Asianet Suvarna News Asianet Suvarna News

ನಾಯಿ ಮರಿ ಅಂದಕೊಂಡು ಮನೆಗೆ ತಂದರು : ಬಾತುಕೋಳಿ ತಿಂದಾಗಲೇ ಗೊತ್ತಾಗಿದ್ದು ನರಿ ಎಂದು!

*ನಾಯಿ ಮರಿ ಅಂದುಕೊಂಡು ಮನಗೆ ತಂದಿದ್ದ ಮಾಲೀಕರು
*ಬಾತುಕೊಳಿ, ಗಿನಿ ಹಂದಿಗಳನ್ನು ತಿಂದಿದ್ದ ನಾಯಿ
*ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದ್ದ ನಾಯಿಮರಿ
*ತಾವು ಸಾಕಿದ್ದು ನಾಯಿಮರಿ ಅಲ್ಲ ನರಿ ಎಂದು ತಿಳಿದು ಶಾಕ್

A familys pet dog which killed and ate ducks and chickens has turned out to be a fox mnj
Author
Bengaluru, First Published Nov 20, 2021, 5:41 PM IST

ಪೆರು(ನ.20): ತಾವು ಸಾಕಿದ್ದ ನಾಯಿ ಮರಿ ನರಿ ಎಂದು ತಿಳಿದು ಆತಂತಕ್ಕೊಳಗಾದ ಘಟನೆ ಪೆರುವಿನಲ್ಲಿ ನಡೆದಿದೆ. ಮಾರಿಬೆಲ್ ಸೊಟೆಲೊ (Maribel Sotelo) ಎಂಬ ವ್ಯಕ್ತಿ ಪೆರುವಿನ ಸೆಂಟ್ರಲ್ ಲಿಮಾದಲ್ಲಿನ ಸಣ್ಣ ಅಂಗಡಿಯಿಂದ ಹೊಸ ನಾಯಿಮರಿಯನ್ನು (Dog Puppy) ಖರೀದಿಸಿದ್ದರು. ಇದು ಚಿಕ್ಕ ನಾಯಿ ಎಂದು ಅವರು ನಂಬಿದ್ದರು. ಅದಕ್ಕೆ "ರನ್ ರನ್" (Run Run) ಎಂದು ಹೆಸರಿಟ್ಟಿದ್ದರು. ಆರಂಭದಲ್ಲಿ ನೆರೆಹೊರೆಯ ಇತರ ಸಾಕು ನಾಯಿಗಳೊಂದಿಗೆ ಸಂತೋಷದಿಂದ  ಅದು ಆಟವಾಡಿತ್ತು, ಆದರೆ ಅದು ಬೆಳೆದಂತೆ, ಏನೋ ಸರಿಯಾಗಿಲ್ಲ ಎಂಬ ಚಿಹ್ನೆಗಳು ಹೊರಹೊಮ್ಮಿದವು. ರನ್ ರನ್ ಬಾತುಕೋಳಿಗಳು (Duck) ಮತ್ತು ಕೋಳಿಗಳನ್ನು (Chicken) ಬೆನ್ನಟ್ಟಲು ಮತ್ತು ಕೊಲ್ಲಲು ಪ್ರಾರಂಭಿಸಿತ್ತು. ಇದು ಸ್ಥಳೀಯರ ಕೋಪವನ್ನು ಕೆರಳಿಸಿತ್ತು.

ಕೆಲವು ದಿನಗಳ ನಂತರ ಸೂಕ್ಷವಾಗಿ ಗಮನಿಸಿದಾಗ ಅದು  ಆಂಡಿಯನ್ ನರಿ (Andean fox) ಎಂದು  ಮಾರಿಬೆಲ್‌ಗೆ  ಅರಿವಾಗಿದೆ. ಆಂಡಿಯನ್‌ ನರಿಗಳು ಸಹಜವಾಗಿ  ತೆಳುವಾದ ಕಾಲುಗಳು(Thin leg) , ಪೊದೆ ಬಾಲ, ಮೊನಚಾದ ತಲೆ ಮತ್ತು ಮಧ್ಯಮ ಗಾತ್ರದ ಕಿವಿಗಳನ್ನು ಹೊಂದಿರುತ್ತವೆ.

ಮನೆಯಿಂದ ಓಡಿಹೋಗಿರುವ ರನ್‌ ರನ್!

ರನ್ ರನ್ ಕೆಲವು ದಿನಗಳ ಹಿಂದೆ ಮನೆಯಿಂದ ಓಡಿಹೋಗಿದ್ದು ಅರಣ್ಯ ಪೊಲೀಸರು ಮತ್ತು ರಾಜ್ಯ ರಾಷ್ಟ್ರೀಯ ಅರಣ್ಯ ಮತ್ತು ವನ್ಯಜೀವಿ ಸೇವೆ (SERFOR) ಅಧಿಕಾರಿಗಳು ಈಗ ನರಿಯನ್ನು ವಿಶೇಷ ಕೇಂದ್ರ (animal Centre) ಅಥವಾ ಮೃಗಾಲಯಕ್ಕೆ (Zoo) ಕರೆದೊಯ್ಯಲು ಹುಡುಕುತ್ತಿದ್ದಾರೆ. "ಅವನು ಶುದ್ಧ ತಳಿಯ ನಾಯಿಮರಿ ಎಂದು ನಾವು ಭಾವಿಸಿದ್ದೇವು" ಎಂದು ಮಾರಿಬೆಲ್ ಸೊಟೆಲೊ ಹೇಳಿದ್ದಾರೆ. ಅವರ ಹದಿಹರೆಯದ ಮಗ (son) ಸುಮಾರು ಆರು ತಿಂಗಳ ಹಿಂದೆ $ 13 (ಸುಮಾರು 1 ಸಾವಿರ ರೂಪಾಯಿ) ಕೊಟ್ಟು ಪ್ರಾಣಿಯನ್ನು ಸಾಕುಪ್ರಾಣಿಯಾಗಿ ಖರೀದಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

Russia: ನಾಲ್ಕೂ ಕಾಲು ಕಳೆದುಕೊಂಡಿದ್ದ ಶ್ವಾನ ಮೋನಿಕಾಗೆ ಮರು ಜೀವ ಕೊಟ್ಟ ವೈದ್ಯರು!

"ಅದು ಮೂರು ದೊಡ್ಡ ಗಿನಿ ಹಂದಿಗಳನ್ನು (guinea pigs) ತಿಂದಿದೆ ಎಂದು ಮಹಿಳೆಯೊಬ್ಬರು ನಮಗೆ ಹೇಳಿದರು," ಎಂದು  ಸೊಟೆಲೊ ಪತ್ನಿ ಹೇಳಿದ್ದಾರೆರೆ  ಅಲ್ಲದೇ ಅದಕ್ಕಾಗಿ ಅವರು  ಪ್ರಾಣಿಗಳ ಮಾಲೀಕರಿಗೆ ಹಣ ಕೂಡ ಪಾವತಿಸದ್ದೇವೆ ಎಂದು ತಿಳಿಸಿದ್ದಾರೆ.

ಪ್ರಾಣಿಗಳನ್ನು ಕಾನೂನುಬಾಹಿರವಾಗಿ ಲಿಮಾದಲ್ಲಿ ವ್ಯಾಪಾರ ಮಾಡಲಾಗುತ್ತದೆ!

 ಈ ಬಗ್ಗೆ SERFOR ನಲ್ಲಿನ ಪಶುವೈದ್ಯ (veterinary) ಮತ್ತು ವನ್ಯಜೀವಿ ತಜ್ಞ ವಾಲ್ಟರ್ ಸಿಲ್ವಾ (Walter Silva)  ಲೊರೆಟೊ (Loreto) ಮಾತನಡಿ , ಉಕಯಾಲಿ (ucayali) ಮತ್ತು ಮ್ಯಾಡ್ರೆ ಡಿ ಡಿಯೋಸ್‌ (Madre dI dios) ನಂತಹ ಅಮೆಜಾನಿಯನ್ (Amazon) ಪ್ರದೇಶಗಳಿಂದ ಅನೇಕ ಕಾಡು ಪ್ರಾಣಿಗಳನ್ನು (Forest Animals) ಕಾನೂನುಬಾಹಿರವಾಗಿ ಲಿಮಾದಲ್ಲಿ (Lima) ವ್ಯಾಪಾರ ಮಾಡಲು ತರಲಾಗುತ್ತದೆ. "ವನ್ಯಜೀವಿಗಳ ಕಳ್ಳಸಾಗಣೆಯು ಈ ಪರಿಣಾಮಗಳನ್ನು ತರುತ್ತದೆ. ಮೊಟ್ಟೆಯೊಡೆದ ಮರಿಗಳಿಂದ ಅನೇಕ ಮಾದರಿಗಳನ್ನು ಸೆರೆಹಿಡಿಯಲಾಗುತ್ತದೆ. ಇದಕ್ಕಾಗಿ ಅವರು ಪೋಷಕರನ್ನು (Parents) ಕೊಲ್ಲುತ್ತಾರೆ ಮತ್ತು ಇವುಗಳನ್ನು ಅನೌಪಚಾರಿಕ ಮಾರುಕಟ್ಟೆಗಳಲ್ಲಿ (Informal Markets) ಅಕ್ರಮವಾಗಿ ವ್ಯಾಪಾರ ಮಾಡಲಾಗುತ್ತದೆ" ಎಂದು ಅವರು ಹೇಳಿದರು.

Orange Dog: ನಾಯಿ ಫೋಟೋಶೂಟ್, ಕಲರಿಂಗ್‌ಗೆ ಖರ್ಚು ಮಾಡಿದ್ದು 5 ಲಕ್ಷ

"ಈ ಸಂದರ್ಭದಲ್ಲಿ, ಒಂದು ನರಿಯನ್ನು ಸಾಕು ನಾಯಿಯಾಗಿ ಖರೀದಿಸಲಾಗಿದೆ. ಅಷ್ಟೇ" ಲಿಮಾದಲ್ಲಿ ಕಾಡು ಪ್ರಾಣಿಗಳನ್ನು ವಶಪಡಿಸಿಕೊಳ್ಳಲು SERFOR ಈ ವರ್ಷ 128 ಕಾರ್ಯಾಚರಣೆ (Interventions) ನಡೆಸಿದೆ ಎಂದು ಪಶುವೈದ್ಯರು ಹೇಳಿದರು. ಪ್ರಾಣಿಗಳ ಅಕ್ರಮ ವ್ಯಾಪಾರವು ಪೆರುವಿನಲ್ಲಿ ಮೂರು ಮತ್ತು ಐದು ವರ್ಷಗಳ ಜೈಲು (Jail) ಶಿಕ್ಷೆಗೆ ಕಾರಣವಾಗಬಹುದು ಎಂದು  ಸಿಲ್ವಾ ತಿಳಿಸಿದರು

Follow Us:
Download App:
  • android
  • ios