ಲಾಕ್ಡೌನ್ ಆತಂಕ: ಪ್ಯಾರಿಸ್ ಸುತ್ತಮುತ್ತ 700 ಕಿ.ಮೀ ಉದ್ದದ ಟ್ರಾಫಿಕ್ ಜಾಮ್
ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೋವಾ ವೈರಸ್ 2 ಹಾಗೂ 3ನೇ ಅಲೆಯ ಭೀತಿ. ಹಲವು ರಾಷ್ಟ್ರಗಳಲ್ಲಿ ಮತ್ತೆ ಲಾಕ್ಡೌನ್ ಘೋಷಣೆ. ಸೋಂಕು ತಡೆಗೆ ಫ್ರಾನ್ಸ್‌ನಲ್ಲಿಯೂ ಲಾಕ್ಡೌನ್, ಪ್ಯಾರಿಸ್‌ನಿಂದ ತಮ್ಮೂರಿಗೆ ಪಯಣಿಸಿದ ನಿವಾಸಿಗಳು, ಫುಲ್ ಟ್ರಾಫಿಕ್ ಜಾಮ್
ಪ್ಯಾರಿಸ್ (ಅ.31): ಕೊರೋನಾ ಸೋಂಕು ತಡೆಗೆ ಫ್ರಾನ್ಸ್‌ನಲ್ಲಿ 2ನೇ ಲಾಕ್ಡೌನ್ ಜಾರಿಯಾಗುತ್ತಲೇ, ಗುರುವಾರ ರಾತ್ರಿ ರಾಜಧಾನಿ ಪ್ಯಾರಿಸ್ ಸುತ್ತಮುತ್ತಲ ಪ್ರದೇಶದಲ್ಲಿ ದಾಖಲೆಯ 700 ಕಿ.ಮೀ ಉದ್ದದಷ್ಟುಟ್ರಾಫಿಕ್ ಜ್ಯಾಮ್ ಉಂಟಾದ ಘಟನೆ ಸಂಭವಿಸಿದೆ.
ರಾತ್ರಿ 9 ಗಂಟೆಯಿಂದ ಲಾಕ್ಡೌನ್ ಜಾರಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಾವಿರಾರು ಜನ ಜನದಟ್ಟಣೆ ಮತ್ತು ದುಬಾರಿ ನಗರ ಪ್ಯಾರಿಸ್‌ನಿಂದ ದೂರದ ಊರುಗಳಿಗೆ ಹೊರಟರು. ಮತ್ತೊಂದಿಷ್ಟುಜನರು ಬೇರೆ ಊರುಗಳಿಂದ ಪ್ಯಾರಿಸ್‌ನತ್ತ ಮುಖ ಮಾಡಿದರು. ಸಂಜೆ ಬಳಿಕ ನಡೆದ ಈ ಬೆಳವಣಿಗೆಯಿಂದಾಗಿ ರಸ್ತೆಗಳಲ್ಲಿ ಸಾವಿರಾರು ಕಾರು ಸಾಲುಗಟ್ಟಿನಿಂತು, ಪ್ಯಾರಿಸ್ ನಗರ ಮತ್ತು ಅದಕ್ಕೆ ಹೊಂದಿಕೊಂಡ ಸುತ್ತಮುತ್ತಲ ಪ್ರದೇಶಗಳಲ್ಲಿ ಒಟ್ಟಾರೆ 700 ಕಿ.ಮೀನಷ್ಟುಉದ್ದದಷ್ಟುಟ್ರಾಫಿಕ್ ಜ್ಯಾಮ್ ಉಂಟಾಗಿತ್ತು. ಪರಿಣಾಮ ಜನರು ಭಾರೀ ಸಂಕಷ್ಟಎದುರಿಸಬೇಕಾಗಿ ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಅಲೆಯತ್ತ ಕೊರೋನಾ: ಲಾಕ್ಡೌನ್ ಘೋಷಣೆ
ಈ ನಡುವೆ 2ನೇ ಲಾಕ್‌ಡೌನ್ ವಿರೋಧಿಸಿ ಫ್ರಾನ್ಸ್‌ನ ಹಲವು ನಗರಗಳಲ್ಲಿ ಹಿಂಸಾಚಾರ ನಡೆದಿದೆ. ಲಾಕ್ಡೌನ್ ವಿರೋಧಿಸುತ್ತಿರುವ ಯುವಸಮೂಹ ವ್ಯಾಪಾರದ ಸ್ಥಳಗಳ ಮೇಲೆ ದಾಳಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿವೆ.