ಇಂಗ್ಲೆಂಡ್‌ನ ಲೀಸೆಸ್ಟರ್‌ಷೈರ್‌ನಲ್ಲಿ ಇತ್ತೀಚೆಗೆ ಹಿಂದೂ ದೇವಾಲಯ ಧ್ವಂಸಗೊಳಿಸಲಾಗಿದೆ ಹಾಗೂ ಕೇಸರಿ ಧ್ವಜ ತೆಗೆಯುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಈಗ ಮತ್ತೆ ಹಿಂದೂ ದೇವಾಲಯವೊಂದರ ಹೊರಗೆ ಜನಸಮೂಹ ಪ್ರತಿಭಟನೆ ನಡೆಸಿದ್ದು, ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದಾರೆ. 

ಏಷ್ಯಾ ಕಪ್‌ (Asia Cup) ಕ್ರಿಕೆಟ್‌ ಪಂದ್ಯವೊಂದರಲ್ಲಿ (Cricket Match) ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಿದ ಬಳಿಕ ಇಂಗ್ಲೆಂಡ್‌ನಲ್ಲಿ ಕೋಮು ಸಂಘರ್ಷದ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ (Leicester) ಹಿಂದೂ ದೇವಾಲಯವೊಂದನ್ನು (Hindu Temple) ಧ್ವಂಸ ಮಾಡಿ ಕೇಸರಿ ಧ್ವಜವನ್ನು ಕೆಳಗಿಳಿಸಲಾಗಿತ್ತು. ಈಗ ಮತ್ತೆ, ಹಿಂದೂ ದೇವಾಲಯವೊಂದರ ಹೊರಗೆ ಜನ ಸಮೂಹ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 200 ಜನ ಮುಸ್ಲಿಮರು ಎಂದು ಹೇಳಲಾದ ಪ್ರತಿಭಟನಾಕಾರರು ಭಾಗವಹಿಸಿದ್ದು, ಈ ವೇಳೆ ಅಲ್ಲಾಹು ಅಕ್ಬರ್‌ (Allahu Akbar) ಘೋಷಣೆಯನ್ನೂ ಕೂಗಲಾಗಿದೆ. ಸೆಪ್ಟೆಂಬರ್ 20, 2022 ರಂದು ಇಂಗ್ಲೆಂಡ್‌ನ ಪಶ್ಚಿಮ ಮಿಡ್‌ಲ್ಯಾಂಡ್ಸ್‌ (West Midlands) ಭಾಗದ ಸ್ಮೆಥ್‌ವಿಕ್‌ (Smethwick)ಟೌನ್‌ನ ಹಿಂದೂ ದೇವಾಲವೊಂದರ ಹೊರಗೆ ಸುಮಾರು 200 ಜನ ಮುಸ್ಲಿಮರು ಪ್ರತಿಭಟನೆ ನಡೆಸಲು ಸೇರಿದ್ದರು ಎಂದು ಹೇಳಲಾಗಿದೆ. 

ಸ್ಪಾನ್‌ ಲೇನ್‌ನಲ್ಲಿರುವ ದುರ್ಗಾ ಭವನ್‌ ಹಿಂದೂ ಸೆಂಟರ್‌ ಕಡೆಗೆ ಪಾದಯಾತ್ರೆ ಮೂಲಕ ನೂರಾರು ಪ್ರತಿಭಟನಾಕಾರರು ಆಘಮಿಸಿದ್ದು, ದೇವಸ್ಥಾನದದ ಹೊರಗೆ ಹಲವು ಪ್ರತಿಭಟನಾಕಾರರು ‘ಅಲ್ಲಾಹು ಅಕ್ಬರ್’ ಎಂದು ಕೂಗಿರುವ ವೈರಲ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಸ್ಥಳದಲ್ಲಿ ಸೇರಿದ್ದರೂ, ಕೆಲವರು ದೇವಾಲಯದ ಕಾಂಪೌಂಡ್‌ ಹತ್ತುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು, ಬರ್ಮಿಂಗ್‌ಹ್ಯಾಮ್‌ ವರ್ಲ್ಡ್‌ ವರದಿ ಪ್ರಕಾರ, ಅಪ್ನಾ ಮುಸ್ಲಿಮ್ಸ್‌ ಎಂಬ ಸಾಮಾಜಿಕ ಜಾಲತಾಣ ಖಾತೆ ದುರ್ಘಾ ಭವನ್‌ ದೇವಾಲಯದ ಹೊರಗೆ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿತ್ತು ಎಂದು ಹೇಳಿದೆ. 

ಇದನ್ನು ಓದಿ:Britainನಲ್ಲಿ ಹಿಂದೂ ದೇವಾಲಯ ಧ್ವಂಸ; ಕೇಸರಿ ಧ್ವಜವನ್ನು ತೆಗೆದ ಪಾಕ್‌ ಮೂಲದವರು..!

Scroll to load tweet…

ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ಮುಸ್ಲಿಂ ಮತಾಂಧರು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಮತ್ತು ಕೇಸರಿ ಧ್ವಜವನ್ನು ಅಪವಿತ್ರಗೊಳಿಸಿದ್ದಾರೆ ಎಂದು ವರದಿಯಾಗಿತ್ತು. ಆಗಸ್ಟ್ 28 ರಂದು ಏಷ್ಯಾ ಕಪ್ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಹಿಂದೂಗಳ ಮೇಲೆ ಉದ್ದೇಶಿತ ದಾಳಿಗಳು ನಡೆದ ನಂತರ, ಶಸ್ತ್ರಸಜ್ಜಿತ ಇಸ್ಲಾಮಿಗಳು ಹಿಂದೂಗಳು ಮತ್ತು ಸುತ್ತಮುತ್ತಲಿನ ಅವರ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ ಎಂದೂ ಹೇಳಲಾಗಿದೆ. ಪಾಕ್‌ ಮೂಲದವರು ಈ ಕೃತ್ಯ ನಡೆಸಿದ್ದಾರೆ ಹಾಗೂ ಐಸಿಸ್‌ ಕೈವಾಡ ಇರಬಹುದು ಎಂದೂ ವರದಿಗಳು ಹೇಳ್ತಿವೆ.

ಅಲ್ಲದೆ, ವರದಿಗಳ ಪ್ರಕಾರ, ಉದ್ರಿಕ್ತ ಮುಸ್ಲಿಂ ಗುಂಪು, ಮಕ್ಕಳು ಸೇರಿದಂತೆ ಹಿಂದೂಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಪ್ರಯತ್ನಿಸಿತು. ಕಾರುಗಳು ಮತ್ತು ಇತರ ಹಿಂದೂ ಒಡೆತನದ ಆಸ್ತಿಗಳನ್ನು ಉರುಳಿಸಲಾಗಿದೆ ಮತ್ತು ಧ್ವಂಸಗೊಳಿಸಲಾಗಿದೆ ಎಂದೂ ಕೆಲ ವರದಿಗಳು ಹೇಳಿವೆ. ಇಸ್ಲಾಂ ಹಿಂಸಾಚಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದೂಗಳು ನಡೆಸಿದ ಪ್ರತಿಭಟನೆಯ ನಂತರ ಬೀದಿಗಳಲ್ಲಿ ಗಲಭೆ ಮುಂದುವರಿದಂತೆ ಪೊಲೀಸ್ ಅಧಿಕಾರಿಗಳು ಲೀಸೆಸ್ಟರ್‌ನ ಬೀದಿಗಳಲ್ಲಿ ಸುತ್ತುವರಿದಿದ್ದು, ಶಾಂತಿಯನ್ನು ಪ್ರೋತ್ಸಾಹಿಸಿದ್ದಾರೆ ಎಂದು ತಿಳಿದುಬಂದಿತ್ತು.
ಇದರ ನಂತರ, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಭಾರತೀಯ ಸಮುದಾಯದ ವಿರುದ್ಧದ ಹಿಂಸಾಚಾರವನ್ನು ಖಂಡಿಸಿ ಮತ್ತು ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಹೇಳಿಕೆ ನೀಡಿತು. ಲೀಸೆಸ್ಟರ್ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Canada: ಹಿಂದೂ ದೇವಾಲಯ ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು..!

Scroll to load tweet…

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರು ಮಂಗಳವಾರ ಬೆಳಗ್ಗೆ ಲೀಸೆಸ್ಟರ್‌ನ ಮಸೀದಿಯ ಮೆಟ್ಟಿಲುಗಳ ಮೇಲೆ ಜಮಾಯಿಸಿ ಶಾಂತಿ, ಶಾಂತಿ ಮತ್ತು ಸೌಹಾರ್ದತೆಗೆ ಒತ್ತಾಯಿಸಿ ಜಂಟಿ ಹೇಳಿಕೆ ನೀಡಿದರು. "ಪ್ರಚೋದನೆ ಮತ್ತು ಹಿಂಸಾಚಾರ"ವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಅವರು ಕರೆ ನೀಡಿದರು.