ಬಂದರ್ಬನ್‌ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ 17 ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಇನ್ನೆರಡು ಮನೆಗಳು ಭಾಗಶಃ ಸುಟ್ಟಿವೆ. ಸರ್ಕಾರ ಮಾತ್ರ ಒಂದೇ ಸಮುದಾಯದ ಎರಡು ಗುಂಪುಗಳ ನಡುವಿನ ವೈಷಮ್ಯವೇ ಇದಕ್ಕೆ ಕಾರಣ ಎಂದು ಹೇಳಿದೆ.

ಢಾಕಾ: ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನದ ಬಳಿಕ ಅಲ್ಪಸಂಖ್ಯಾತರ ಮೇಲಿನ ದಾಳಿ ಹೆಚ್ಚುತ್ತಲೇ ಇವೆ. ಹಿಂದೂಗಳು ಹಾಗೂ ಹಿಂದೂ ದೇಗುಲಗಳ ಮೇಲಿನ ದಾಳಿ ಬಳಿಕ ಇದೀಗ ಚಿತ್ತಗಾಂಗ್‌ ಪ್ರದೇಶದಲ್ಲಿ ಕ್ರಿಸ್ಮಸ್‌ ಸಂಭ್ರಮಾಚರಣೆ ವೇಲೆ ಕ್ರಿಶ್ಚಿಯನ್‌ ಸಮುದಾಯದವರ 19 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಬಂದರ್ಬನ್‌ ಜಿಲ್ಲೆಯ ನೋಟುನ್‌ ತೊಂಗ್ಜ್‌ಹಿರಿ ತ್ರಿಪುರಾ ಪರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 17 ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಇನ್ನೆರಡು ಮನೆಗಳು ಭಾಗಶಃ ಸುಟ್ಟಿವೆ. ಆದರೆ ಬಾಂಗ್ಲಾ ಸರ್ಕಾರ ಮಾತ್ರ ಒಂದೇ ಸಮುದಾಯದ ಎರಡು ಗುಂಪುಗಳ ನಡುವಿನ ವೈಷಮ್ಯವೇ ಇದಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದೆ.

ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆಂದು ಚರ್ಚ್‌ಗೆ ಹೋಗಿದ್ದಾಗ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಮುದಾಯದ ಹಿರಿಯ ಮುಖಂಡನ ದೂರು ಆಧರಿಸಿ 6 ಮಂದಿ ವಿರೋಧಿ ಕ್ರಿಶ್ಚಿಯನ್‌ ಗುಂಪಿನ ಸದಸ್ಯರು ಮತ್ತು ಬೆಂಗಾಲಿ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ವಲಸಿಗರಿಂದ ಬೆಂಗ್ಳೂರಿನ ಕೆರೆಗಳು ಹಾಳು: ಅಧಿಕಾರಿಗಳ ಮೌನದ ಹಿಂದೆ ಅನುಮಾನ!

Scroll to load tweet…
Scroll to load tweet…