ಅಮೆರಿಕದಲ್ಲಿ 768 ಕಿಮೀ ವಿಸ್ತಾರದ ಮಿಂಚು2020ರಲ್ಲಿ ಅಮೆರಿಕದ 3 ರಾಜ್ಯಗಳಿಗೆ ವಿಸ್ತರಿಸಿದ್ದ ಮಿಂಚು

ನ್ಯೂಯಾರ್ಕ್(ಫೆ.03): 2020ರ ಏ.29ರಂದು ಕೋರೈಸಿದ್ದ ಮಿಂಚೊಂದು 768 ಕಿ.ಮೀನಷ್ಟುವಿಸ್ತಾರದ ಮೂಲದ ಹೊಸ ವಿಶ್ವ ದಾಖಲೆ ಸ್ಥಾಪಿಸಿದೆ. 2 ವರ್ಷದ ಹಿಂದಿನ ಈ ಬೆಳವಣಿಗೆಯನ್ನು ವಿಶ್ವ ಹವಾಮಾನ ಸಂಸ್ಥೆ ಇದೀಗ ಖಚಿತಪಡಿಸಿದೆ.

2020ರ ಏ.29ರಂದು ಸಂಭವಿಸಿದ್ದ ಈ ಮಿಂಚು ಅಮೆರಿಕದ ಮಿಸಿಸಿಪ್ಪಿ, ಲೂಸಿಯಾನಾ ಮತ್ತು ಟೆಕ್ಸಾಸ್‌ ರಾಜ್ಯದ 768.8 ಕಿ.ಮೀ ಉದ್ದಕ್ಕೆ ವಿಸ್ತರಿಸಿತ್ತು. ಅಂದರೆ ಹೆಚ್ಚೂಕಡಿಮೆ ಲಂಡನ್‌ ಮತ್ತು ಜರ್ಮನಿಯ ಹ್ಯಾಂಬರ್ಗ್‌ ನಗರದ ನಡುವಿನ ಅಂತರದಷ್ಟುಎಂದು ಸಂಸ್ಥೆ ಹೇಳಿದೆ.

2018ರ ಅ.31ರಂದು ಬ್ರೆಜಿಲ್‌ನಲ್ಲಿ ಸಂಭವಿಸಿದ್ದ ಮಿಂಚು 709.8 ಕಿ.ಮೀ ವಿಸ್ತಾರದ ಮೂಲಕ ಇದುವರೆಗಿನ ವಿಶ್ವದಾಖಲೆ ಹೊಂದಿತ್ತು. ಇನ್ನು 2020ರ ಜೂ.18ರಂದು ಉರುಗ್ವೆ ಮತ್ತು ಬ್ರೆಜಿಲ್‌ನಲ್ಲಿ 17.102 ಸೆಕೆಂಡ್‌ಗಳಷ್ಟು ಸುದೀರ್ಘ ಅವಧಿಗೆ ಮಿಂಚು ಹೊಡೆದಿದ್ದು, ಈಗಲೂ ಅತಿ ಸುದೀರ್ಘ ಎಂಬ ದಾಖಲೆ ಹೊಂದಿದೆ.