ಅಮೆರಿಕ ದಾಳಿ ಎಚ್ಚರಿಕೆ ಬೆನ್ನಲ್ಲೆ ಕಾಬೂಲ್ ನಗರದ ಮೇಲೆ ರಾಕೆಟ್ ದಾಳಿ ಕಾಬೂಲ್ ವಿಮಾನ ನಿಲ್ದಾಣದ ಸನಿಹದಲ್ಲಿರುವ ಮನೆಗೆ ನುಗ್ಗಿದ ರಾಕೆಟ್ ಸದ್ಯದ ವರದಿ ಪ್ರಕಾರ ಇಬ್ಬರು ಸಾವು, ಹಲವರು ಗಾಯ ರಾಕೆಟ್ ದಾಳಿ ಬೆನ್ನಲ್ಲೇ ಮಕ್ಕಳು, ಮಹಿಳೆಯರು ಚೀರಾಡುತ್ತಾ ಹೊರಬಂದ ವಿಡಿಯೋ
ಕಾಬೂಲ್(ಆ.29): ತಾಲಿಬಾನ್ ಉಗ್ರರ ಕೈಯಲ್ಲಿ ಆಫ್ಘಾನಿಸ್ತಾನ ಆಡಳಿತ ಇರುವಾಗ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ. ಉಗ್ರರ ಆಡಳಿತದಲ್ಲಿ ಮತ್ತೊಂದು ಗುಂಪಿನ ಉಗ್ರರ ದಾಳಿ ನಡೆಯುತ್ತಲೇ ಇದೆ. ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಾಬೂಲ್ ವಿಮಾನ ನಿಲ್ದಾಣ ಸನಿಹದಲ್ಲಿ ರಾಕೆಟ್ ದಾಳಿಯಾಗಿದೆ. ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಕಾಬೂಲ್‌ನಲ್ಲಿ ಬಾಂಬ್ ಸ್ಫೋಟದ ಶಬ್ದ; ಮತ್ತೆ ಉಗ್ರರ ದಾಳಿ ಶಂಕೆ!
ಕಾಬೂಲ್ ವಿಮಾನ ನಿಲ್ದಾಣದ ಸನಿಹದಲ್ಲಿರುವ ಮನೆಗಳ ಮೇಲೆ ರಾಕೆಟ್ ದಾಳಿಯಾಗಿದೆ. ರಾಕೆಟ್ ದಾಳಿಯಾದ ಬೆನ್ನಲ್ಲೇ ಅಕ್ಕ ಪಕ್ಕದ ಮನೆಯಿಂದ ಚೀರಾಡುತ್ತಾ ಮಕ್ಕಳು, ಮಹಿಳೆಯರು ಹೊರಗೆ ಓಡಿಬಂದಿದ್ದಾರೆ. ಮನೆ ಧಗಧಗಿಸಿ ಹೊತ್ತಿ ಉರಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ದಾಳಿ ಹಿಂದೆ ಯಾರಿದ್ದಾರೆ ಅನ್ನೋದು ತನಿಖೆ ನಡೆಸಲು ಆಫ್ಘಾನಿಸ್ತಾನದಲ್ಲಿ ಯಾವುದೇ ಸರ್ಕಾರಿ ಎಜೆನ್ಸಿಗಳು ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲವೂ ತಾಲಿಬಾನ್ ಆಡಳಿತ. ಹೀಗಾಗಿ ರಾಕೆಟ್ ದಾಳಿಯಿಂದ ಉಂಟಾದ ನಷ್ಟದ ಕುರಿತು ಸ್ಪಷ್ಟ ವರದಿ ಲಭ್ಯವಾಗುತ್ತಿಲ್ಲ.
36 ಗಂಟೆಯಲ್ಲಿ ಸೇಡು ತೀರಿಸಿದ ಅಮೆರಿಕ: ಐಸಿಸ್ ಕೆ ಮೇಲೆ ಏರ್‌ಸ್ಟ್ರೈಕ್!
ಕಾಬೂಲ್ ಮೇಲೆ ದಾಳಿ ಕುರಿತು ಅಮೆರಿಕ ಎಚ್ಚರಿಕೆ ನೀಡಿತ್ತು. 36 ಗಂಟೆಗಳಲ್ಲಿ ಕಾಬೂಲ್ ಮೇಲೆ ದಾಳಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅಮೆರಿಕನ್ನರು ತಕ್ಷಣವೇ ಆಫ್ಘಾನಿಸ್ತಾನ ತೊರೆಯಲು ಸೂಚನೆ ನೀಡಲಾಗಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ದಾಳಿಯಾಗಿದೆ.
ನೀರಿನ ಬಾಟಲಿಗೆ 3,000 ರೂ, ಒಂದು ಪ್ಲೇಟ್ ಊಟಕ್ಕೆ 7,400 ರೂ; ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ!
ಕಾಬೂಲ್ ವಿಮಾನ ನಿಲ್ದಾಣದ ಗೇಟ್ ಬಳಿ ಆತ್ಮಾಹುತಿ ಬಾಂಬ್ ದಾಳಿಗೆ 169 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ 13 ಅಮೆರಿಕ ಸೈನಿಕರು ಸೇರಿದ್ದಾರೆ. ಈ ದಾಳಿ ಹೊಣೆಯನ್ನು ಐಸಿಸ್ ಕೆ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಐಸಿಸ್ ಕೆ ಉಗ್ರರ ಮೇಲೆ ಡ್ರೋನ್ ದಾಳಿ ನಡೆಸಿತ್ತು.
