ಭೀಕರ ಕಾಡ್ಗಿಚ್ಚಿಗೆ ಹಾಲಿವುಡ್‌ ಧಗಧಗ: ಬಾಲಿವುಡ್‌ ನಟಿ ನೋರಾ ಮನೆಗೂ ಬೆಂಕಿ!

ಕಾಡ್ಗಿಚ್ಚು 20 ಎಕರೆ ಪ್ರದೇಶಕ್ಕೆ ವಿಸ್ತರಿಸಿದ್ದು, 6 ಕಡೆಗಳಲ್ಲಿ ನಿರಂತರವಾಗಿ ಉರಿಯುತ್ತಿದೆ. ಈವರೆಗೆ 5 ಜನ ಅದರ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಈಗಾಗಲೇ ಸುಮಾರು 1.40 ಲಕ್ಷ ಜನರನ್ನು ತೆರವುಗೊಳಿಸಲಾಗಿದ್ದು, ದಕ್ಷಿಣ ಕ್ಯಾಲಿಫೋರ್ನಿಯಾದ 1.7 ಕೋಟಿ ಜನ ಇನ್ನೂ ಬೆಂಕಿ ಹಾಗೂ ಹೊಗೆಯ ನಡುವೆ ಸಿಲುಕಿದ್ದಾರೆ.

1.40 lakh people have been Evacuation at California in America due to Wildfire

ಲಾಸ್‌ ಏಂಜಲಿಸ್‌(ಜ.10): ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲಿಸ್‌ನಲ್ಲಿ ಮಂಗಳವಾರ ಸಂಜೆ ಧಿಡೀರನೆ ಕಾಣಿಸಿಕೊಂಡ ಕಾಡ್ಗಿಚ್ಚು ತನ್ನ ರಣಾರ್ಭಟವನ್ನು ಮುಂದುವರೆಸಿದೆ. ಇದರಲ್ಲಿ ಬಲಿಯಾದವರ ಸಂಖ್ಯೆ ಶುಕ್ರವಾರ 5ಕ್ಕೇರಿದೆ ಹಾಗೂ 1.40 ಲಕ್ಷ ಜನರನ್ನು ತೆರವುಗೊಳಿಸಲಾಗಿದೆ ಹಾಗೂ ತುರ್ತುಸ್ಥಿತಿ ಸಾರಲಾಗಿದೆ. ಬೆಂಕಿ ನಿಯಂತ್ರಿಸಲು ನಿವೃತ್ತ ಅಗ್ನಿಶಾಮಕ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗುತ್ತಿದೆ.

ಕಾಡ್ಗಿಚ್ಚು 20 ಎಕರೆ ಪ್ರದೇಶಕ್ಕೆ ವಿಸ್ತರಿಸಿದ್ದು, 6 ಕಡೆಗಳಲ್ಲಿ ನಿರಂತರವಾಗಿ ಉರಿಯುತ್ತಿದೆ. ಈವರೆಗೆ 5 ಜನ ಅದರ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಈಗಾಗಲೇ ಸುಮಾರು 1.40 ಲಕ್ಷ ಜನರನ್ನು ತೆರವುಗೊಳಿಸಲಾಗಿದ್ದು, ದಕ್ಷಿಣ ಕ್ಯಾಲಿಫೋರ್ನಿಯಾದ 1.7 ಕೋಟಿ ಜನ ಇನ್ನೂ ಬೆಂಕಿ ಹಾಗೂ ಹೊಗೆಯ ನಡುವೆ ಸಿಲುಕಿದ್ದಾರೆ.

ಏನನ್ನೂ ಮಾಡದೆ ಬುದ್ಧಿವಂತಿಕೆಯಿಂದ ವಾರ್ಷಿಕ 69 ಲಕ್ಷ ರೂಪಾಯಿ ಗಳಿಸುವ ಜಪಾನಿನ ವ್ಯಕ್ತಿ!

ತುರ್ತುಸ್ಥಿತಿ ಘೋಷಣೆ:

ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್‌ ಗೆವಿನ್‌ ನ್ಯೂಸನ್‌ ತುರ್ತುಸ್ಥಿತಿ ಘೋಷಿಸಿದ್ದಾರೆ. ಅತ್ತ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ನೀರು ಹಾಗೂ ಪರಿಸ್ಥಿತಿಯನ್ನು ನಿಭಾಯಿಸಲು ಅಗ್ನಿಶಾಮಕ ಸಿಬ್ಬಂದಿಯ ಕೊರತೆ ಎದುರಾಗಿದೆ. ಪರಿಣಾಮವಾಗಿ ಕಾಡ್ಗಿಚ್ಚು ಆರಿಸಲು ನಿವೃತ್ತ ಅಗ್ನಿಶಾಮಕ ಸಿಬ್ಬಂದಿಗಳನ್ನು ಕೆಲಸಕ್ಕೆ ಮರಳಿ ಕರೆಯಲಾಗಿದೆ. ಬೆಂಕಿ ನಂದಿಸಲು ನೀರಿನ ಕೊರತೆ ಎದುರಾಗಿದ್ದು, ಲಾಸ್‌ ಏಂಜಲಿಸ್‌ನ ನೀರು ಮತ್ತು ವಿದ್ಯುತ್ ಮುಖ್ಯ ಕಾರ್ಯನಿರ್ವಾಹಕಿ ಜಾನಿಸ್ ಕ್ವಿನೋನ್ಸ್ ಆದಷ್ಟು ನೀರನ್ನು ಉಳಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಸನ್‌ಸೆಟ್‌ ಫೈರ್‌ ಎಂಬ ಹೆಸರು:

ಈ ನಡುವೆ, ಸಂರಕ್ಷಿತ ಪ್ರದೇಶವೊಂದರಲ್ಲಿ ಕಾಣಿಸಿಕೊಂಡ ಬೆಂಕಿಗೆ ‘ಸನ್‌ಸೆಟ್‌ ಫೈರ್‌’ ಎಂದು ಹೆಸರಿಡಲಾಗಿದೆ.

ಮನೆ ಕಳೆದುಕೊಂಡ ಖ್ಯಾತರು: 

ಹಾಲಿವುಡ್‌ ನಟರು ಸೇರಿದಂತೆ ಖ್ಯಾತನಾಮರು ವಾಸವಿರುವ ಹಾಲಿವುಡ್‌ ಹಿಲ್‌ಗೂ ಹಬ್ಬಿರುವ ಕಾಡ್ಗಿಚ್ಚಿನಿಂದಾಗಿ ಬಿಲ್ಲಿ ಕ್ರಿಸ್ಟಲ್‌, ಮ್ಯಾಂಡಿ ಮೋರ್‌, ಜೇಮೀ ಲೀ ಕರ್ಟಿಸ್ ಸೇರಿದಂತೆ ಹಲವರು ಮನೆ ಕಳೆದುಕೊಂಡಿದ್ದಾರೆ.
ಆಸ್ಕರ್‌ ಪ್ರಶಸ್ತಿ ವಿತರಣೆ ಸಮಾರಂಭ ನಡೆವ ಡಾಲ್ಬಿ ಥಿಯೇಟರ್‌ಗೂ ಭೀತಿ ಎದುರಾಗಿದೆ.

ನೋರಾ ಫತೇಹಿ, ಬೈಡೆನ್ ಮಗನ ಮನೆಗೂ ಬೆಂಕಿ 

ಅಧ್ಯಕ್ಷ ಬೈಡೆನ್ ಪುತ್ರ ಹಂಟರ್ ಬೈಡೆನ್ ಹಾಗೂ ಬಾಲಿವುಡ್ ನಟಿ ನೋರಾ ಫತೇಹಿ ಮನೆ ಕೂಡ ಅಮೆರಿಕದ ಲಾಸ್ ಏಂಜಲೀಸ್ ಕಾಡಿಚ್ಚಿನಿಂದ ಹಾನಿಗೆ ಒಳಗಾಗಿವೆ. 

ಕ್ಯಾಲಿಫೋರ್ನಿಯಾ: ಅಮೆರಿಕ ಕಾಡಿಚ್ಚಿ ನಿಂದಾಗಿ ಅಧ್ಯಕ್ಷ ಜೋ ಬೈಡೆನ್ ಪುತ್ರ ಹಂಟರ್ ಬೈಡನ್ ಹಾಗೂಬಾಲಿವುಡ್ ನಟಿ ನೋರಾ ಫತೇ ಹಿ ಸಂಕಷ್ಟಕ್ಕೆ ಸಿಲುಕಿ ದ್ದಾರೆ. ಇಬ್ಬರ ಮನೆ -ಬೆಂಕಿಗೆ ಆಹುತಿ ಆಗಿವೆ. ಹಂಟರ್ ಬೈ ಡೆನ್ ಅವರ ಮಲಿಬೂ ನಗರ ದಲ್ಲಿದ್ದಐಷಾರಾಮಿ ನಿವಾಸ ಸಂಪೂರ್ಣ ಸುಟ್ಟು ಬೂದಿಯಾ ಗಿದೆ. ರಷ್ಯಾದ ಮಾಧ್ಯಮಗಳು ಸುಟ್ಟು ಕರಕಲಾದ ಮನೆಯ ಎದುರು ಕಾರ್ ಒಂದು ಹೊತ್ತಿ ಉರಿಯು ತ್ತಿರುವ ದೃಶ್ಯವನ್ನು ಹಂಚಿಕೊಂಡಿವೆ. ಹಂಟರ್ ಮನೆ ಸುಟ್ಟಿರುವ ಮಾಹಿತಿಯನ್ನು ಬೈಡೆನ್ ಕೂಡ ಧೃಡಪಡಿಸಿದ್ದಾರೆ.

ಬಚಾವಾದೆ- ನೋರಾ

ಕಾಡಿಚ್ಚಿನ ವೇಳೆ ಇಲ್ಲಿನ ತಮ್ಮ ಮನೆಯಲ್ಲಿದ್ದ ಬಾಲಿವುಡ್ ನಟಿ ನೋರಾ ಫತೇಹಿ ಕೂಡಲೇ ತಂಡದೊಂದಿಗೆ ಜಾಗ ಖಾಲಿ ಮಾಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಫತೇಹಿ, 'ಇಂತಹ ಕಾಡಿಚ್ಚನ್ನು ನಾನು ಎಂದೂ ನೋಡಿರಲಿಲ್ಲ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಮಗೆ ಹೊರಡಲು ಸೂಚಿಸಲಾಯಿತು. ಕೂಡಲೇ ನಾನು ನನ್ನ ತಂಡದೊಂದಿಗೆ ಮನೆಯಿಂದ ವಿಮಾನನಿಲ್ದಾಣದತ್ತ ತೆರಳಿದೆ' ಎಂದಿದ್ದಾರೆ.

ಕಾಡ್ಗಿಚ್ಚು 20 ಎಕರೆ ಪ್ರದೇಶಕ್ಕೆ ವಿಸ್ತರಿಸಿದ್ದು, 6 ಕಡೆಗಳಲ್ಲಿ ನಿರಂತರವಾಗಿ ಉರಿಯುತ್ತಿದೆ. ಈವರೆಗೆ 5 ಜನ ಅದರ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಈಗಾಗಲೇ ಸುಮಾರು 1.40 ಲಕ್ಷ ಜನರನ್ನು ತೆರವುಗೊಳಿಸಲಾಗಿದ್ದು, ದಕ್ಷಿಣ ಕ್ಯಾಲಿಫೋರ್ನಿಯಾದ 1.7 ಕೋಟಿ ಜನ ಇನ್ನೂ ಬೆಂಕಿ ಹಾಗೂ ಹೊಗೆಯ ನಡುವೆ ಸಿಲುಕಿದ್ದಾರೆ.

ಕಾಡಿಚ್ಚಿಗೆ ಬೈಡನ್, ಗವರ್ನರ್ ನಿರ್ಲಕ್ಷ್ಯವೇ ಕಾರಣ: ಟ್ರಂಪ್ 

ಕಾಡಿಚ್ಚಿಗೆ ಅಧ್ಯಕ್ಷ ಜೋ ಬೈಡೆನ್ ಹಾಗೂ ಲಾಸ್ ಏಂಜಲಿಸ್‌ನ ಗವರ್ನರ್ ಗೇವಿನ್ ನ್ಯೂ ಸಮ್ ಕಾರಣ ಎಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಟ್ರುಥ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಬೆಂಕಿ ನಂದಿಸಲು ನೀರಿಲ್ಲ. ಫೆಡರಲ್ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ(ಫೆಮಾ) ಯಲ್ಲಿ ಹಣವಿಲ್ಲ. ಕೆರೆಗಳಿಗೆ ಕಡಿಮೆ ನೀರು ಹರಿಸುವ ಮೂಲಕ ನಿಷ್ಟ್ರಯೋಜಕ ಸೈಲ್ಸ್ ಮೀನುಗಳನ್ನು ರಕ್ಷಿಸಲು ಗವರ್ನರ್ ಯತ್ನಿಸಿದರು. ಆದರೆ ಜನರ ಬಗ್ಗೆ ಯೋಚಿಸಲಿಲ್ಲ. ಇದರಿಂದ ಅಗತ್ಯ ಬಿದ್ದಾಗ ಬೆಂಕಿ ಆರಿಸಲು ನೀರಿಲ್ಲದಂತಾಗಿದೆ' ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

17 ಪತ್ನಿಯರ ಮುದ್ದಿನ ಗಂಡ, 84 ಮಕ್ಕಳ ಪ್ರೀತಿಯ ಅಬ್ಬಾ ಜಾನ್; ನಾನು ಗ್ಲೋಬರ್‌ ಫಾದರ್ ಎಂದ

ಸಂತ್ರಸ್ತರಿಗೆ ಉಚಿತ ಇಂಟರ್‌ನೆಟ್: ಮಸ್ಕ್ 

ಲಾಸ್ ಏಂಜಲೀಸ್: ಗಾಡ್ತಿಚ್ಚಿನಿಂದಾಗಿ ಲಾಸ್ ಏಂಜಲಿಸ್‌ನಲ್ಲಿ ವಿದ್ಯುತ್ ಹಾಗೂ ಇಂಟರ್ ನೆಟ್ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ನೆರವಾಗಲು ಸ್ಟಾರ್‌ಲಿಂಕ್ ಅಂತರ್ಜಾಲ ಕಂಪನಿ ಮಾಲೀಕ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ತ್ ಮುಂದಾಗಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ಗುರುವಾರ ಬೆಳಗ್ಗಿನಿಂದಲೇ ಸ್ಟಾ‌ರ್ ಲಿಂಕ್ ಸೇವೆಗಳ ಮೂಲಕ ಉಚಿತ ಇಂಟರ್‌ನೆಟ್ ನೀಡುವುದಾಗಿ ಸ್ಪೇಸ್‌ಎಕ್ಸ್‌ನ ಸಿಇಒ ಕೂಡ ಆಗಿರುವ ಎಲಾನ್ ಮಸ್ಕ್ ಘೋಷಿಸಿದ್ದಾರೆ.

ಕಾಡಿಚ್ಚಿನ ಕಾರಣ ಆಸ್ಕ‌ರ್ ನಾಮನಿರ್ದೇಶನ ವಿಳಂಬ 

ಲಾಸ್ ಏಂಜಲಿಸ್: ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದಲ್ಲಿ ಭೀಕರ ಕಾಡಿಚ್ಚು ಕಾಣಿಸಿ ಕೊಂಡಿದ್ದು, ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭ ನಡೆವ ಡಾಲಿ ಥಿಯೇಟರ್‌ಗೂ ಬೆಂಕಿಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜ.17ರಂದು ನಡೆಯಬೇಕಿದ್ದ ಆಸ್ಕರ್ ನಾಮನಿರ್ದೇಶನ ವಿಳಂ ಬವಾಗಿದೆ. 97ನೇ ಸುತ್ತಿನ ಪ್ರಶಸ್ತಿ ವಿಜೇತರ ಘೋಷಣೆಯನ್ನು ಜ.17ರ ಬದಲು ಜ.19 ರಂದು ಮಾಡಲು ನಿರ್ಧರಿಸಲಾಗಿದೆ. ಅಂತೆ ಯೇ, ಆಸ್ಕರ್‌ನಾಮನಿರ್ದೇಶನಕ್ಕೆ ನಡೆಯುವ ಮತದಾನವನ್ನು ಜ.14ರ ವರೆಗೆ ವಿಸ್ತರಿಸಲಾಗಿದೆ.

Latest Videos
Follow Us:
Download App:
  • android
  • ios