ಆಫೀಸ್ ಕೆಲಸವಿರಲಿ, ವೈಯುಕ್ತಿಕ ಕೆಲಸವಿರಲಿ, ಪ್ರತಿಯೊಬ್ಬರು ಇಂಟರ್‌ನೆಟ್ ಸಮಸ್ಯೆ ಎದುರಿಸಿರುತ್ತಾರೆ. ಅದರಲ್ಲೂ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕರಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಮನೆಯಿಂದ ಕೆಲಸ ಮಾಡುವ ಬಹುತೇಕರಿಗೆ ಇಂಟರ್‌ನೆಟ್ ಸ್ಲೋ ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ವಿಶ್ವದ ಅತೀ ವೇಗದ ಇಂಟರ್‌ನೆಟ್ ಸಂಶೋಧನೆ ಮಾಡಲಾಗಿದೆ. 

ಮೆಲ್ಬೋರ್ನ್(ಮೇ.23): ಮೇಜ್ ಡೌನ್ಲೋಡ್ ಆಗ್ತಿಲ್ಲ, ವಿಡಿಯೋ ಪ್ಲೇ ಆಗ್ತಿಲ್ಲ, ಮೈಲ್ ಓಪನ್ ಆಗ್ತಿಲ್ಲ, ಫೇಸ್‍ಬುಕ್ ಲಾಗಿನ್ ಆಗ್ತಿಲ್ಲ. ಹೀಗೆ ಇಂಟರ್ನೆಟ್ ಸ್ಲೋ ಎಂದರೆ ಎದುರಿಸುವ ಸಮಸ್ಯೆ ಸಾವಿರ. ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ ಬಹುತೇಕರಿಗೆ ನೆಟ್ ಸ್ಲೋ ಸಮಸ್ಯೆ ಆಗತ್ತಲೇ ಇದೆ. ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಇದೀಗ ಹೊಸ ಇಂಟರ್ನೆಟ್ ಸಂಶೋಧನೆ ಮಾಡಲಾಗಿದೆ. ಇದು ವಿಶ್ವದಲ್ಲೇ ಅತ್ಯಂತ ವೇಗದ ಇಂಟರ್ನೆಟ್ ಎಂಬ ದಾಖಲೆ ಬರೆದಿದೆ.

ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ

1000 HD ಸಿನಿಮಾವನ್ನು ಅರ್ಧ ಸೆಕೆಂಡ್‌ನಲ್ಲಿ ಡೌನ್ಲೋಡ್ ಮಾಡಬಹುದು. ಕೇವಲ ಸಿಂಗಲ್ ಆಪ್ಟಿಕಲ್ ಚಿಪ್ ಬಳಕೆ ಮಾಡಿ ಆಸ್ಟ್ರೇಲಿಯಾದ RMIT, ಮೋನಾಶ್ ಹಾಗೂ ಸ್ವೈನ್‌ಬರ್ನ್ ವಿಶ್ವವಿದ್ಯಾಲಯ ಈ ಇಂಟರ್ನೆಟ್ ಸಂಶೋಧನೆ ಮಾಡಿದೆ. 

ಹಲವು ದೇಶಗಳು ಇಂಟರ್ನೆಟ್ ಕುರಿತು ಸಂಶೋಧನೆ ನಡೆಸುತ್ತಿದೆ. ಆದರೆ ಆಸ್ಟ್ರೇಲಿಯಾ ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ಅತ್ಯಂತ ವೇಗದ ಇಂಟರ್ನೆಟ್ ಸಂಶೋಧನೆ ಮಾಡಿದೆ. ಸಂಶೋಧನಾ ತಂಡವನ್ನು ಮುನ್ನಡೆಸಿದ ಮೋನಾಶ್ ವಿಶ್ವವಿದ್ಯಾಲಯದ ಫ್ರೋಫೆಸರ್ ಬಿಲ್ ಕೊರ್‌ಕೊರನ್ ಹಾಗೂ RMIT ವಿಶ್ವವಿದ್ಯಾಲಯದ ಅರ್ನನ್ ಮಿಚೆಲ್ ಹೊಸ ದಾಖಲೆ ಬರೆದಿದ್ದಾರೆ. ಸಂಶೋಧನೆಯಲ್ಲಿ ನೂತನ ಇಂಟರ್ನೆಟ್ ಸ್ಪೀಡ್ ಪ್ರತಿ ಸೆಕೆಂಡ್‌ಗೆ 44.2 ಟೆರಾಬೈಟ್ ಸ್ಪೀಡ್ ದಾಖಲಾಗಿದೆ.

ಸದ್ಯ ಆಪ್ಟಿಕಲ್ ಫೈಬರ್ ಲಿಂಕ್ಸ ಮೂಲಕ ಇಂಟರ್ನೆಟ್ ಸೇವೆ ನೀಡಲಾಗುತ್ತಿದೆ. ಆದರ ನೂತನ ಸಂಶೋಧನೆಯಲ್ಲಿ ಸಿಂಗಲ್ ಫೋಟೋನಿಕ್ ಚಿಪ್ ಬಳಕೆ ಮಾಡಲಾಗಿದೆ. ಹೀಗಾಗಿ ಇಂಟರ್ನೆಟ್ ಬೆಲೆಯೂ ಅಗ್ಗವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.