* ಆಫ್ಘನ್‌ನಲ್ಲಿ ಸಿಲುಕಿದ್ದ 7 ಕನ್ನಡಿಗರ ರಕ್ಷಣೆ* ಗಾಜಿಯಾಬಾದ್‌ಗೆ ಬಂದಿಳಿದ ಕನ್ನಡಿಗರು* ಶೀಘ್ರದಲ್ಲೇ ತವರು ರಾಜ್ಯಕ್ಕೆ ಆಗಮನ* ಇನ್ನೂ ಮೂವರು ಕನ್ನಡಿಗರು ಕಾಬೂಲ್‌ನಲ್ಲಿ* ಇಟಲಿಗೆ ತೆರಳಲು ಒಬ್ಬರ ನಿರ್ಧಾರ

ಬೆಂಗಳೂರು(ಆ.21): ಅಷ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಈ ಪೈಕಿ ರಾಜ್ಯದ ಏಳು ಮಂದಿ ಕನ್ನಡಿಗರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಕನ್ನಡಿಗರು ಬಂದಿದ್ದು, ಅಲ್ಲಿಂದ ಕರ್ನಾಟಕ ತಲುಪಲಿದ್ದಾರೆ.

"

ಬಳ್ಳಾರಿ ಜಿಲ್ಲೆ ಸಂಡೂರಿನ ತನ್ವೀನ್‌ ಅಬ್ದುಲ್‌, ಮಂಗಳೂರಿನ ಬಜ್ಪೆ ಮೂಲದ ದಿನೇಶ್‌ ರೈ, ಮೂಡಬಿದಿರೆಯ ಜಗದೀಶ್‌ ಪೂಜಾರಿ, ಕಿನ್ನಿಗೋಳಿಯ ಡೇವಿಡ್‌ ಡಿಸೋಜಾ, ಬಜೈ ಶ್ರವಣ್‌ ಅಂಚನ್‌, ಉಳ್ಳಾಲದ ಪ್ರಸಾದ್‌ ಆನಂದ್‌, ಬೆಂಗಳೂರಿನ ಮಾರತ್‌ಹಳ್ಳಿಯ ಹಿರಾಕ್‌ ದೇಬನಾಥ್‌ ಅವರು ಗಾಜಿಯಾಬಾದ್‌ ತಲುಪಿದ್ದಾರೆ. ಮಂಗಳೂರಿನ ಥೆರೇಸಾ ಕ್ರಾಸ್ಟಾಅವರು ಕಾಬೂಲ್‌ನಲ್ಲಿದ್ದು, ಅಲ್ಲಿಂದ ಇಟಲಿಗೆ ತೆರಳುವ ಇಚ್ಛೆಯನ್ನು ವಿದೇಶಾಂಗ ಸಚಿವಾಲಯದ ಮುಂದೆ ವ್ಯಕ್ತಪಡಿಸಿದ್ದಾರೆ.

ಇನ್ನು ಚಿಕ್ಕಮಗಳೂರಿನ ಎನ್‌.ಆರ್‌.ಪುರದ ರಾಬರ್ಟ್‌ ಹಾಗೂ ಮಂಗಳೂರಿನ ಜೇರೋನಾ ಸಿಕ್ವೇರಾ ಕಾಬೂಲ್‌ ವಿಮಾನ ನಿಲ್ದಾಣದಲ್ಲಿಯೇ ಇದ್ದಾರೆ. ಶೀಘ್ರವೇ ಅವರು ರಾಜ್ಯಕ್ಕೆ ಮರಳಲಿದ್ದಾರೆ. ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ಆಪ್ಘಾನಿಸ್ತಾನದಲ್ಲಿ ಕನ್ನಡಿಗರ ರಕ್ಷಣೆ ಕಾರ್ಯಾಚರಣೆ ಸಮನ್ವಯಾಧಿಕಾರಿಯೂ ಆಗಿರುವ ಎಡಿಜಿಪಿ ಉಮೇಶ್‌ ಕುಮಾರ್‌ ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟವರು

1. ತನ್ವೀನ್‌ ಬಳ್ಳಾರಿ

2. ದಿನೇಶ್‌ ರೈ ದಕ್ಷಿಣ ಕನ್ನಡ

3. ಜಗದೀಶ್‌ ಪೂಜಾರಿ ದಕ್ಷಿಣ ಕನ್ನಡ

4. ಡೇವಿಡ್‌ ಡಿಸೋಜಾ ದಕ್ಷಿಣ ಕನ್ನಡ

5. ಶ್ರವಣ್‌ ಅಂಚನ್‌ ದಕ್ಷಿಣ ಕನ್ನಡ

6. ಆನಂದ್‌ ದಕ್ಷಿಣ ಕನ್ನಡ

7. ಹಿರಾಕ್‌ ದೇಬನಾಥ್‌ ಬೆಂಗಳೂರು