Asianet Suvarna News Asianet Suvarna News

6 ವರ್ಷದ ಮಗು ಮಾಡಿದ ಸ್ಕೆಚ್‌ ಹಿಡಿದು ಡ್ರೈವರ್ ಹುಡುಕಾಟದಲ್ಲಿ ಪೊಲೀಸ್!

ಅಪಘಾತವೆಸಗಿ ಎಸ್ಕೇಪ್| ರಸ್ತೆ ಅಪಘಾತ ಮಾಡಿದ ಚಾಲಕನ ಹುಡುಕಾಟದಲ್ಲಿ ಪೊಲೀಸ್| ಪೊಲೀಸರ ಸಹಾಯಕ್ಕೆ ಧಾವಿಸಿದ ಆರು ವರ್ಷದ ಮಕ್ಕಳು

6 year old witnesses draw sketches to help cops find rash driver in German city pod
Author
Bangalore, First Published Nov 16, 2020, 4:29 PM IST

ಬರ್ಲಿನ್(ನ.16): ಅಚ್ಚರಿಯ ಘಟನೆಯೊಂದು ಬೆಡಳಕಿಗೆ ಬಂದಿದ್ದು, ಜರ್ಮನಿಯ ಹಮ್ಮ್‌ನಲ್ಲಿ ಪೊಲೀಸರು ಮಕ್ಕಳು ರಚಿಸಿದ ಸ್ಕೆಚ್ ಆಧಾರದಲ್ಲಿ ಅಪಘಾತವೊಂದರ ಆಪರಾಧಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಾಲೆಗೆ ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಈ ದುರ್ಘಟನೆಯನ್ನು ನೋಡಿದ್ದಾರೆ. ಹೀಗಾಗಿ ಈ ಮಕ್ಕಳಿಂದ  ಪೆನ್ಸಿಲ್ ಸ್ಕೆಚ್ ಮಾಡಿಸಿರುವ ಪೊಲೀಸರು ವಾಹನ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಮೂಲಕ ಆರು ವರ್ಷದ ಮಕ್ಕಳು ಮಾಡಿದ ಈ ಪೆನ್ಸಿಲ್ ಸ್ಕರೆಚ್ ತನಿಖಾ ಫೈಲ್‌ ಸೇರಿಕೊಂಡಿದೆ.

ಸದ್ಯ ಈ ಆರು ಮಂದಿ ಮಕ್ಕಳು ಪೊಲೀಸರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ಬೆಳಗ್ಗೆ 8:45ಕ್ಕೆ ಕಪ್ಪು ಕಾರೊಂದು ಅಪಘಾತಕ್ಕೀಡಾಗಿದ್ದನ್ನು ಗಮನಿಸಿದ್ದಾರೆ. ಅಪಘಾತದ ವೇಳೆ ಈ ಮಕ್ಕಳು ರಸ್ತೆ ದಾಟಲು ಹಾಕಲಾಗುವ ಝೀಬ್ರಾ ಪಟ್ಟಿ ಬಳಿ ಹಸಿರು ಸಿಗ್ನಲ್ ಬರಲು ಕಾಯುತ್ತಿದ್ದರು. ಇನ್ನು ಅಪಘಾತವವೆಸಗಿದರೂ ವಾಹನ ಚಾಲಕ ಇದನ್ನು ನಿರ್ಲಕ್ಷಿಸಿ ಮುಂದಕ್ಕೆ ತೆರಳಿದ್ದಾನೆಂದು ಮಕ್ಕಳು ಈ ಘಟನೆಯನ್ನು ವಿವರಿಸಿದ್ದಾರೆ.

ತದ ನಂತರ ಶಾಲೆಗೆ ತಲುಪಿದ ಮಕ್ಕಳು ಈ ಘಟನೆಯನಮ್ನು ತಮ್ಮ ಶಿಕ್ಷಕರಿಗೆ ವಿವರಿಸಿದ್ದಾರೆ. ಕೂಡಲೇ ಶಿಕ್ಷಕರು ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಿರುವಾಗ ಸೆಲಿನಾ ಹಾಗೂ ಲೂವಿಸ್ ಹೆಸರಿನ ಮಕ್ಕಳು ಈ ಘಟನೆಯ ಪೆನ್ಸಿಲ್ ಸ್ಕೆಚ್ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಪೊಲೀಸರು ಇಲಾಖೆಯ ಟ್ವಿಟರ್ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದು, ಅಪರಾಧಿಗಳನ್ನು ಹುಡುಕಲು ನೀವೂ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios