ಮದುವೆಯಾಗಿ ಫಸ್ಟ್ ನೈಟ್‌ಗೂ ಮುನ್ನವೇ ನವದಂಪತಿ ಹೊಡೆದಾಟ; ವಧು ಸಾವು, ವರನ ಸ್ಥಿತಿ ಗಂಭೀರ
ಮದುವೆಯಾಗಿ ಫಸ್ಟ್ ನೈಟ್‌ಗೆ ಇನ್ನೇನು ಕೆಲವು ಗಂಟೆಗಳು ಬಾಕಿ ಇರುವಾಗಲೇ ನವದಂಪತಿ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ವಧು ಸತ್ತೇ ಹೋಗಿದ್ದಾಳೆ. ಇನ್ನು ವರನ ಸ್ಥಿತಿಯೂ ಗಂಭೀರವಾಗಿದೆ.
ಕೋಲಾರ (ಆ.07): ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾದ ಜೋಡಿ ಮನೆಗೆ ಹೋದ ನಂತರ ಫಸ್ಟ್ ನೈಟ್‌ಗೆ ಕೆಲವು ಗಂಟೆಗಳು ಬಾಕಿ ಇರುವಂತೆಯೇ ಇಬ್ಬರ ನಡುವೆ ಹೊಡೆದಾಡಿಕೊಂಡಿದ್ದಾರೆ. ಗಂಭೀರ ಗಾಯಗೊಂಡ ಮದುಮಗಳು ಮೃತಪಟ್ಟರೆ, ಮದುಮಗನ ಸ್ಥಿತಿ ಗಂಭೀರವಾಗಿದೆ.
ಹೌದು, ಮದುವೆಯಾಗಿ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ನವದಂಪತಿ (ವಧು-ವರ) ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ವಧು ಸಾವನ್ನಪ್ಪಿದರೆ, ವರನಿಗೆ ಗಂಭೀರ ಗಾಯವಾಗಿದೆ. ಈ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಚಂಬರಸನಹಳ್ಳಿ ಗ್ರಾಮದಲ್ಲಿ ಲಿಖಿತಶ್ರೀ ಹಾಗೂ ನವೀನ್ ಅವರಿಗೆ ಮದುವೆಯಾಗಿತ್ತು. ಮದುವೆಯಾದ ಕೆಲವು ಗಂಟೆಗಳ ನಂತರ ಮನೆಯಲ್ಲಿದ್ದ ಒಂದು ಕೋಣೆಯಲ್ಲಿ ವಧು ವರ ಇಬ್ಬರೂ ಹೋಗಿದ್ದಾರೆ. ರೂಮಿನಲ್ಲಿ ಅದೇನಾಯ್ತೋ ಗೊತ್ತಿಲ್ಲ ಇಬ್ಬರೂ ಪರಸ್ಪರ ರಕ್ತ ಬರುವಂತೆ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.
ಉಡುಪಿಯಲ್ಲಿ ನಿಂತಲ್ಲೇ ಅಲ್ಲಾಡುತ್ತಿದ್ದ ಕಾರು; ಜನರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ರತಿಕ್ರೀಡಾ ಜೋಡಿ!
ಈ ವೇಳೆ ಮನೆಯವರು ಅವರನ್ನು ಬಿಡಿಸಲು ಬಾಗಿಲು ತಟ್ಟಿದರೂ ಬಾಗಿಲು ತೆರೆದಿಲ್ಲ. ಇನ್ನು ಮನೆಯರವು ಬಾಗಿಲು ಮುರಿದು ಇಬ್ಬರ ಜಗಳ ಬಿಡಿಸಿ ರಕ್ತಸ್ರಾವದಿಂದ ಬಳಲುತ್ತಿದ್ದ ನವದಂಪತಿಯನ್ನು ಹತ್ತಿರದ ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡದ್ದಾರೆ. ಆದರೆ, ಗಂಭೀರ ಗಾಯಗೊಂಡಿದ್ದ ನವವಧು ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇನ್ನು ವರ ನವೀನ್ ಸ್ಥಿತಿ ಕೂಡಾ ಗಂಭೀರವಾಗಿದ್ದು, ಕೆಜಿಎಫ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಅಂಡರ್ ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿಸಿದ ಹುಡುಗಿ ಕೈಕೊಟ್ಲು ಅಂತಾ ಆತ್ಮಹತ್ಯೆ ಮಾಡಿಕೊಂಡ ಯುವಕ
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದ ನವೀನ್ ಕೆಲವು ವರ್ಷಗಳಿಂದ ಆಂಧ್ರಪ್ರದೇಶ ರಾಜ್ಯದ ಬೈನಪಲ್ಲಿ ಗ್ರಾಮದ ಲಿಖಿತಶ್ರೀಯನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಸೇರಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಗ್ರಾಮದಲ್ಲಿ ಸರಳವಾಗಿ ಮದುವೆಯನ್ನೂ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮದುವೆಯಾದ ಜೋಡಿ ಎಲ್ಲ ಮದುವೆ ಶಾಸ್ತ್ರಗಳು ಮುಕ್ತಾಯಗೊಂಡ ನಂತರ ಒಂದು ಕೋಣೆಯಲ್ಲಿ ಹೋಗಿದ್ದಾರೆ. ಕೆಲ ಹೊತ್ತಿನ ನಂತರ ಕೊಠಡಿಯಲ್ಲಿದ್ದ ಹುಡುಗ ಹುಡುಗಿ ಹೊಡೆದಾಡಿಕೊಂಡಿದ್ದಾರೆ. ಮನೆಯ ಕೊಠಡಿಯಲ್ಲಿ ಇದ್ದ ಮಚ್ಚಿನಿಂದ ಹೊಡರದಾಡಿಕೊಂಡ ನವ ವಧು ವರ. ಇನ್ನು ಗಲಾಟೆಗೆ ಕಾರಣ ತಿಳಿದು ಬಂದಿಲ್ಲ. ಇನ್ನು ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.