Asianet Suvarna News Asianet Suvarna News

ಅರೆಂಜ್ಡ್‌ ಮ್ಯಾರೇಜ್‌ನಿಂದ ಕಾಪಾಡಿ... ಹುಡುಗಿಗಾಗಿ ಬಿಲ್‌ಬೋರ್ಡ್ ಮೊರೆ ಹೋದ ಯುವಕ

  • ಹುಡುಗಿ ಹುಡುಕಲು ಬಿಲ್‌ಬೋರ್ಡ್‌ನಲ್ಲಿ ಜಾಹೀರಾತು
  • ತನ್ನ ಫೋಟೋದೊಂದಿಗೆ ಜಾಹೀರಾತು ನೀಡಿದ ಯುವಕ
  • ಬರ್ಮಿಂಗ್‌ಹ್ಯಾಮ್‌ 29 ವರ್ಷದ. ಮೊಹಮ್ಮದ್‌ ಮಲಿಕ್‌ 
29 year old London man uses billboard ad to find a wife akb
Author
Bangalore, First Published Jan 5, 2022, 10:49 PM IST

ಬ್ರಿಟನ್‌(ಜ.5): ಲಂಡನ್‌ ಮೂಲದ ಯುವಕನೋರ್ವ ಸಮಾನ ಮನಸ್ಥಿತಿಯ ಹುಡುಗಿಗಾಗಿ ಬಿಲ್‌ಬೋರ್ಡ್‌ ಜಾಹೀರಾತಿನ ಮೊರೆ ಹೋಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ (Birmingham) ನಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್‌ ಮಲಿಕ್‌ ( Muhammad Malik) ಹೆಸರಿನ 29 ವರ್ಷದ ಯುವಕನೋರ್ವ ಬಿಲ್‌ಬೋರ್ಡ್‌ನಲ್ಲಿ ತನ್ನ ಬಗ್ಗೆಯೇ ಜಾಹೀರಾತು ನೀಡಿದ್ದಾನೆ. ಮೊಹಮ್ಮದ್‌ ಮಲಿಕ್‌ ಮಲಗಿಕೊಂಡಿರುವಂತಹ ಫೋಟೋ ಇದ್ದು  ಆರೆಂಜ್ಡ್‌ ಮ್ಯಾರೇಜ್‌ನಿಂದ ನನ್ನನ್ನು ರಕ್ಷಿಸಿ ಎಂದು ದೊಡ್ಡದಾದ ಬಿಲ್‌ಬೋರ್ಡ್‌ನಲ್ಲಿ ಬರೆದುಕೊಂಡಿದ್ದಾನೆ. 

ಅಲ್ಲದೇ ಬಿಲ್‌ಬೋರ್ಡ್‌ನಲ್ಲಿ findMALIKawife.com ಎಂಬ ವೆಬ್‌ಸೈಟ್‌ವೊಂದರ ಲಿಂಕ್‌ ನೀಡಲಾಗಿದೆ. ನನ್ನ ಜೀವ ಸಂಗಾತಿ 20ರ ಹರೆಯದ ಮುಸ್ಲಿಂ ಮಹಿಳೆಯಾಗಿರಬೇಕು.  ಆಕೆ ತನ್ನ ಡೀನ್‌ಗಾಗಿ ಶ್ರಮಿಸಬೇಕು. ನಾನು ಯಾವುದೇ ಜನಾಂಗಕ್ಕೂ ತೆರೆದು ಕೊಳ್ಳುತ್ತೇನೆ. ಆದರೆ ಪಂಜಾಬಿ ಕುಟುಂಬವನ್ನು ನಾನು ಹೊಂದಿದ್ದೇನೆ. ಹಾಗಾಗಿ ನೀವು ಬಂತಸ್‌ ಜೊತೆಯಲ್ಲಿರಬೇಕು. ಎಂದು ಈತನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. 

 

ಈ ಮೊಹಮ್ಮದ್ ಮಲಿಕ್‌ನ ಜಾಹೀರಾತು ನೋಡಿ ನೆಟ್ಟಿಗರು ಕೂಡ ತರಹೇವಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮನ್ನು ಮದುವೆಯಾಗುವುದಕ್ಕಾಗಿ ನಾನು ಧಾರ್ಮಿಕವಾಗಿ ಬದಲಾಗುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಕಂಗ್ರಾಟ್ಸ್‌ ಬ್ರೋ, ನಾನು ಕೂಡ ಹೀಗೆ ಮಾಡುವ ಅಗತ್ಯವಿದೆ ಎಂದು ಕಾಮೆಂಟ್ ಮಾಡಿದ್ದಾರೆ.  ನಾನು ಅತ್ಯಂತ ಕ್ರಿಯಾಶೀಲ ಹಾಗೂ ಅಸಂಬದ್ಧವಾದ ಕೆಲಸಗಳನ್ನು ಮಾಡಲು ಇಷ್ಟ ಪಡುತ್ತೇನೆ ಎಂದು ಈ ಮೊಹಮ್ಮದ್ ಮಲಿಕ್ ಹೇಳಿದ್ದು, ಈ ಬಿಲ್ಬೋರ್ಡ್ ಜನವರಿ 14 ರವರೆಗೆ ಇರಲಿದೆ ಎಂದು ಮಲಿಕ್ ಹೇಳಿದ್ದಾಗಿ ಬಿಬಿಸಿ ವರದಿ ಮಾಡಿದೆ. 

ಮದುವೆ (Marriage )ಜೀವನದ ಮಹತ್ವದ ಘಟ್ಟ. ಮದುವೆ ನಂತ್ರ ಮನೆ, ಕೆಲಸ, ಜವಾಬ್ದಾರಿ ಎಲ್ಲವೂ ಬದಲಾಗುತ್ತದೆ. ಹೊಸ ಜನರ ಜೊತೆ ಬಾಳ್ವೆ ಮಾಡಬೇಕಾಗುತ್ತದೆ. ವಿವಾಹದ ನಂತ್ರ ಹೊಸ ಜೀವನಕ್ಕೆ ಹೊಂದಿಕೊಳ್ಳುವುದು ಮಾತ್ರವಲ್ಲ ಕೆಲವೊಂದು ದಾಖಲೆ (Document)ಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ವಿವಾಹದ ನಂತ್ರ ಗಂಡನ ಸರ್ ನೇಮ್ ಇಟ್ಟುಕೊಳ್ಳುವ ಕಾಲ ಈಗಿಲ್ಲ. ಅನೇಕ ಮಹಿಳೆಯರು ಹಳೆ ಸರ್ ನೇಮ್ ಮುಂದುವರೆಸುತ್ತಾರೆ. ಕೆಲವರು ಸರ್ ನೇಮ್ ಬದಲಿಸಲು ಇಚ್ಛಿಸುತ್ತಾರೆ. ಸರ್ ನೇಮ್ ಬದಲಾವಣೆ ಜೊತೆಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಅನೇಕ ದಾಖಲೆಗಳಲ್ಲಿ ಹೆಸರು ಮತ್ತು ವಿಳಾಸವನ್ನು ಬದಲಾಯಿಸಬೇಕಾಗಿದೆ. ಇತ್ತೀಚೆಗಷ್ಟೆ ಮದುವೆಯಾಗಿದ್ದರೆ ಅಥವಾ ಮದುವೆಯಾಗುವ ತಯಾರಿಯಲ್ಲಿದ್ದರೆ ಹುಡುಗಿಯರು ಮದುವೆ ನಂತ್ರ ಯಾವ ದಾಖಲೆಗಳನ್ನು ನವೀಕರಿಸಬೇಕು ಎಂಬುದನ್ನು ತಿಳಿದಿರಬೇಕು. ಮದುವೆ ನಂತ್ರ ಯಾವೆಲ್ಲ ದಾಖಲೆ ಬದಲಾಗಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡ್ತೆವೆ.

Break Up : ನಿಮ್ಮ ಹುಡುಗಿ ಮುನಿಸು ಕಡಿಮೆಯಾಗ್ತಿಲ್ವಾ? ಈಗ್ಲೇ ಎಚ್ಚೆತ್ತುಕೊಳ್ಳಿ

ಮತದಾರರ ಗುರುತಿನ ಚೀಟಿ (Voter ID card): ಭಾರತದ ಪ್ರತಿಯೊಬ್ಬ ಪ್ರಜೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಮತದಾರರ ಚೀಟಿ ಹೊಂದಿರುತ್ತಾನೆ. 18 ವರ್ಷವಾಗ್ತಿದ್ದಂತೆ ವೋಟರ್ ಐಡಿ ಸಿಗುತ್ತದೆ. ಇದರಲ್ಲಿ ಮತದಾರನ ವಿಳಾಸವಿರುತ್ತದೆ. ಆ ಕ್ಷೇತ್ರದಲ್ಲಿ ಆತ ಮತದಾನ ಮಾಡಬೇಕಾಗುತ್ತದೆ. ಮದುವೆಯ ನಂತರ ಹೆಣ್ಣುಮಕ್ಕಳು ತಮ್ಮ ತಾಯಿಯ ಮನೆಯನ್ನು ತೊರೆದು ತಮ್ಮ ಗಂಡನೊಂದಿಗೆ ವಾಸ ಶುರು ಮಾಡ್ತಾರೆ. ಆಗ ವಿಳಾಸ ಬದಲಾಗುತ್ತದೆ. ಹಾಗಾಗಿ ನೀವು ಮತದಾರರ ಗುರುತಿನ ಚೀಟಿಯನ್ನು ಬದಲಾಯಿಸಬೇಕಾಗುತ್ತದೆ.  ವಿಳಾಸವನ್ನು ಬದಲಾಯಿಸದಿದ್ದರೆ, ಹಳೆಯ ವಿಳಾಸದ ಕ್ಷೇತ್ರಕ್ಕೆ ಹೋಗಿ ಮತದಾನ ಮಾಡಬೇಕಾಗುತ್ತದೆ. ಬರೀ ಇದೊಂದೇ ಕಾರಣವಲ್ಲ. ಮತದಾರರ ಚೀಟಿ, ಅನೇಕ ಕೆಲಸಗಳಿಗೆ ದಾಖಲೆಗಳಾಗಿವೆ. ಅದರಲ್ಲಿರುವ ವಿಳಾಸ ಬದಲಾಗದೆ ಹೋದಲ್ಲಿ ಸಮಸ್ಯೆಯಾಗುತ್ತದೆ. 

Womans Life : ಮದುವೆ ಬಳಿಕ ಹೆಣ್ಮಕ್ಕಳು ಯಾವೆಲ್ಲಾ ದಾಖಲೆ ಬದಲಿಸಬೇಕು ಗೊತ್ತಾ?

Follow Us:
Download App:
  • android
  • ios