Asianet Suvarna News Asianet Suvarna News

ಎಟಿ​ಎಂನಲ್ಲಿ ಹಣ​ವಿಲ್ಲ, ಸಂಬ​ಳವೂ ಇಲ್ಲ: ಅಫ್ಘನ್ನರ ಗೋಳು!

* ತಾಲಿ​ಬಾನ್‌ ಆಡ​ಳಿತದಿಂದ ಅಷ್ಘಾ​ನಿ​ಸ್ತಾ​ನ​ದಲ್ಲಿ ಜನರ ಪರ​ದಾ​ಟ

* ಹಣಕ್ಕಾಗಿ ಬ್ಯಾಂಕ್‌ ಮುಂದೆ ನೂರಾರು ನಾಗರಿಕರ ಪ್ರತಿಭಟನೆ

Afghanistan crisis ATMs in Kabul closed  residents struggle to fulfill basic needs pod
Author
Bangalore, First Published Aug 29, 2021, 8:46 AM IST

ಕಾಬೂಲ್‌(ಆ.29): ತಾಲಿ​ಬಾ​ನಿ​ಗಳು ಅಷ್ಘಾ​ನಿ​ಸ್ತಾ​ನ​ವನ್ನು ವಶಕ್ಕೆ ಪಡೆ​ಯು​ತ್ತಿ​ದ್ದಂತೆಯೇ ದೇಶ​ದಲ್ಲಿ ಸೂಕ್ತ ಆಡ​ಳಿ​ತ​ವಿ​ಲ್ಲದೇ ಭಾರೀ ಹಾಹಾ​ಕಾರ ಸೃಷ್ಟಿ​ಯಾ​ಗು​ತ್ತಿದೆ. ಅತ್ತ ಎಟಿಎಂ, ಬ್ಯಾಂಕ್‌​ಗ​ಳಲ್ಲಿ ಹಣವೂ ಸಿಗದೇ ಇತ್ತ ಸರಿ​ಯಾಗಿ ಸಂಬಳವೂ ಸಿಗದೇ ಸಾವಿ​ರಾರು ಜನರು ಪರ​ದಾಡುತ್ತಿ​ದ್ದಾ​ರೆ.

"

ತಾಲಿ​ಬಾನ್‌ ಆಳ್ವಿಕೆ ಆರಂಭ​ವಾದ ನಂತರ ಮುಚ್ಚಿದ್ದ ಬ್ಯಾಂಕ್‌​ಗಳು 3 ದಿನದ ಹಿಂದೆ ತೆರೆ​ದಿವೆ. ಹೀಗಾಗಿ ಹಣ ಸಿಗ​ಬ​ಹುದು ಎಂಬ ಆಸೆ​ಯಿಂದ ಬಂದಿದ್ದ ಜನ​ರಿಗೆ ನಿರಾಸೆ ಕಾದಿ​ದೆ. ಜನರು ಹಣಕ್ಕಾಗಿ ಸಾಲುಗಟ್ಟಿನಿಂತ​ರೂ, ಯಂತ್ರ​ಗ​ಳಲ್ಲಿ ದುಡ್ಡು ಖಾಲಿ ಆಗಿ ಹಣ ಸಿಗ​ಲಿಲ್ಲ. ಇದೇ ವೇಳೆ, ಹೆಚ್ಚಿನ ಜನರಿಗೆ ಹಣ ಒದಗಿಸಬೇಕು ಎಂಬ ಉದ್ದೇ​ಶ​ದಿಂದ ಎಟಿಎಂನಲ್ಲಿ ಹಣ ತೆಗೆಯುವುದಕ್ಕೆ ಮಿತಿ ಹೇರಲಾಗಿದೆ. ಆದ್ದರಿಂದ ಜನರು ಬ್ಯಾಂಕುಗಳ ಮುಂದೆ ಜನ ಪ್ರತಿಭಟನೆ ಆರಂಭಿ​ಸಿ​ದ್ದಾ​ರೆ.

ಇದೇ ವೇಳೆ, ಕಳೆದ 3ರಿಂದ 6 ತಿಂಗ​ಳ​ವ​ರೆಗೆ ತಮಗೆ ಸಂಬಳ ದೊರೆ​ತಿಲ್ಲ ಎಂದು ಸರ್ಕಾರಿ ನೌಕ​ರರು ಆರೋ​ಪಿ​ಸಿ​ದ್ದಾರೆ. ಇದು ದೇಶದ ದುಃಸ್ಥಿ​ತಿಯ ದ್ಯೋತ​ಕ​ವಾ​ಗಿ​ದೆ.

ಇತ್ತೀ​ಚೆಗೆ ತಾಲಿ​ಬಾನ್‌ ಆಡಳಿತ ಶುರು ಮಾಡಿದ ನಂತರ ದೇಶದ ವ್ಯವಸ್ಥೆ ಕುಸಿ​ದು​ಬಿ​ದ್ದಿದ್ದು, ಆಹಾರ ಪೂರೈಕೆ ಕೂಡ ವ್ಯತ್ಯಾಸ​ವಾ​ಗಿತ್ತು. ಇದ​ಲ್ಲದೇ, ದೇಶ​ದಲ್ಲಿ ಭೀಕರ ಬರ​ಗಾಲ ಸೃಷ್ಟಿಆಗ​ಬ​ಹುದು ಎಂದು ವಿಶ್ವ​ಸಂಸ್ಥೆ ಇತ್ತೀ​ಚೆಗೆ ಮುನ್ನೆ​ಚ್ಚ​ರಿಕೆ ನೀಡಿದೆ. ಹೀಗಾಗಿ ಮುಂದಿನ ಪರಿ​ಸ್ಥಿತಿ ಇನ್ನಷ್ಟುಭೀಕ​ರ​ವಾ​ಗುವ ಆತಂಕ ಎದು​ರಾ​ಗಿ​ದೆ.

Follow Us:
Download App:
  • android
  • ios