Asianet Suvarna News Asianet Suvarna News

DISHA Bharat: ಭಾರತದ ಏಕತೆಯಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು -ಶುಭ್ರಸ್ತ

ಭಾರತದ ಏಕತೆಯನ್ನು ಮತ್ತು ಅಸ್ಮಿತೆಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು. ರಾಷ್ಟ್ರವ್ಯಾಪಿಯಾಗಿ ಅಖಂಡ ಭಾರತದ ಸಂಕೇತವಾಗಿ ನಿರ್ಮಿಸಲಾಗಿರುವ 52 ಶಕ್ತಿಪೀಠಗಳು ರಾಷ್ಟ್ರವನ್ನು ಏಕತೆಯಿಂದಿರಿಸುವಲ್ಲಿ ಮಹಿಳೆಯ ಅಗತ್ಯತೆಯನ್ನು ತಿಳಿಸುತ್ತದೆ. ಎಂದು ಲೇಖಕಿ ಹಾಗೂ ನವದೆಹಲಿಯ ‘ದಿ ಚರ್ನ್’ ಸಂಸ್ಥೆಯ ಸಂಸ್ಥಾಪಕಿ ಶುಭ್ರಸ್ತ ಹೇಳಿದರು.

Womens role in Indias unity is very important shubhrastha opinion rav
Author
First Published Aug 3, 2023, 10:12 AM IST | Last Updated Aug 3, 2023, 10:13 AM IST

ಬೆಂಗಳೂರು (ಆ.3):   ಭಾರತದ ಏಕತೆಯನ್ನು ಮತ್ತು ಅಸ್ಮಿತೆಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು. ರಾಷ್ಟ್ರವ್ಯಾಪಿಯಾಗಿ ಅಖಂಡ ಭಾರತದ ಸಂಕೇತವಾಗಿ ನಿರ್ಮಿಸಲಾಗಿರುವ 52 ಶಕ್ತಿಪೀಠಗಳು ರಾಷ್ಟ್ರವನ್ನು ಏಕತೆಯಿಂದಿರಿಸುವಲ್ಲಿ ಮಹಿಳೆಯ ಅಗತ್ಯತೆಯನ್ನು ತಿಳಿಸುತ್ತದೆ. ಇಂತಹ ಅನೇಕ ಆಚರಣೆಗಳ ಮೂಲಕ ಭಾರತೀಯ ಸಂಸ್ಕೃತಿಯು ಮಹಿಳೆ ಸಕಲ ಸೃಷ್ಟಿಯ ಸಾಕಾರಮೂರ್ತಿಯಾಗಿದ್ದಾಳೆ ಎನ್ನುವುದನ್ನು ಸಾಕ್ಷೀಕರಿಸುತ್ತದೆ ಎಂದು ಲೇಖಕಿ ಹಾಗೂ ನವದೆಹಲಿಯ ‘ದಿ ಚರ್ನ್’ (The churn) ಸಂಸ್ಥೆಯ ಸಂಸ್ಥಾಪಕಿ ಶುಭ್ರಸ್ತ(Shubhrastha) ಹೇಳಿದರು.

ದಿಶಾಭಾರತ(DIsha bharat)ದ ‘ನನ್ನ ಭಾರತ’ (Nanna bharat campaign)ಯುವ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ಆನ್‌ಲೈನ್ ಉಪನ್ಯಾಸ ಸರಣಿಯ ಎರಡನೇ ದಿನ Role of Women in Ekatmata of Bharat ಎಂಬ ವಿಷಯದ ಕುರಿತು ಅವರು ಬುಧವಾರ ಮಾತನಾಡಿದರು.

ನಮ್ಮ ಸಂಸ್ಖೃತಿ ಸೃಷ್ಟಿ ಮತ್ತು ಲಯದ ಶಕ್ತಿ ನಾರಿಗೆ ಇದೆ ಎನ್ನುವುದನ್ನು ಸೂಚಿಸುತ್ತದೆ. ದುರ್ಗಸಪ್ತಶತಿಯಲ್ಲಿ ಪುರುಷ ಮತ್ತು ಸ್ತ್ರೀ ಸ್ಥಾನಮಾನ ಸಮಾನವಾದದ್ದು ಎನ್ನುವುದನ್ನು ಶಿವ ಮತ್ತು ಶಕ್ತಿಯ ಸಂಭಾಷಣೆಯ ಮೂಲಕ ತಿಳಿಸಲಾಗಿದೆ. ನಮ್ಮ ಋಷಿಮುನಿಗಳು ಕೂಡ ಮಹಿಳೆಯರ ಗುರುತ್ವಕ್ಕೆ ತಲೆಬಾಗಿದ ನಿದರ್ಶನಗಳು ನಮ್ಮ ಪುರಾತನ ಸಾಹಿತ್ಯಗಳಿಂದ ದೊರಕುತ್ತವೆ. ಈ ನಿದರ್ಶನಗಳು ಮಹಿಳೆಯರ ಶ್ರೇಷ್ಠತೆಯ ಕುರಿತು ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

 

ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದಿನಿಂದ 'ನನ್ನ ಭಾರತ್' ಅಭಿಯಾನ

ಸಾವಿರಾರು ವರ್ಷಗಳ ಸಂಘರ್ಷದ ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ಸಂಸ್ಕೃತಿಯ ರಕ್ಷಣೆಗೆ ಬಹುದೊಡ್ಡ ಕೊಡುಗೆಯನ್ನು ಮಹಿಳೆಯರು ತಮ್ಮ ಮನೆಯಲ್ಲಿನ ಆಚರಣೆಗಳ ಮೂಲಕ ನೀಡಿದ್ದಾರೆ. ರಾಷ್ಟ್ರದ ಸ್ವಾತಂತ್ರ್ಯ ಯಜ್ಞದಲ್ಲಿ ಅಗಣಿತ ಮಹಿಳೆಯರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ರಾಷ್ಟ್ರ ಕಾರ್ಯಕ್ಕೆ ಬಹುದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಅಂತಹ ವೀರವನಿತೆಯರನ್ನು ನಾವು ಸ್ಮರಿಸಿಕೊಳ್ಳದೇ ಇರುವುದು ವಿಪರ್ಯಾಸದ ಸಂಗತಿ ಎಂದು ನುಡಿದರು.

ವಿದೇಶಿಗರ ನಿರಂತರ ದಾಳಿಗೆ ಸಿಲುಕಿ ಬೌದ್ಧಿಕ ದಾಸ್ಯಕ್ಕೆ ಒಳಗಾಗಿರುವ ನಾವು ಇಲ್ಲಿನ ಸಮಸ್ಯೆಗಳಿಗೆ ವಿದೇಶಿ ನೆಲೆಗಟ್ಟಿನಲ್ಲಿ ಉತ್ತರವನ್ನು ಹುಡುಕುತ್ತಿರುವುದು ವಿಷಾದನೀಯ ಸಂಗತಿ. ಈ ಮಾನಸಿಕತೆಯೇ ಇಂದು ಅನೇಕ ಕೃತ್ಯಗಳಿಗೆ ಕಾರಣವಾಗಿದೆ. ಇಲ್ಲಿನ ಮಹಿಳೆಯರು ಭಾರತೀಯ ಚಿಂತನೆಗಳಾಧಾರಿತವಾಗಿ ಕಾರ್ಯಪ್ರವೃತ್ತರಾಗಲು ಮುಂದಾದರೆ ರಾಷ್ಟ್ರದಲ್ಲಿ ಬದಲಾವಣೆಯ ಅದ್ಭುತ ಕ್ರಾಂತಿಯನ್ನೇ ಮಾಡಬಹುದು ಎಂದರು.

ಆರೋಗ್ಯಪೂರ್ಣ ಸಮಾಜದಲ್ಲಿ ಮಹಿಳೆ ಪಾತ್ರ ದೊಡ್ಡದು

Latest Videos
Follow Us:
Download App:
  • android
  • ios