Asianet Suvarna News Asianet Suvarna News

ತಾಲಿಬಾನ್‌ ಬೆಂಬಲಿತ ಮಾಹಿತಿಗೆ ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ನಿಷೇಧ!

* ತಾಲಿಬಾನ್‌ ಮತ್ತು ತಾಲಿಬಾನ್‌ ಬೆಂಬಲಿಸುವ ಎಲ್ಲಾ ಅಂಶಗಳಿಗೆ ನಿಷೇಧ

* ತಾಲಿಬಾನ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವುದಾಗಿ ಹೇಳಿಕೆ

* ಉಗ್ರರಿಗೆ ಸಂಬಂಧಿಸಿದಂತೆ ಪ್ರಕಟವಾಗುವ ಅಂಶಗಳ ಮೇಲೆ ನಿಗಾಕ್ಕೆ ಅಷ್ಘಾನಿಸ್ತಾನಕ್ಕೆ ಮೀಸಲಾದ ತಜ್ಞರ ತಂಡ 

Afghanistan Facebook whatsapp continues ban of Taliban-related content pod
Author
Bangalore, First Published Aug 18, 2021, 11:01 AM IST

ಲಂಡನ್‌(ಆ.18): ತಾಲಿಬಾನ್‌ ಮತ್ತು ತಾಲಿಬಾನ್‌ ಬೆಂಬಲಿಸುವ ಎಲ್ಲಾ ಅಂಶಗಳನ್ನು ತನ್ನ ವೇದಿಕೆಯಿಂದ ಫೇಸ್‌ಬುಕ್‌ ನಿಷೇಧಿಸಿದೆ. ಅಲ್ಲದೆ ತಾಲಿಬಾನ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವುದಾಗಿ ಅದು ಹೇಳಿದೆ. ಅಲ್ಲದೆ ಉಗ್ರರಿಗೆ ಸಂಬಂಧಿಸಿದಂತೆ ಪ್ರಕಟವಾಗುವ ಅಂಶಗಳ ಮೇಲೆ ನಿಗಾಕ್ಕೆ ಅಷ್ಘಾನಿಸ್ತಾನಕ್ಕೆ ಮೀಸಲಾದ ತಜ್ಞರ ತಂಡ ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ. ಹಲವು ವರ್ಷಗಳಿಂದ ತನ್ನ ಸಂದೇಶಗಳನ್ನು ಹರಡಲು ತಾಲಿಬಾನ್‌ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದೆ.

‘ತಾಲಿಬಾನ್‌ ಅನ್ನು ಅಮೆರಿಕ ಕಾನೂನಿನಡಿಯಲ್ಲಿ ಭಯೋತ್ಪಾದನಾ ಸಂಘಟನೆ ಎಂದು ನಿರ್ಧರಿಸಲಾಗಿದೆ. ಸಂಸ್ಥೆಯ ಅಪಾಯಕಾರಿ ನೀತಿಗಳ ಅಡಿಯಲ್ಲಿ ನಾವು ಅವರನ್ನು ನಿಷೇಧಿಸಿದ್ದೇವೆ. ಇದರ ಅರ್ಥ ತಾಲಿಬಾನ್‌ ಅಥವಾ ಅವರ ಪರವಾಗಿ ಕೆಲಸ ಮಾಡುವವರ ಖಾತೆಯನ್ನು ಫೇಸ್‌ಬುಕ್‌ನಿಂದ ತೆಗೆದುಹಾಕುತ್ತೇವೆ. ತಾಲಿಬಾನಿಗಳ ಪ್ರಶಂಸೆ, ಬೆಂಬಲ, ಪ್ರಾತಿನಿಧ್ಯವನ್ನು ನಿಷೇಧಿಸುತ್ತೇವೆ.

ನಾವು ಅಷ್ಘಾನಿಸ್ತಾನಕ್ಕೆ ಮೀಸಲಾದ ಪರಿಣಿತರ ತಂಡವನ್ನು ಹೊಂದಿದ್ದು ಅವರು ಅಲ್ಲಿನ ಸ್ಥಳೀಯ ದರಿ ಮತ್ತು ಪಷ್ತೋ ಭಾಷೆಗಳನ್ನು ತಿಳಿದಿದ್ದು ಸ್ಥಳೀಯ ಜ್ಞಾನವನ್ನು ಹೊಂದಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ ಹಂಚಲಾಗುವ ಕಂಟೆಂಟ್‌ಗಳನ್ನು ತೆಗೆದುಹಾಕುತ್ತಾರೆ ಎಂದು ಫೇಸ್‌ಬುಕ್‌ನ ವಕ್ತಾರರು ಹೇಳಿದ್ದಾರೆ. ಈ ನೀತಿಯು ಫೇಸ್‌ಬುಕ್‌ ಒಡೆತನದ ಉಳಿದ ಸಾಮಾಜಿಕ ಜಾಲತಾಣಗಳಾದ ಇನ್ಸಾ$್ಟಗ್ರಾಮ್‌ ಮತ್ತು ವಾಟ್ಸ್‌ಆ್ಯಪ್‌ಗೂ ಅನ್ವಯಿಸುತ್ತದೆ ಎಂದು ಫೇಸ್‌ಬುಕ್‌ ಹೇಳಿದೆ.

Follow Us:
Download App:
  • android
  • ios