ಕ್ಯಾನ್ಸರ್ ಇಲ್ಲ, ಆದರೂ ಈ ಮಹಿಳೆ ಎರಡೂ ಸ್ತನ ಕತ್ತರಿಸಿಕೊಂಡಿದ್ದೇಕೆ?
ಮಹಿಳೆಯ ಗುರುತು ಸ್ತನ ಎಂದೇ ಸಮಾಜ ನಂಬುತ್ತದೆ. ಬ್ರೆಸ್ಟ್ ಗಾತ್ರ ಚಿಕ್ಕದಾದ್ರೂ ಆಕೆಯನ್ನು ಜನರು ನೋಡುವ ದೃಷ್ಟಿ ಭಿನ್ನವಾಗಿರುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆ ತನ್ನೆರಡೂ ಸ್ತನವನ್ನು ಚಿಕಿತ್ಸೆ ಮೂಲಕ ತೆಗೆದಿದ್ದು, ಆ ನಂತ್ರವೂ ಆತ್ಮವಿಶ್ವಾಸದಿಂದ ಜೀವನ ನಡೆಸಿ, ಎಲ್ಲರಿಗೆ ಮಾದರಿಯಾಗಿದ್ದಾಳೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಸ್ತನ ಕ್ಯಾನ್ಸರ್ ಸಂಖ್ಯೆ ಏರಿಕೆ ಕಾಣ್ತಿದೆ. ಬೇರೆ ಕ್ಯಾನ್ಸರ್ ನಂತೆಯೇ ಈ ಕ್ಯಾನ್ಸರ್ ಕೂಡ ಅಪಾಯಕಾರಿ. ಬಹುತೇಕ ಸಂದರ್ಭದಲ್ಲಿ ಮಹಿಳೆಯರ ಸ್ತನವನ್ನು ತೆಗೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಅತ್ಯಂತ ದುಃಖದ ಸಂಗತಿ. ಸ್ತನ ಮಹಿಳೆಯರ ಮುಖ್ಯ ಅಂಗಗಳಲ್ಲಿ ಒಂದು. ಇದು ಮಹಿಳೆಯರ ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಕೂಡ ಮಾಡುತ್ತದೆ. ದೇಹದ ಅತ್ಯಮೂಲ್ಯ ಅಂಗ ಕಳೆದುಕೊಳ್ಳಲು ಯಾವುದೇ ಮಹಿಳೆ ಇಚ್ಛಿಸುವುದಿಲ್ಲ. ಆದ್ರೆ ಸ್ಟೆಫನಿ ಎಲ್ಲ ಮಹಿಳೆಯರಂತಲ್ಲ. ಎರಡು ಸ್ತನ ಕಳೆದುಕೊಂಡ್ರೂ ಆಕೆಗೆ ಬೇಸರವಲ್ಲಿ. ತನ್ನ ಹೊಸ ಜೀವನವನ್ನು ಸ್ಟೆಫನಿ ಎಂಜಾಯ್ ಮಾಡ್ತಿದ್ದಾಳೆ. ಈ ಸ್ಟೆಫನಿ ಕಥೆ ಏನು ಅನ್ನೋದನ್ನು ನಾವಿಂದು ಹೇಳ್ತೆವೆ.
ಸ್ಟೆಫನಿ, ಅಮೆರಿಕಾ (America)ದ ಮಹಿಳೆ. ತನ್ನ 28ನೇ ವಯಸ್ಸಿನಲ್ಲಿ ಆಕೆ ಎರಡೂ ಸ್ತನ (Breast ) ತೆಗೆದಿದ್ದಾಳೆ. ಶಸ್ತ್ರಚಿಕಿತ್ಸೆ (Surgery) ಮೂಲಕ ಸ್ತನವನ್ನು ಬೇರ್ಪಡಿಸಲಾಗಿದೆ. ಸ್ಟೆಫನಿ ತನ್ನ 15ನೇ ವಯಸ್ಸಿನಲ್ಲಿಯೇ ತನಗೆ ಬ್ರೆಸ್ಟ್ ಕ್ಯಾನ್ಸರ್ (Cancer) ಸಾಧ್ಯತೆ ಇದೆ ಎಂಬುದನ್ನು ಅರಿತಿದ್ದಳು. 27ನೇ ವರ್ಷದಲ್ಲಿ BRCA1 (BReast CAncer gene 1) ಇರುವುದು ಪತ್ತೆಯಾಗಿತ್ತಂತೆ. ಆಕೆಯ 77 ವರ್ಷದ ಅಜ್ಜಿ ಹಾಗೂ 53 ವರ್ಷದ ತಾಯಿಗೂ BRCA1 ಪಾಜಿಟಿವ್ ಆಗಿತ್ತಂತೆ. ಪ್ರತಿ ಮಹಿಳೆಯರಿಗೂ BRCA1 ಮತ್ತು BRCA 2 ಇರುತ್ತದೆ. ಆದ್ರೆ ಯಾವ ಮಹಿಳೆಯ ಜೀನ್ಸ್ ರೂಪಾಂತರಗೊಳ್ಳುತ್ತದೆಯೋ ಆಗ ಬ್ರೆಸ್ಟ್ ಕ್ಯಾನ್ಸರ್ ಕಾಡುವ ಸಾಧ್ಯತೆಯಿರುತ್ತದೆ. BRCA1 ಜೀನ್ ರೂಪಾಂತರವಾಗಿದೆ ಎಂಬುದು ದೃಢಪಡುತ್ತಿದ್ದಂತೆ ಸ್ಟೆಫನಿ, ಮಹತ್ವದ ನಿರ್ಧಾರ ತೆಗೆದುಕೊಂಡಳು. ಕ್ಯಾನ್ಸರ್ ಬರದಂತೆ ತಡೆಯಲು ಆಕೆ ಎರಡೂ ಸ್ತನ ತೆಗೆಯುವ ನಿರ್ಧಾರಕ್ಕೆ ಬಂದಳು.
ಗರ್ಭಿಣಿಯರಿಗೂ ಮೊಟ್ಟೆ ಒಳ್ಳೇಯದು, ಇತಿ ಮಿತಿಯಲ್ಲಿರುವಂತೆ ಇರಲಿ ಎಚ್ಚರ!
ಅಜ್ಜಿ (Grandmother) ಹಾಗೂ ಅಮ್ಮನಿಗೆ BRCA1 ರೂಪಾಂತರಗೊಂಡಿದ್ದ ಕಾರಣ ತನಗೂ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್ ಕಾಡುವ ಸಾಧ್ಯತೆಯಿದೆ ಎಂದು ಸ್ಟೆಫನಿಗೆ ಮೊದಲೇ ತಿಳಿದಿದ್ದರಿಂದ ಹೆಚ್ಚು ನೋವಾಗಲಿಲ್ಲ ಎನ್ನುತ್ತಾಳೆ ಆಕೆ. ಸ್ತನ ಕಸಿ ಮಾಡುವ ಬದಲು ಚಪ್ಪಟೆ ಎದೆ ಹೊಂದಲು ಆಕೆ ಬಯಸಿದಳು. ಈಗಾಗಲೇ ಮಗನಿರುವ ಕಾರಣ, ತನ್ನ ಸ್ತನ ಅದ್ರ ಕರ್ತವ್ಯ ಮುಗಿಸಿದೆ ಎನ್ನುವ ತೀರ್ಮಾನಕ್ಕೆ ನಾನು ಬಂದೆ. ಸ್ತನ ಕಸಿ (Transplant) ಗಿಂತ ಸ್ತನವನ್ನು ತೆಗೆಯುವುದ್ರಿಂದ ನಾನು ಹೆಚ್ಚು ಸಹಜವಾಗಿರಬಹುದೆಂದು ಭಾವಿಸಿದೆ ಎನ್ನುತ್ತಾಳೆ ಸ್ಟೆಫನಿ.
28ನೇ ವಯಸ್ಸಿನಲ್ಲಿ ಸ್ಟೆಫನಿ ಕುಟುಂಬಸ್ಥರ ನೆರವಿನಿಂದ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳಂತೆ. ಆ ನಂತ್ರ ಮತ್ತಷ್ಟು ಆತ್ಮವಿಶ್ವಾಸ (Confidence) ದಿಂದ ಜೀವನ ನಡೆಸುತ್ತಿದ್ದೇನೆ ಎನ್ನುತ್ತಾಳೆ ಸ್ಟೆಫನಿ. ನನ್ನ ಸ್ತನದ ಮೇಲೆ ನನಗೆ ಹೆಚ್ಚು ಪ್ರೀತಿ ಇರಲಿಲ್ಲ, ಹಾಗೆ ಇದೇ ಮಹಿಳೆ ಎನ್ನುವುದಕ್ಕೆ ಸಾಕ್ಷಿ ಎಂಬುದನ್ನು ಕೂಡ ನಾನು ನಂಬುವುದಿಲ್ಲ. ಹಾಗಾಗಿ ವೈದ್ಯರು ಹೇಳಿದ ನಂತ್ರ ನನಗೆ ಹೆಚ್ಚು ಶಾಕ್ ಆಗಲಿಲ್ಲ. ನಾನು ಸ್ತನ ತೆಗೆಯಲು ಸಿದ್ಧನಾದೆ ಎನ್ನುತ್ತಾಳೆ ಸ್ಟೆಫನಿ.
Women's Health: ಮುಟ್ಟಿನ ನೈರ್ಮಲ್ಯಕ್ಕೆ ಆದ್ಯತೆ ನೀಡಲು ಸ್ತ್ರೀರೋಗತಜ್ಞರು ಸೂಚಿಸುವುದ್ಯಾಕೆ?
ಸ್ತನ ಕ್ಯಾನ್ಸರ್ ಆದ ಮಹಿಳೆಯರು ಸ್ತನ ಕಸಿ ಮಾಡುವ ಬಗ್ಗೆ ಆಲೋಚನೆ ಮಾಡಬೇಕಾಗಿಲ್ಲ. ಸ್ತನ, ಮಹಿಳೆಯರ ಗುರುತು ಎಂದು ಸಮಾಜ ಹೇಳುತ್ತದೆ. ಆದ್ರೆ ಅದ್ರಲ್ಲಿ ಸತ್ಯವಿಲ್ಲ. ಸ್ತನ ಕಸಿಯಿಂದ ಆಗುವುದೇನೂ ಇಲ್ಲ. ಸ್ತನಕ್ಯಾನ್ಸರ್ ಆದ್ಮೇಲೆ ಸ್ತನ ತೆಗೆಯುವ ನಿರ್ಧಾರಕ್ಕೆ ವೈದ್ಯರು ಬಂದ್ರೆ ಅದನ್ನು ಸಹಜವಾಗಿ ಸ್ವೀಕರಿಸಿ ಎಂದು ಸ್ಟೆಫನಿ ಬೇರೆ ಮಹಿಳೆಯರಿಗೆ ಸಲಹೆ ನೀಡುತ್ತಾಳೆ. ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತ್ರ ಸ್ಟೆಫನಿ ಸಾಮಾಜಿಕ (Social) ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ತನ್ನ ಜೀವನದ ಕಥೆಯನ್ನು ಇನ್ಸ್ಟಾಗ್ರಾಮ್ ಹಾಗೂ ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ.