ಟಿವಿ ಮುಂದೆ ಚುಂಬಿಸಿದ ಸಲಿಂಗಿ ಜೋಡಿ ಟ್ವಿಟ್ಟರ್‌ಗೆ ಬೆಂಕಿ ಹಚ್ಚಿದ ಕಿಸ್ಸಿಂಗ್ ಸೀನ್
ಬೀಜಿಂಗ್(ಫೆ.11): ಸಿಂಗಾಪುರದ ಮಾಧ್ಯಮವೊಂದರ ವರದಿಗಾರ್ತಿ ಚೀನಾದ ಬೀಜಿಂಗ್‌ನಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದು, ಈ ವೇಳೆ ಕ್ಯಾಮರಾ ಎದುರೇ ಸಲಿಂಗಿ ಜೋಡಿಯೊಂದು ಗಾಢವಾಗಿ ಚುಂಬಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಳಿಕ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಲಿಂಗಿಗಳ ಚುಂಬನದ ದೃಶ್ಯ ಸಿಂಗಾಪುರದ ಟಿವಿಯಲ್ಲಿ ಪ್ರಸಾರವಾಗಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಚಾನೆಲ್ ನ್ಯೂಸ್ ಏಷ್ಯಾದ ಪತ್ರಕರ್ತೆ ಲೋ ಮಿನ್ಮಿನ್ (Low Minmin) ಅವರು ಚೀನಾದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಬೀಜಿಂಗ್ ಪಬ್‌ನಲ್ಲಿ ನಡೆಯುತ್ತಿದ್ದ ಸ್ಥಳೀಯ ಪಾರ್ಟಿಯ ಲೈವ್ ವರದಿ ಮಾಡುವಾಗ ಈ ಘಟನೆ ಸಂಭವಿಸಿದೆ. ವೀಡಿಯೊದಲ್ಲಿ, ವರದಿಗಾರ್ತಿ ವರದಿ ಮಾಡುತ್ತಿದ್ದರೆ ಹಿಂಭಾಗದಲ್ಲಿ ಇಬ್ಬರು ಪುರುಷರು ಚುಂಬಿಸುತ್ತಿರುವುದು ಕಂಡು ಬರುತ್ತಿದೆ.
Kiss Day: ಪ್ರೀತಿಯ ಚುಂಬನದಲ್ಲಿದೆ ಆರೋಗ್ಯದ ಗುಟ್ಟು
ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಇಬ್ಬರು ಸಲಿಂಗಿಗಳು ಸಿಂಗಾಪುರದ ಚಾನೆಲ್ ನ್ಯೂಸ್ ಏಷ್ಯಾಗೆ ಫೋಟೋ ಬಾಂಬ್ ಹಾಕಿದ್ದಾರೆ. ಸಿಂಗಾಪುರದಲ್ಲಿ ಸಲಿಂಗ ಚಿತ್ರಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ. ಆದಾಗ್ಯೂ ಅಚಾನಕ್ ಆಗಿ ಬಂದ ಈ ದೃಶ್ಯ ಈಗ ಸಿಂಗಾಪುರದಲ್ಲಿ ವೈರಲ್ ಆಗಿದೆ. ಸಿಂಗಾಪುರದ ಜನ ಈ ದೃಶ್ಯವನ್ನು 'ಕ್ರಾಂತಿಯ ಕೆಲಸ' ಎಂದು ಕರೆದಿದ್ದಾರೆ.
ಗಾರ್ಡಿಯನ್ ವರದಿ ಪ್ರಕಾರ, ಬ್ರಿಟಿಷ್ ವಸಾಹತುಶಾಹಿ ಯುಗದಿಂದಲೂ ಸಿಂಗಾಪುರದಲ್ಲಿ ಸಲಿಂಗಕಾಮ ಕಾನೂನುಬಾಹಿರವಾಗಿದೆ ಮತ್ತು LGBT ಜೀವನಶೈಲಿಯನ್ನು ಉತ್ತೇಜಿಸುವ ಟಿವಿ ಪ್ರಸಾರವನ್ನು ದೇಶವು ನಿಷೇಧಿಸಿದೆ. ಈ ಕಿಸ್, ಒಂದು ಸಣ್ಣ ಕ್ರಿಯೆಯಾಗಿದ್ದರೂ, ಸಿಂಗಾಪುರದ LGBTQ ಸಮುದಾಯಕ್ಕೆ ಒಂದು ಪ್ರಗತಿಯ ಹೆಜ್ಜೆಯಾಗಿದೆ. ಸಲಿಂಗಿಗಳೆಂದರೆ ಸಿಂಗಾಪುರದಲ್ಲಿ ಇನ್ನೂ ಅಪರಾಧಿಗಳು ಎಂಬ ಭಾವನೆ ಇದೆ. ಈ ಒಲಿಂಪಿಯನ್ ಕಿಸ್ ಸಿಂಗಾಪುರದ ದಂಡ ಸಂಹಿತೆಯ ಸೆಕ್ಷನ್ 377A ಅನ್ನು ಹೊಡೆದುರುಳಿಸುವ ಕರೆಯಾಗಲಿ ಮತ್ತು ಜಾಗತಿಕವಾಗಿ LGBTQ ಜನರನ್ನು ಅಪರಾಧಿಗಳೆಂದು ಭಾವಿಸುವ ಕ್ರಮ ಕೊನೆಯಾಗಲಿ ಎಂದು GLAAD ಮೀಡಿಯಾ ಇನ್‌ಸ್ಟಿಟ್ಯೂಟ್‌ನ ಹಿರಿಯ ನಿರ್ದೇಶಕ ರಾಸ್ ಮುರ್ರೆ (Ross Murray)ಹೇಳಿದ್ದಾರೆ.
ಕೆನ್ನೆಗೆ ಮುತ್ತಿಕ್ಕಿಸಿಕೊಂಡ 15 ವರ್ಷ ಹಳೆ ಕೇಸಲ್ಲಿ ಶಿಲ್ಪಾಶೆಟ್ಟಿಗೆ ಕ್ಲೀನ್‌ಚಿಟ್
ಚುಂಬಿಸುತ್ತಿರುವ ಈ ವ್ಯಕ್ತಿಗಳು ಯಾರೆಂದು ನಮಗೆ ತಿಳಿದಿಲ್ಲ, ಅವರು ಚಾನೆಲ್ ನ್ಯೂಸ್ ಏಷ್ಯಾಗಾಗಿ ನಿರ್ದಿಷ್ಟವಾಗಿ ಚುಂಬಿಸುತ್ತಿದ್ದಾರೆಯೇ ಅಥವಾ ಸಾಮಾನ್ಯವಾಗಿ ಕ್ಯಾಮರಾಕ್ಕಾಗಿ ಅವರು ಚುಂಬಿಸುತ್ತಿದ್ದಾರೆಯೇ ಎಂಬುದು ನಮಗೆ ತಿಳಿದಿಲ್ಲ ಎಂದು ನ್ಯಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ತಾರತಮ್ಯ ವಿರೋಧಿ ವಿದ್ಯಾರ್ಥಿ ಗುಂಪಿನ ಕೆಲಿಡೋಸ್ಕೋಪ್ NTU ಪ್ರತಿನಿಧಿಯೊಬ್ಬರು ಹೇಳಿದ್ದಾರೆ.