Asianet Suvarna News Asianet Suvarna News

Maternity Leave : ಕೇರಳ ವಿವಿ ವಿದ್ಯಾ​ರ್ಥಿ​ನಿ​ಯ​ರಿಗೆ 60 ದಿನಗಳ ಹೆರಿಗೆ ರಜೆ ಘೋಷ​ಣೆ

ಕೇರಳದಲ್ಲಿ ಮೊದಲ ಬಾರಿಗೆ, ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯವು (MGU) 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 60 ದಿನಗಳ ಹೆರಿಗೆ ರಜೆ ನೀಡಲು ನಿರ್ಧರಿಸಿದೆ, ಇದರಿಂದಾಗಿ ಅವರು ತಮ್ಮ ಅಧ್ಯಯನವನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಸಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Kerala university to grant 60 days maternity leave to students Vin
Author
First Published Dec 25, 2022, 10:00 AM IST

ಕೊಟ್ಟಾ​ಯಂ: ಕೇರ​ಳ​ದಲ್ಲಿ ಮೊಟ್ಟ​ಮೊ​ದಲ ಬಾರಿ ಮಹಾತ್ಮಾ ಗಾಂಧಿ ವಿಶ್ವ​ವಿ​ದ್ಯಾ​ಲ​ಯವು 18 ವರ್ಷ​ಕ್ಕಿಂತ ಮೇಲ್ಪಟ್ಟಪದವಿ ಹಾಗೂ ಸ್ನಾತ​ಕೋ​ತ್ತರ ಪದವಿ ವಿದ್ಯಾ​ರ್ಥಿ​ನಿ​ಯ​ರಿಗೆ 60 ದಿನ​ಗಳ ಹೆರಿಗೆ ರಜೆ (Maternity Leave) ನೀಡಲು ನಿರ್ಧ​ರಿ​ಸಿದೆ. ಈ ಸೌಲಭ್ಯ ಪಡೆ​ದು ಯಾವುದೇ ತೊಂದ​ರೆ​ಯಿ​ಲ್ಲದೇ ಅವರು ವಿದ್ಯಾ​ಭ್ಯಾಸ (Education) ಮುಂದು​ವ​ರೆ​ಸ​ಬ​ಹು​ದಾ​ಗಿ​ದೆ. ಪ್ರೊ. ಉಪ ಕುಪ​ಪತಿ ಆದ ಸಿ.ಟಿ. ಅರ​ವಿಂದ ಕುಮಾರ್‌ ಅವರ ನೇತೃ​ತ್ವದ ಸಿಂಡಿ​ಕೇಟ್‌ ಕಮಿಟಿ ಈ ಪ್ರಸ್ತಾ​ವಕ್ಕೆ ಅನು​ಮೋ​ದನೆ ನೀಡಿದೆ ಎಂದು ವಿಶ್ವ​ವಿ​ದ್ಯಾ​ಲಯ ಪ್ರಕ​ಟ​ಣೆ​ಯಲ್ಲಿ ತಿಳಿ​ಸಿದೆ.

ಈ 60 ದಿನ​ಗಳ ಹೆರಿಗೆ ರಜೆ​ಯನ್ನು ಹೆರಿಗೆ ಮುನ್ನ ಅಥವಾ ನಂತರ ತೆಗೆ​ದು​ಕೊ​ಳ್ಳಲು ಅವ​ಕಾಶ ನೀಡಲಾಗಿ​ದೆ. ಕೋರ್ಸಿ​ನ ಅವ​ಧಿ​ಯಲ್ಲಿ ಕೇವಲ 1 ಬಾರಿ ಹೆರಿಗೆ ರಜೆಗೆ ಅವಕಾಶವಿದೆ. ಮೊದಲ ಅಥವಾ 2ನೇ ಹೆರಿ​ಗೆಗೆ ಈ ರಜೆ ಪಡೆ​ದು​ಕೊ​ಳ್ಳ​ಬ​ಹು​ದಾ​ಗಿದೆ. ಆದರೆ ಮೊದಲ ಅಥವಾ ಎರಡನೆಯ ಗರ್ಭಧಾರಣೆಗೆ ಮಾತ್ರ ಮತ್ತು ಕೋರ್ಸ್ ಅವಧಿಯಲ್ಲಿ ಒಮ್ಮೆ ಮಾತ್ರ ನೀಡಲಾಗುತ್ತದೆ. ರಜೆಯ ಅವಧಿಯು ಸಾರ್ವಜನಿಕ ಮತ್ತು ಸಾಮಾನ್ಯ ರಜಾದಿನಗಳನ್ನು ಒಳಗೊಂಡಿರುತ್ತದೆ ಮತ್ತು ಬೇರೆ ಯಾವುದೇ ರಜೆಯನ್ನು ಅದರೊಂದಿಗೆ ಸೇರಿಸಲಾಗುವುದಿಲ್ಲ. 

Pregnancy Tips: ಪತ್ನಿಯ ಹೆರಿಗೆ ಸಮಯದಲ್ಲಿ ಪುರುಷರಿಗೆ ಪೆಟರ್ನಿಟಿ ಲೀವ್. ಇದು ನಿಮ್ಗೆ ಗೊತ್ತಿತ್ತಾ ?

ಡಿಗ್ರಿ ಹಾಗೂ ಪಿಜಿ ವಿದ್ಯಾರ್ಥಿನಿಯರಿಗೆ ಅನ್ವಯ
ಗರ್ಭ​ಪಾ​ತ, ಟ್ಯೂಬೆ​ಕ್ಟ​ಮಿ​ಗಾಗಿ 14 ದಿನ​ಗಳ ರಜೆ ತೆಗೆ​ದು​ಕೊ​ಳ್ಳಲು ಅವ​ಕಾಶ ನೀಡ​ಲಾ​ಗಿದೆ. ಹೆರಿಗೆ ರಜೆ ತೆಗೆ​ದು​ಕೊಂಡ ಅವ​ಧಿ​ಯಲ್ಲಿ ಪರೀ​ಕ್ಷೆ​ಗಳು ನಡೆ​ದರೆ ಆ ಪರೀ​ಕ್ಷೆ​ಗ​ಳನ್ನು ಮುಂದಿನ ಸೆಮಿ​ಸ್ಟ​ರ್‌​ನಲ್ಲಿ ಬರೆ​ಯುವ ಅವ​ಕಾಶ ನೀಡ​ಲಾ​ಗಿದೆ. ನೋಂದಾ​ಯಿತ ವೈದ್ಯ​ರಿಂದ ಪಡೆ​ದು​ಕೊಂಡ ವೈದ್ಯ​ಕೀಯ ಪ್ರಮಾ​ಣ​ಪ​ತ್ರ​ವನ್ನು ರಜೆ ಪಡೆ​ವ 3 ದಿನ​ಗಳ ಮೊದಲು ರಜಾ ಅರ್ಜಿ​ಯೊಂದಿಗೆ ಸಲ್ಲಿ​ಸು​ವುದು ಕಡ್ಡಾ​ಯ​ವಾ​ಗಿದೆ ಎಂದು ವಿವಿ ಹೇಳಿದೆ.

ಗರ್ಭಾವಸ್ಥೆಯ ಕಾರಣದಿಂದಾಗಿ ವಿದ್ಯಾರ್ಥಿಗಳ ಅಧ್ಯಯನವು ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಒಂದು ಸೆಮಿಸ್ಟರ್‌ನಲ್ಲಿ ಹೆರಿಗೆ ರಜೆ ತೆಗೆದುಕೊಳ್ಳುವವರಿಗೆ ಆ ಸೆಮಿಸ್ಟರ್‌ನ ಪರೀಕ್ಷೆಗಳಿಗೆ ನೋಂದಾಯಿಸಲು ಅನುಮತಿಸಲಾಗುವುದು, ಆದರೆ ಮುಂದಿನ ಸೆಮಿಸ್ಟರ್‌ನಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಗೆ ಅದನ್ನು ಪೂರಕವಾಗಿ ಬರೆಯಬಹುದು. ಆದಾಗ್ಯೂ, ಅವರು ಒಂದು ಸೆಮಿಸ್ಟರ್ ಅನ್ನು ಕಳೆದುಕೊಳ್ಳುವುದಿಲ್ಲ ಏಕೆಂದರೆ ಅವರ ಹೆರಿಗೆ ರಜೆ ಮುಗಿದ ನಂತರ, ಅವರು ತಮ್ಮ ಸ್ವಂತ ಬ್ಯಾಚ್‌ನೊಂದಿಗೆ ಪ್ರಸ್ತುತ ಸೆಮಿಸ್ಟರ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಬಹುದಾಗಿದೆ.

ತಾಯ್ತನ, ಕೆರಿಯರ್ ಒಟ್ಟಿಗೆ ನಿಭಾಯಿಸೋ ಕಷ್ಟ ಹೆಣ್ಣಿಗಷ್ಟೇ ಗೊತ್ತು ಎಂದ ಕೋರ್ಟ್

ಹುಟ್ಟಿದ ಬಳಿಕ ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ
ಜನನದ ಬಳಿಕ ಮಗು ಮೃತಪಟ್ಟರೂ ಎಲ್ಲ ಮಹಿಳಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೂ (Central Government Employees) 60 ದಿನಗಳ ವಿಶೇಷ ಹೆರಿಗೆ ರಜೆ ನೀಡಲಾಗುವುದು ಎಂದು ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿದೆ. ಮೃತ ಮಗು ಜನನದ ವೇಳೆಯಲ್ಲೇ (Still Birth) ಅಥವಾ ಮಗುವಿನ ಜನನದ ಬಳಿಕ ಅದು ಮೃತಪಟ್ಟಲ್ಲಿ ತಾಯಿಗಾಗುವ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರಜೆ ನೀಡಲಾಗುವುದು. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಜತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (Department of Personnel and Training) ತಿಳಿಸಿದೆ. 

'ಕೇಂದ್ರ ಸರ್ಕಾರಿ ಮಹಿಳಾ ಉದ್ಯೋಗಿಯು ಈಗಾಗಲೇ ಹೆರಿಗೆ ರಜೆ ಮೇಲಿದ್ದರೆ ಅವರು ಮಗುವಿನ ಮೃತ್ಯುವಿಗಿಂತ ಮೊದಲು ಪಡೆದ ರಜೆಯನ್ನು ಅವರು ಖಾತೆಯಲ್ಲಿದ್ದ ಬೇರೆ ರಜೆಯಾಗಿ ಪರಿವರ್ತಿಸಬೇಕು. ಇದಕ್ಕಾಗಿ ಯಾವುದೇ ವೈದ್ಯಕೀಯ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಬಾರದು. ಮಗುವಿನ ಮೃತ್ಯು ಬಳಿಕ 60 ದಿನಗಳ ವಿಶೇಷ ಹೆರಿಗೆ ರಜೆ (Special Maternity Leave) ನೀಡಬೇಕು. ಅದೇ ರೀತಿ ಮಹಿಳಾ ಸಿಬ್ಬಂದಿ ಮೊದಲೇ ಹೆರಿಗೆ ರಜೆ ಮೇಲಿರದಿದ್ದರೂ, ಅವರಿಗೆ ಮಗುವಿನ ಮೃತ್ಯು ಬಳಿಕ 60 ದಿನಗಳ ವಿಶೇಷ ಹೆರಿಗೆ ರಜೆ ಸೌಲಭ್ಯವನ್ನು ಒದಗಿಸಬೇಕು’ ಎಂದು ಇಲಾಖೆ ಸೂಚಿಸಿದೆ.

Follow Us:
Download App:
  • android
  • ios