Asianet Suvarna News Asianet Suvarna News

ಚಿಂಪಾಜಿಗೆ ಬುದ್ಧಿ ಕಲಿಸಲು ಅದರ ಮುಂದೆ ಒಟ್ಟಿಗೆ ಸ್ತನ್ಯಪಾನ ಮಾಡಿದ 30 ಬ್ಯೂಟಿಫುಲ್ ಮಮ್ಮೀಸ್

ತಾಯಿ ಚಿಂಪಾಜಿಗೆ ಬುದ್ದಿ ಕಲಿಸುವುದಾಗಿ ಮೃಗಾಲಯವೊಂದರ ಸಹಭಾಗಿತ್ವದಲ್ಲಿ 30 ನವಜಾತ ಶಿಶುಗಳ ತಾಯಂದಿರು, ಚಿಂಪಾಜಿ ಮುಂದೆಯೇ ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದಂತಹ ಅಪರೂಪದ ಘಟನೆ ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಮೃಗಾಲಯದಲ್ಲಿ ನಡೆದಿದೆ

30 Beautiful Mummies Breastfeed Together In Front Of Mother orangutan Mujur in Dublin Zoo akb
Author
First Published Aug 15, 2024, 4:55 PM IST | Last Updated Aug 15, 2024, 4:55 PM IST

ತಾಯಿ ಚಿಂಪಾಜಿಗೆ ಬುದ್ದಿ ಕಲಿಸುವುದಾಗಿ ಮೃಗಾಲಯವೊಂದರ ಸಹಭಾಗಿತ್ವದಲ್ಲಿ 30 ನವಜಾತ ಶಿಶುಗಳ ತಾಯಂದಿರು, ಚಿಂಪಾಜಿ ಮುಂದೆಯೇ ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದಂತಹ ಅಪರೂಪದ ಘಟನೆ ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಮೃಗಾಲಯದಲ್ಲಿ ನಡೆದಿದೆ. ಚಿಂಪಾಜಿಗಳು ಅಥವಾ ಈ ಒರಾಂಗುಟನ್‌ಗಳು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಬೇಧಗಳಾಗಿದ್ದು, ಇವುಗಳ ಉಳಿವಿಗೆ ಡಬ್ಲಿನ್‌ನ ಝೂ ಸಿಬ್ಬಂದಿ ಇನ್ನಿಲ್ಲದ ಶ್ರಮ ಪಡುತ್ತಿದ್ದಾರೆ. 

ಡಬ್ಲಿನ್‌ ಝೂನ 19 ವರ್ಷದ ಮುಜುರ್‌ ಹೆಸರಿನ ಚಿಂಪಾಜಿ ಅಥವಾ ಈ ಒರಾಂಗುಟನ್‌ ಕಳೆದ ಜುಲೈ 31ರಂದು ಒಂದು  ಗಂಡು ಮರಿಗೆ ಜನ್ಮ ನೀಡಿತ್ತು. ಆದರೆ ಅದು ತನ್ನ ಮರಿಯನ್ನು ಅಷ್ಟೊಂದು ಚೆನ್ನಾಗಿ ಆರೈಕೆ ಮಾಡುತ್ತಿರಲಿಲ್ಲ, ಈ ಕಾರಣಕ್ಕೆ ಝೂ ಸಿಬ್ಬಂದಿ ಈ ತಾಯಿಗೆ ತಾಯ್ತನದ ಮಮತೆ ಕಾಳಜಿಯನ್ನು ಕಲಿಸುವ ಸಲುವಾಗಿ ವಿನೂತನ ಪ್ರಯೋಗವನ್ನು ಮಾಡಿದ್ದರು. ಝೂನಲ್ಲಿ ಇತರ ಚಿಂಪಾಜಿಗಳು ತಮ್ಮ ಮರಿಗಳಿಗೆ ಹಾಲು ಕುಡಿಸುವ ಹಾಗೂ ಅವುಗಳನ್ನು ಆರೈಕೆ ಮಾಡುವ ವೀಡಿಯೋಗಳನ್ನು ಈ ಚಿಂಪಾಂಜಿ ಮುಜುರ್‌ ಮುಂದೆ ಪ್ಲೇ ಮಾಡುತ್ತಿದ್ದರು. ಇದರ ಜೊತೆಗೆ ಕೆಲ ಸಹೃದಯಿ ತಾಯಂದಿರನ್ನು ತಮ್ಮ ಈ ವಿನೂತನ ಪ್ರಯೋಗಕ್ಕೆ ಕರೆಸಿಕೊಂಡಿದ್ದು, ಅವರು ಕೂಡ ಖುಷಿಯಿಂದಲೇ ಈ ಚಿಂಪಾಜಿ ಮುಂದೆ ತಮ್ಮ  ಮಗುವಿಗೆ ಕಾಳಜಿ ಮಾಡಲು ಸ್ತನ್ಯಪಾನ ಮಾಡಲು ಮುಂದಾದರು.

ಪ್ರವಾಸಿಗರ ಮೇಲೆ ಕಲ್ಲೆಸೆದ ಚಿಂಪಾಂಜಿ ಮರಿ... ಅಮ್ಮನಿಂದ ಬಿತ್ತು ಸರಿಯಾಗಿ ಒದೆ: ವಿಡಿಯೋ ನೋಡಿ

ಚಿಂಪಾಜಿ ಅಥವಾ ಈ ಒರಾಂಗುಟನ್‌ಗಳಲ್ಲಿ ಹೆಣ್ಣು ಪ್ರತಿ 3 ರಿಂದ 5 ವರ್ಷಗಳಿಗೊಮ್ಮೆ ಒಂದು ಮರಿಗೆ ಜನ್ಮ ನೀಡುತ್ತದೆ.  ಇವುಗಳ ವಿರಳವಾಗುತ್ತಿರುವ ಕಾರಣ ಇವುಗಳ ಈ ಹುಟ್ಟು ತುಂಬಾ ಮಹತ್ವ ನೀಡಲಾಗುತ್ತದೆ. ಈ ಮಧ್ಯೆ ಚಿಂಪಾಜಿ ಮುಜುರ್ ಈ ಹಿಂದೆ 2019 ಹಾಗೂ 2022ರಲ್ಲಿ ಒಂದೊಂದು ಮರಿಗೆ ಜನ್ಮ ನೀಡಿತ್ತು. ಚಿಂಪಾಜಿ ಮರಿಗಳು ಹುಟ್ಟಿದ ಮೂರು ವರ್ಷಗಳ ಕಾಲ ಸಂಪೂರ್ಣವಾಗಿ ತಮ್ಮ ತಾಯಿಯನ್ನು ಅವಲಂಬಿಸಿರುತ್ತವೆ. ಆಹಾರದಿಂದ ಹಿಡಿದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವವರೆಗೆ ಅವುಗಳಿಗೆ ತಾಯಿಯೇಬೇಕು. ತಾಯಿ ಎಲ್ಲದರೂ ಹೋಗುತ್ತಾಳೆ ಎಂದು ಗೊತ್ತಾದ ಕೂಡಲೇ ತಾಯಿ ಮೈಗೆ ಮರಿಗಳು ಅಂಟಿಕೊಂಡು ಬಿಡುತ್ತವೆ. ಅಲ್ಲದೇ ತಾಯಿ ಹಾಲನ್ನೇ ಕುಡಿಯುತ್ತವೆ. ಹೀಗಾಗಿ ಪುಟ್ಟ ಮರಿಗಳು ಬೆಳವಣಿಗೆಗೆ ತಾಯಿ ಹಾಲಿನ ಜೊತೆ ತಾಯಿಯ ಮಮತೆಯೂ ಮಹತ್ವಪೂರ್ಣವಾಗಿದೆ. 

ಆದರೆ ಈ ತಾಯಿ ಚಿಂಪಾಜಿ ಮುಜುರ್ ಮಾತ್ರ ತನ್ನ ಮಕ್ಕಳಿಗೆ ಅಗತ್ಯ ಆರೈಕೆಯನ್ನು ಮಾಡದ ಪರಿಣಾಮ 2019 ಹಾಗೂ 2022ರಲ್ಲಿ ಹುಟ್ಟಿದ ಮರಿಗಳು ಸಾವನ್ನಪ್ಪಿದ್ದವು. ಶಿಬು ಹೆಸರಿನ ಮತ್ತೊಂದು ಗಂಡು ಚಿಂಪಾಜಿ ಈ ಮರಿಗಳ ತಂದೆಯಾಗಿತ್ತು. ಹೀಗಾಗಿ ಝೂ ಸಿಬ್ಬಂದಿ ಈ ಬಾರಿ ಮತ್ತೆ ಮರಿ ಹಾಕಿದ ಮುಜುರ್‌ನ ಮಗುವನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟಿದ್ದು, ತಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೆ, ದುರಾದೃಷ್ಟವಶಾತ್ ಗಂಡು ಚಿಂಪಾಜಿ ಶಿಬು ಫೆಬ್ರವರಿಯಲ್ಲಿ ಮೃತಪಟ್ಟಿರುವುದರಿಂದ ಇದರ ಮರಿಯನ್ನು ಉಳಿಸಿಕೊಂಡು ಹೇಗಾದರೂ ಇವುಗಳ ವಂಶವನ್ನು ವೃದ್ಧಿ ಮಾಡಬೇಕು ಎಂಬುದು ಈ ಡಬ್ಲಿನ್ ಝೂ ಸಿಬ್ಬಂದಿಯ ಉದ್ದೇಶವಾಗಿದೆ. 

ತಬ್ಬಲಿ ಹುಲಿಮರಿಗಳಿಗೆ ಹಾಲು ನೀಡುತ್ತಾ ಅಮ್ಮನಂತೆ ಆರೈಕೆ ಮಾಡ್ತಿದೆ ಚಿಂಪಾಂಜಿ

ಹೀಗಾಗಿ ಮುಜುರ್‌ನಲ್ಲಿ ತಾಯಿಯ ಗುಣಗಳನ್ನು ತರುವುದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಝೂ ಸಿಬ್ಬಂದಿ ಇದರ ಭಾಗವಾಗಿ 30 ಮಹಿಳೆಯರ ಸುಂದರವಾದ ಗುಂಪೊಂದನ್ನು ಸಿದ್ಧಪಡಿಸಿದ್ದಾರೆ, ಇವರು ಈ ಮುಜುರ್‌ಗಾಗಿ ತಮ್ಮ ಸಮಯ ನೀಡಿದ್ದು ಗರ್ಭಿಣಿಯಾಗಿದ್ದ ಮುಜುರ್ ಮುಂದೆ ತಮ್ಮ ಮಗುವನ್ನು ಮುದ್ದಾಡುವುದು ಮಗುವಿಗೆ ಹಾಲುಣಿಸುವುದನ್ನು ಮಾಡಿದ್ದಾರೆ. ಮುಜುರ್ ಕೂಡ ಹೀಗೆ ಮಹಿಳೆಯರು ತಮ್ಮ ಮಕ್ಕಳನ್ನು ಮುದ್ದಾಡಿ ಅವರಿಗೆ ಹಾಲುಣಿಸುತ್ತಿದ್ದರೆ ಅವರನ್ನೇ ಕುತೂಹಲದಿಂದ ನೋಡುತ್ತಿರುತ್ತದೆಯಂತೆ. ಝೂ ಸಿಬ್ಬಂದಿಯ ಈ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ ಮುಜುರ್ ಕೂಡ ಈಗ ತನ್ನ ಮಗುವಿನತ್ತ ಗಮನ ಹರಿಸುತ್ತದೆ. ಅದಕ್ಕೆ ಸ್ತನ್ಯಪಾನ ಮಾಡುತ್ತಿದೆ ಎಂದು ಝೂ ಸಿಬ್ಬಂದಿ ಹೇಳಿದ್ದಾರೆ. ಇದರ ಜೊತೆಗೆ ಝೂನ ಸಿಬ್ಬಂದಿ ಕೂಡ 24 ಗಂಟೆಯ ಕಾಲ ಮುಜುರ್‌ನ ಮಗುವಿನ ಯೋಗಕ್ಷೇಮ ಗಮನಿಸುತ್ತಿರುತ್ತಾರಂತೆ. 

Latest Videos
Follow Us:
Download App:
  • android
  • ios