ನವದೆಹಲಿ(ಮೇ 12)  ಇಸ್ರೇಲ್ ಮತ್ತು  ಪ್ಯಾಲೆಸ್ಟೇನ್ ಗಡಿಯಲ್ಲಿ ಸಂಘರ್ಷ ನಡೆಯುತ್ತಲೇ ಇದೆ.  ಪ್ಯಾಲೆಸ್ಟೇನ್ ಮನೆಗಳನ್ನು ನೆಲಸಮ ಮಾಡಲಾಗಿದೆ ಮತ್ತು ಅಲ್-ಅಕ್ಸಾ ಮಸೀದಿಯ ಮೇಲೆ ದಾಳಿಯಾಗಿದೆ ಎಂಬ ವರದಿಗಳ ನಂತರ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇಸ್ರೇಲ್ ನ್ನು ಉಗ್ರಗಾಮಿ ದೇಶ ಎಂದು ಕರೆದಿದ್ದರು.  ಇದೇ ಕಾರಣಕ್ಕೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಪ್ಯಾಲೆಸ್ಟೇನ್  ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇಸ್ರೇಲ್ ‘ವರ್ಣಭೇದ ನೀತಿ’ ಅನುಸರಿಸುತ್ತಿದೆ ಎಂದು ನಟಿ ಆರೋಪಿಸಿದ್ದರು. ಇದ್ಕಕೆ ಪ್ರತಿಯಾಗಿ ನಟಿಯನ್ನು ಟ್ರೋಲಿಗರು ತರಾಟೆಗೆ ತೆಗೆದುಕೊಂಡು ನಿಮಗೆ ಯಾರು ಉಗ್ರರು ಎನ್ನುವುದು ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇಸ್ರೇಲ್ ಮೇಲೆ ರಾಕೆಟ್ ದಾಳಿ; ಕೇರಳ ಮಹಿಳೆ ಸಾವು

ಈ ಹೋರಾಟಕ್ಕೆ ಇಸ್ಲಾಂ ಕಾರಣವಲ್ಲ.  ಸಾಮ್ರಾಜ್ಯಶಾಹಿ ನೀತಿ ವಿರುದ್ಧದ ಹೋರಾಟ,  ವಸಾಹತು ವಿರೋಧಿ ಮತ್ತು ವರ್ಣಭೇದ ನೀತಿ ವಿರೋಧಿ ಹೋರಾಟ ಎಂದೆಲ್ಲ ಬಣ್ಣಿಸಿದ್ದು ನಾಗರಿಕರ ಕೆಂಗಣ್ಣಿಗೆ  ಗುರಿಯಾಯಿತು.

 

"