ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮಿನ ಔಷಧ ಸೇವಿಸಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಅಸುನೀಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ನ್ಯೂಯಾರ್ಕ್: ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮಿನ ಔಷಧ ಸೇವಿಸಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಅಸುನೀಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ನವದೆಹಲಿ ಮೂಲದ ಮೈಡೆನ್‌ ಫಾರ್ಮಸ್ಯುಟಿಕಲ್ಸ್‌ ಲಿಮಿಟೆಡ್‌ ಈ ಔಷಧವನ್ನು ತಯಾರಿಸಿದ್ದು, ಇದು ವಿಷಕಾರಿ ಮತ್ತು ಮಾರಣಾಂತಿಕ ಅಂಶಗಳನ್ನು ಒಳಗೊಂಡಿದೆ ಎಂದು ಡಬ್ಲುಎಚ್‌ಒ ಹೇಳಿದೆ. ಈ ಔಷಧ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ರವಾನಿಸಿದ್ದು, ಇದರಲ್ಲಿದ್ದ ವಿಷದ ಪರಿಣಾಮವಾಗಿ ಮಕ್ಕಳಲ್ಲಿ ಮೂತ್ರಪಿಂಡ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಸಂಸ್ಥೆ ಹೇಳಿದೆ.

WHO ಅಮೆರಿಕ ಪ್ರತಿನಿಧಿಯಾಗಿ ಮಂಡ್ಯ ವಿವೇಕ್‌ಮೂರ್ತಿ

ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಅಮೆರಿಕ ಪ್ರತಿನಿಧಿಯಾಗಿ ಕರ್ನಾಟಕದ ಮಂಡ್ಯ ಮೂಲದ ಡಾ.ವಿವೇಕ್‌ ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಅಮೆರಿಕದ ಸರ್ಜನ್‌ ಜನರಲ್‌ ಆಗಿ ಕಾರ‍್ಯ ನಿರ್ವಹಿಸುತ್ತಿರುವ ಮೂರ್ತಿ ಅವರನ್ನು ಅಧ್ಯಕ್ಷ ಜೋ ಬೈಡೆನ್‌ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ನಾಮನಿರ್ದೇಶನ ಮಾಡಿದ್ದಾರೆ. ಸರ್ಜನ್‌ ಜನರಲ್‌ ಹುದ್ದೆಯೊಂದಿಗೆ ಡಬ್ಲ್ಯುಎಚ್‌ಒ ಪ್ರತಿನಿಧಿಯಾಗಿಯೂ ಕಾರ‍್ಯ ನಿರ್ವಹಿಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.


'ಯೋಗ್ಯ ಅಭ್ಯರ್ಥಿ': ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನಕ್ಕೆ ಭಾರತವನ್ನು ಬೆಂಬಲಿಸಿದ ರಷ್ಯಾ!