Asianet Suvarna News Asianet Suvarna News

ಕುಟುಂಬದ ಹೊಟ್ಟೆ ತುಂಬಿಸಲು 9 ವರ್ಷದ ಹೆತ್ತ ಮಗಳ ಮಾರಾಟ.. ಅಫ್ಘಾನ್‌ನಲ್ಲಿ ಎಂತಾ ಸ್ಥಿತಿ!

* ತಾಲೀಬಾನ್ ಆಡಳಿತದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯ
* ಪುಡಿಗಾಸಿಗೆ ಮನೆ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಪೋಷಕರು
* ಆಹಾರ ಮತ್ತು ವಸತಿಗಾಗಿ ಹಾಹಾಕಾರ
* ನಾವು ಬದಲಾಗಿದ್ದೇವೆ ಎಂದಿದ್ದ ತಾಲೀಬಾನಿಗಳು 

Afghan man sells 9-year-old daughter to keep family alive mah
Author
Bengaluru, First Published Nov 2, 2021, 10:40 PM IST

ಕಾಬೂಲ್(ನ. 02)  ಅಫ್ಘಾನಿಸ್ತಾನ (Afghanistan) ತಾಲೀಬಾನಿಗಳ (Taliban) ಕೈವಶವಾದ ಮೇಲೆ ಅಲ್ಲಿನ ನಾಗರಿಕರ ಪರಿಸ್ಥಿತಿ ಶೋಚನಿಯವಾಗಿ ಹೋಗಿದೆ. ಕುಟುಂಬದ ಹೊಟ್ಟೆ ತುಂಬಿಸಲು ಹೆತ್ತ ತಂದೆಯೇ ಮಗಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ಬಂದು ತಲುಪಿದ್ದಾನೆ.

ಇದು ಒಂಭತ್ತು ವರ್ಷದ ಬಾಲಕಿ ಪರ್ವಾನಾ ಮಲ್ಲಿಕ್ ದುರಂತ ಕತೆ.  ಬಾಲಕಿಯನ್ನು(Girl) ಆಕೆಯ ಕುಟುಂಬದವರು  55   ವರ್ಷದ ವ್ಯಕ್ತಿ ಕುರುಬಾನ್ ಎಂಬಾತನಿಗೆ ಮಾರಾಟ ಮಾಡುತ್ತಾರೆ. ಈ ಘಟನೆ ನಡೆದು ಒಂದು ತಿಂಗಳು ಕಳೆದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ತಾಲೀಬಾನ್ ದೇಶವನ್ನು ವಶಪಡಿಸಿಕೊಂಡ ನಂತಯ ಬಾಲಕಿಯ ಕುಟುಂಬದ ಎಂಟು  ಜನರು ಪ್ರತಿದಿನದ ಆಹಾರಕ್ಕಾಗಿ ಪರಿತಪಿಸಬೇಕಾದ ಸ್ಥಿತಿಗೆ ಬಂದಿದ್ದರು. ಕುಟುಂಬದ ಹೊಟ್ಟೆ ತುಂಬಿಸಲು ಹೆತ್ತ ತಂದೆಯೇ ಮಗಳನ್ನು ಮಾರಾಟ ಮಾಡಿದ್ದಾನೆ.

ಸಂದರ್ಶನವೊಂದರಲ್ಲಿ ನೋವಿನಿಂದಲೇ ಮಾತನಾಡಿದ ತಂದೆ ಕೆಲ ತಿಂಗಳುಗಳ ಹಿಂದೆ ಹನ್ನೆರಡು ವರ್ಷದ ಮಗಳನ್ನು ಮಾರಾಟ  ಮಾಡಿದ್ದೆ. ಕುಟುಂಬದ ಹೊಟ್ಟೆ ತುಂಬಿಸಲು.. ಬದುಕಲು ಅನಿವಾರ್ಯವಾಗಿದೆ ಎಂದಿದ್ದಾರೆ. ಕಣ್ಣೀರು ತುಂಬಿಕೊಂಡೆ ಮಾತನಾಡುತ್ತಾರೆ. ಪಶ್ಚಾತಾಪದ ನೋವು ಅವರಲ್ಲಿದೆ.

ಮಾರಾಟಕ್ಕೆ ಒಳಗಾಗಿರುವ ಮಗಳು ನಾನು ಶಿಕ್ಷಣ ಪಡೆದುಕೊಂಡು ಒಬ್ಬ ಶಿಕ್ಷಕಿ ಆಗಬೇಕು ಎಂಬ ಕಸನು ಇಟ್ಟುಕೊಂಡಿದ್ದೆ.  ಆದರೆ ಎಲ್ಲವೂ ತಲೆಕೆಳಗಾಯಿತು, ವೃದ್ಧನನ್ನು ಮದುವೆಯಾಗು ಎಂದು ನನ್ನ ಕುಟುಂಬವೇ ಒತ್ತಾಯ ಮಾಡುತ್ತಿದೆ ಎಂದು ಹೇಳಿಕೊಂಡಿದ್ದರು.

ಮದುವೆ ಕಾರ್ಯಕ್ರಮದಲ್ಲಿ ಸಂಗೀತ; ಹದಿಮೂರು ಜನರ ಕೊಂದ ತಾಲೀಬಾನ್

ಮಾತುಕತೆಯ ನಂತರ ಮನೆಗೆ ಬಂದ ಕುರುಬಾನ್ 200,000 Afghanis ನೀಡಿ (ಅಂದಾಜು 2,200 ಡಾಲರ್) ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. 

ಇಲ್ಲಿಗೆ ಪ್ರಕರಣಗಳ ಸರಮಾಲೆ ನಿಲ್ಲುವುದಿಲ್ಲ. ಅನೇಕ ಕುಟುಂಬಗಳು ಆಹಾರ, ವಸತಿಗಾಗಿ ಮನೆ ಮಕ್ಕಳನ್ನು ಮದುವೆ ಹೆಸರಿನಲ್ಲಿ ಮಾರಾಟ ಮಾಡುತ್ತಿವೆ. ಇನ್ನೊಂದು ಕಡೆ  ಇದ್ಯಾವುದು ಗೊತ್ತಿಲ್ಲ ಎಂಬಂತೆ ತಾಲೀಬಾನಿಗಳು ಅಧಿಕಾರ ಚಲಾಯಿಸುತ್ತಿದ್ದಾರೆ.

ಎಲ್ಲಿ ಬದಲಾವಣೆ?; ಅಮೆರಿಕದ ಕೈಯಿಂದ ಅಧಿಕಾರ ವಶಕ್ಕೆ ಪಡೆದುಕೊಂಡ ತಾಲೀಬಾನಿಗಳು ನಾವು  ಹಿಂದಿನಂತೆ ಇಲ್ಲ. ಬದಲಾಗಿದ್ದೇವೆ.. ಮಹಿಳೆ  ಮತ್ತು ಮಕ್ಕಳ ಹಕ್ಕು ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದರು.  ಆದರೆ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಆಗಲೇ ಇಲ್ಲ. ಮಹಿಳೆಯರನ್ನು ಶಿಕ್ಷಣದಿಂದ ದೂರ ಇರಿಸುವಂತಹ ಕಾನೂನು ಜಾರಿಯಾದವು. 

Follow Us:
Download App:
  • android
  • ios