ಧೂಮಪಾನ ತ್ಯಜಿಸಲು ವಿಫಲನಾದ ಟರ್ಕಿಶ್ ವ್ಯಕ್ತಿ ಇಬ್ರಾಹಿಂ ಯುಸೆಲ್, ಹೆಂಡತಿಯ ಸಹಾಯದಿಂದ ತಲೆಗೆ ಪಂಜರ ಹಾಕಿಕೊಂಡಿದ್ದಾನೆ. ಊಟದ ವೇಳೆ ಮಾತ್ರ ಪಂಜರ ತೆಗೆಯಲಾಗುತ್ತದೆ. ಈ ವಿಚಿತ್ರ ಉಪಾಯ ವೈರಲ್ ಆಗಿದ್ದು, ಧೂಮಪಾನದ ದುಷ್ಪರಿಣಾಮಗಳ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಯಶಸ್ಸಿನ ಬಗ್ಗೆ ಖಚಿತ ಮಾಹಿತಿ ಇಲ್ಲ.

ಈ ಮೇಲಿನ ಚಿತ್ರ ನೋಡಿದ್ದರೆ ಒಮ್ಮೆ ಗಾಬರಿಯಾಗೋದು ಗ್ಯಾರೆಂಟಿ. ಇದರಲ್ಲಿ ಪಂಜರದ ಒಳಗೆ ಗಂಡನ ತಲೆ ಇದ್ದರೆ, ಅದರ ಕೀಲಿ ಪತ್ನಿಯ ಬಳಿ ಇದೆ. ಪತ್ನಿ ಬಯಸಿದ್ರೆ ಮಾತ್ರ ಕೀಲಿ ಓಪನ್​ ಆಗುತ್ತೆ. ಇದಕ್ಕೆ ಕಾರಣ ಮಾತ್ರ ಅಷ್ಟೇ ಕುತೂಹಲವೂ, ವಿಚಿತ್ರವೂ ಆಗಿದೆ. ಒಂದು ವೇಳೆ ನೀವೇನಾದ್ರೂ ಪುರುಷ ಆಗಿದ್ರೆ ಇದರ ಬಗ್ಗೆ ಓದಿದ್ರೆ ಖಂಡಿತವಾಗಿಯೂ ಪತ್ನಿಗೆ ಹೇಳಲ್ಲ, ಪತ್ನಿ ಓದಿದ್ರೆ ನಿಮಗೆ ಅಪಾಯ ಕಟ್ಟಿಟ್ಟದ್ದೇ! ಅಷ್ಟಕ್ಕೂ ಇದು ಮಾಡ್ತಿರೋದು ಗಂಡನ ಸ್ಮೋಕಿಂಗ್​ ಬಿಡಿಸುವುದಕ್ಕಾಗಿ! ಧೂಮಪಾನದಿಂದ ಪ್ರಾಣಕ್ಕೆ ಸಂಚಕಾರ ಎನ್ನುವುದು ಗೊತ್ತಿದ್ದರೂ ಅದನ್ನು ಮಾಡುವವರಿಗೇನೂ ಕಮ್ಮಿ ಇಲ್ಲ. ಸರಣಿ ಧೂಮಪಾನ ಮಾಡುವವರ ಸಂಖ್ಯೆಯೂ ಬಹು ದೊಡ್ಡದೇ ಇದೆ.

ಈ ಸ್ಮೋಕಿಂಗ್​ಗೆ ಬೇಸತ್ತ ಪತ್ನಿಯೊಬ್ಬಳು ಈ ರೀತಿ ಐಡಿಯಾ ಮಾಡಿದ್ದಾಳೆ! ಧೂಮಪಾನವನ್ನು ತ್ಯಜಿಸುವುದು ತುಂಬಾ ಕಷ್ಟ, ಅಪಾರ ಇಚ್ಛಾಶಕ್ತಿ ಮತ್ತು ಸಮರ್ಪಣೆಯ ಅಗತ್ಯವಿರುತ್ತದೆ. ಗಮನಾರ್ಹ ಪ್ರಯತ್ನಗಳ ಹೊರತಾಗಿಯೂ, ಧೂಮಪಾನಿಗಳಲ್ಲಿ ಕೇವಲ ಒಂದು ಸಣ್ಣ ಶೇಕಡಾವಾರು ಜನರು ಮಾತ್ರ ತಮ್ಮ ವ್ಯಸನವನ್ನು ಯಶಸ್ವಿಯಾಗಿ ನಿವಾರಿಸಿಕೊಂಡಿದ್ದಾರೆ. ಅದಕ್ಕಾಗಿ ಪತ್ನಿ ಈಗ ಹೊಸ ಮಾರ್ಗ ಕಂಡುಕೊಂಡಿದ್ದಾಳೆ. ಅದೇ ಇದು. ಧೂಮಪಾನವನ್ನು ತ್ಯಜಿಸಲು ಪ್ರಯತ್ನಿಸುತ್ತಿದರೂ ಗಂಡನಿಗೆ ಅದು ಸಾಧ್ಯವಾಗಿಲ್ಲದ ಕಾರಣ, ಹೆಂಡತಿ ಆತನ ಮುಖವನ್ನು ಪಂಜರದಿಂದ ಮುಚ್ಚಿ ತನ್ನ ಬಳಿ ಕೀಲಿ ಕೈ ಇರಿಸಿಕೊಂಡಿದ್ದಾಳೆ. ಊಟದ ಸಮಯದಲ್ಲಿ ಮಾತ್ರ ಕೀಲಿಕೈಯನ್ನು ಓಪನ್​ ಮಾಡಿ ಊಟ ಹಾಕಿ ಮತ್ತೆ ಪಂಜರದಲ್ಲಿ ಮುಖ ಇರಿಸುತ್ತಾಳೆ! 

ಹೆಂಡ್ತಿ ಒಡವೆ ಕೇಳಿದ್ರೆ 'ಈ ತಿಂಗಳು ಆಗಲ್ಲ' ಅನ್ನೋ ಗಂಡಂದಿರು ನೋಡಬೇಕಾದ ವಿಡಿಯೋ ಇದು!

ಅಷ್ಟಕ್ಕೂ ಇದು ಕೆಲ ವರ್ಷಗಳ ಹಿಂದಿನ ಘಟನೆಯಾಗಿದ್ದು, ಮತ್ತೆ ವೈರಲ್​ ಆಗುತ್ತಿದೆ. ಇಬ್ರಾಹಿಂ ಯುಸೆಲ್ ಎಂಬ ಟರ್ಕಿಶ್ ವ್ಯಕ್ತಿ ಸಿಗರೇಟ್ ತ್ಯಜಿಸಲು ಹೆಲ್ಮೆಟ್ ಆಕಾರದ ಲೋಹದ ಚೆಂಡಿನಲ್ಲಿ ತನ್ನನ್ನು ಪಂಜರದಲ್ಲಿ ಬಂಧಿಸಿಕೊಂಡಿದ್ದಾನೆ. ಇಬ್ರಾಹಿಂ ಯುಸೆಲ್ ಕಳೆದ 26 ವರ್ಷಗಳಿಂದ ಧೂಮಪಾನದ ಅಭ್ಯಾಸ ಹೊಂದಿದ್ದ. ಇದನ್ನು ಬಿಡಲು ಹಲವಾರು ಪ್ರಯತ್ನಗಳ ಹೊರತಾಗಿಯೂ, ಅವನಿಗೆ ದಿನಕ್ಕೆ ಎರಡು ಪ್ಯಾಕ್‌ಗಳು ಬೇಕೇ ಬೇಕಾಗಿತ್ತು. ಪ್ರತಿ ವರ್ಷ, ತನ್ನ ಮೂರು ಮಕ್ಕಳ ಜನ್ಮದಿನಗಳು ಮತ್ತು ಅವರ ವಿವಾಹ ವಾರ್ಷಿಕೋತ್ಸವದಂದು ಕಷ್ಟಪಟ್ಟು ಸಿಗರೇಟ್ ತ್ಯಜಿಸುತ್ತಿದ್ದರು ಅದನ್ನು ಬಿಟ್ಟು ಇರಲು ಆಗುತ್ತಿರಲಿಲ್ಲ. ಇದಕ್ಕಾಗಿ ಪತ್ನಿಯ ನೆರವಿನಿಂದ ಈ ಒಂದು ಪ್ಲ್ಯಾನ್​ ಮಾಡಿದ್ದಾನೆ.

ಅವನು ತನ್ನ ತಲೆಯನ್ನು ಪಂಜರದಲ್ಲಿ ಬಂಧಿಸಿ ತನ್ನ ಹೆಂಡತಿಗೆ ತೆರೆಯುವ ಕೀಲಿಯನ್ನು ನೀಡುವ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದರೂ, ಅವನು ಧೂಮಪಾನವನ್ನು ತ್ಯಜಿಸಲು ಸಾಧ್ಯವಾಯಿತು ಅಥವಾ ಇಲ್ಲವೇ ಎಂಬುದಕ್ಕೆ ಇನ್ನೂ ಯಾವುದೇ ಇದುವರೆಗೆ ಪುರಾವೆಗಳು ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ 8 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಂಬಾಕು ಬಳಕೆಯಿಂದ ಸಾಯುತ್ತಾರೆ. ಹೆಚ್ಚಿನ ತಂಬಾಕು ಸಂಬಂಧಿತ ಸಾವುಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. ಧೂಮಪಾನ ಮಾಡದವರಿಗೂ ತಂಬಾಕು ಮಾರಕವಾಗಬಹುದು. ಧೂಮಪಾನಿಗಳು ಬಿಡುವ ಹೊಗೆ ಉಸಿರಾಡುವವರೇ ವಾರ್ಷಿಕವಾಗಿ 1.2 ಮಿಲಿಯನ್ ಮಂದಿ ಸಾಯುತ್ತಿದ್ದಾರೆ. ಸುಮಾರು ಅರ್ಧದಷ್ಟು ಮಕ್ಕಳು ತಂಬಾಕು ಹೊಗೆಯಿಂದ ಕಲುಷಿತಗೊಂಡ ಗಾಳಿಯನ್ನು ಉಸಿರಾಡುತ್ತಾರೆ ಮತ್ತು ಪ್ರತಿ ವರ್ಷ 65 ಸಾವಿರ ಮಕ್ಕಳು ಈ ರೀತಿಯ ಹೊಗೆಯಿಂದ ಸಾವಿಗೀಡಾಗುತ್ತಿದ್ದಾರೆ ಎಂದು ವರದಿಯಾಗಿದೆ.

ರೀಲ್ಸ್​ ಹುಚ್ಚಿಗಾಗಿ ಪ್ರಾಣ ಬಿಟ್ಟ ಮಹಿಳೆ? ಮೈ ಝುಂ ಎನ್ನೋ ವಿಡಿಯೋ ವೈರಲ್​