

ಈ ಕುರಿತು ಟ್ವೀಟ್ ಮಾಡಿರುವ ಡೋನಾಲ್ಡ್ ಟ್ರಂಪ್, ಅಮೆರಿಕ ಮತ್ತು ಯುರೋಪ್ ಕುರಿತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಮೇನಿ ಅವರನ್ನು ಒತ್ತಾಯಿಸಿದ್ದಾರೆ. 

ಅಮೆರಿಕ, ಇರಾನ್‌ ನಡುವಿನ ಯುದ್ಧೋನ್ಮಾದ ಥಂಡಾ

ಇರಾನ್ ಆರ್ಥಿಕತೆ ಕುಸಿಯುತ್ತಿದ್ದು, ಆ ದೇಶದ ಜನ ಸಂಕಷ್ಟದಲ್ಲಿದ್ದಾರೆ. ಇವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು  ಇರಾನ್ ನಾಯಕರು ನಾಟಕವಾಡುತ್ತಿದ್ದಾರೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.

Follow Us:
Download App:
  • android
  • ios