Asianet Suvarna News Asianet Suvarna News

Just Looking Like A Wow ಅಂತಾ ಮೊದಲು ಹೇಳಿದ್ಯಾರು ಗೊತ್ತಾ?

ಅದೃಷ್ಟ ಯಾವಾಗ ಕೈ ಹಿಡಿಯುತ್ತೆ ಗೊತ್ತಾಗಲ್ಲ. ಮುಂದೆ ಏನೋ ಆಗಲಿದೆ ಎನ್ನುವ ಕಲ್ಪನೆ ಇಲ್ಲದೆ ಮಹಿಳೆ ಲೈವ್ ವಿಡಿಯೋದಲ್ಲಿ ಡೈಲಾಗ್ ಹೇಳ್ತಾಳೆ. ಆದ್ರೆ ಆ ಡೈಲಾಗ್ ಆಕೆ ಜೀವನದ ದಿಕ್ಕನ್ನೇ ಬದಲಿಸುತ್ತೆ. 
 

Just Looking Like A Wow Trend Know How It Started Woman Behind It roo
Author
First Published Nov 9, 2023, 2:43 PM IST

ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಸಮಯದಲ್ಲಿ ಒಂದೊಂದು ಟ್ರೆಂಡ್ ಜಾಲ್ತಿಯಲ್ಲಿರುತ್ತದೆ. ಈಗ ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಟ್ರೆಂಡ್. ರೀಲ್ಸ್, ಶಾರ್ಟ್ಸ್ ಸೇರಿದಂತೆ ಎಲ್ಲ ಕಡೆ ನೀವು ಈ ಆಡಿಯೋ ಇಟ್ಕೊಂಡು ವಿಡಿಯೋ ಮಾಡೋದನ್ನು ನೋಡ್ಬಹುದು. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಈ ವಿಡಿಯೋ ಮಾಡ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ ಕೂಡ ಈ ವಿಡಿಯೋ ಮಾಡೋದ್ರಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅನೇಕ ಮೀಮ್ಸ್ ಗಳನ್ನು ನೀವು ನೋಡ್ಬಹುದು.

ಸಾಮಾಜಿಕ ಜಾಲತಾಣ (Social Media ) ದಲ್ಲಿ ಹೊಸ ಸಾಂಗ್, ಹಳೆ ಸಾಂಗ್, ಹಳೆ ಸಿನಿಮಾ ಡೈಲಾಗ್ ಗಳು ಟ್ರೆಂಡ್ ಆಗ್ತಿರುತ್ತವೆ. ಒಬ್ಬರು ಮಾಡಿದ್ದನ್ನೇ ಇನ್ನೊಬ್ಬರು ಅನುಸರಿಸ್ತಾರೆ. ಕಾರ್ಯಕ್ರಮದಲ್ಲಿ ಆಡಿದ ಮಾತುಗಳು, ಜೋಕ್ ಗಳು ಕೂಡ ರೀಲ್ಸ್ (reels) ನಲ್ಲಿ ಜಾ ಗಪಡೆಯುತ್ತವೆ. ಅನೇಕ ಬಾರಿ ಆ ಮಾತನ್ನು ಯಾರು ಮೊದಲು ಹೇಳಿದ್ರು ಅನ್ನೋದೇ ನಮಗೆ ತಿಳಿದಿರೋದಿಲ್ಲ. ವರಿಜಿನಲ್ ಆಡಿಯೋ ಹುಡುಕೋದು ಕಷ್ಟವಾಗುತ್ತದೆ. Just Looking Like A Wow ಎಂಬ ಮಾತನ್ನು ಯಾರು ಮೊದಲು ಹೇಳಿದ್ದರು ಅನ್ನೋದು ಈಗ್ಲೂ ಅನೇಕರಿಗೆ ತಿಳಿದಿಲ್ಲ. ನಾವಿಂದು ಸುಂದರ ಧ್ವನಿಯಲ್ಲಿ ಮೊದಲ ಬಾರಿ Just Looking Like A Wow ಎಂದವರು ಯಾರು ಎಂಬುದನ್ನು ನಿಮಗೆ ತಿಳಿಸ್ತೇವೆ.

ನಿತೀಶ್ ಕುಮಾರ್ ಸೆಕ್ಸ್‌ ಹೇಳಿಕೆಗೆ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್ ವಾಗ್ದಾಳಿ: ಮಹಿಳೆ ಪರ ನಿಲುವಿಗೆ ಮೋದಿಗೆ ಶ್ಲಾಘನೆ

ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದಿದ್ದು ಯಾರು? : ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದು ಮೊದಲ ಬಾರಿ ಹೇಳಿದ್ದು ಜಾಸ್ಮೀನ್ ಕೌರ್. ದೆಹಲಿಯ ನಿವಾಸಿ ಜಾಸ್ಮೀನ್ ಕೌರ್. ಅವರು ತಮ್ಮ ವಿಡಿಯೋ ಒಂದರಲ್ಲಿ ಮೊದಲ ಬಾರಿ ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದಿದ್ದರು. ಬುಟಿಕ್ ನಡೆಸುಚ ಜಾಸ್ಮೀನ್ ಕೌರ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದಿದ್ದೇ ತಡ, ಈ ಡೈಲಾಗ್ ವೈರಲ್ ಆಗಿದೆ. 

ಬಾಡಿಗೆ ತಾಯಂದಿರಿಗೂ ಹೆರಿಗೆ ರಜೆ ಪಡೆಯುವ ಹಕ್ಕಿದೆ; ಹೈಕೋರ್ಟ್‌ನಿಂದ ಮಹತ್ತರ ಆದೇಶ

 ಜೈಸ್ಮೀನ್ ಕೌರ್ ಯಾರು? : ಮೊದಲೇ ಹೇಳಿದಂತೆ ಜಾಸ್ಮೀನ್ ಕೌರ್ ಬುಟಿಕ್ ನಡೆಸ್ತಿದ್ದಾರೆ. 18 ವರ್ಷದಿಂದ ತಮ್ಮ ಮಗಳ ಜೊತೆ ಅವರು ಈ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಬಟ್ಟೆ ವಿಡಿಯೋಗಳನ್ನು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ತಿರುತ್ತಾರೆ. ಅಲ್ಲಿ ಅವರ ವಿಡಿಯೋ ನೋಡುವವರ ಸಂಖ್ಯೆ ಸಾಕಷ್ಟಿದೆ. ಒಂದು ದಿನ ಅವರು ವಿಡಿಯೋದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೋರಿಸ್ತಿದ್ದರು. ಬಟ್ಟೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸೋ ಬ್ಯುಟಿಫುಲ್. ಸೋ ಎಲಿಗೆಂಟ್. ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದಿದ್ದರು. ಅಷ್ಟೇ ಅಲ್ಲಿಂದ್ಲೇ ಅವರ ಡೈಲಾಗ್ ವೈರಲ್ ಆಯ್ತು. ಸೋಷಿಯಲ್ ಮೀಡಿಯಾ ಜನ ಮೆಚ್ಚುವ ರೀತಿಯಲ್ಲೇ ಜಾಸ್ಮೀನ್ ಕೌರ್ ಕೂಡ ಡೈಲಾಗ್ ಹೇಳಿದ್ದರು. 

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ ಜಾಸ್ಮೀನ್ ಕೌರ್, ತುಂಬಾ ಖುಷಿಯಾಗ್ತಿದೆ. ಇದಕ್ಕೆ ಅಂತ್ಯವಿಲ್ಲ ಎಂದಿದ್ದಾರೆ. ಮೂರು ವರ್ಷಗಳಿಂದ ಅವರು ಇನ್ಸ್ಟಾಗ್ರಾಮ್ ಲೈವ್ ಸೆಷನ್‌ ನಡೆಸುತ್ತಿದ್ದಾರೆ. ಇದ್ರ ಬಗ್ಗೆ ಮಾಹಿತಿ ನೀಡಿದ ಅವರು, ಸ್ಟಾರ್ಡಮ್ ತಲುಪಲು ಹೇಗೆ ಒಂದು ಕ್ಷಣ ಸಾಕಾಯ್ತು ಎಂಬುದನ್ನು ಹೇಳಿದ್ದಾರೆ. ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ ಕೂಡ ಈ ಡೈಲಾಗ್ ವಿಡಿಯೋ ಮಾಡಿದ್ದು, ನನಗೆ ತುಂಬಾ ಸಂತೋಷವಾಗ್ತಿದೆ. ನನ್ನ ಜೀವನ ಬದಲಾಗಿದೆ. ಒಂದಾದ್ಮೇಲೆ ಒಂದರಂತೆ ನಾನು ಸಂದರ್ಶನ ನೀಡ್ತಿದ್ದೇನೆ ಎಂದು ಜಾಸ್ಮೀನ್ ಕೌರ್ ಹೇಳಿದ್ದಾರೆ.  ಇಷ್ಟು ದಿನದ ಕಷ್ಟಕ್ಕೆ ಈಗ ಫಲ ಸಿಕ್ಕಿದೆ ಎನ್ನುವ ಜಾಸ್ಮೀನ್ ಕೌರ್, ಪ್ರತಿ ದಿನ ಲೈವ್ ಮೂಲಕ ತಮ್ಮಲ್ಲಿರುವ ಬಟ್ಟೆಯ ಕಲೆಕ್ಷನ್ ಗಳನ್ನು ಜನರ ಮುಂದಿಡುತ್ತಿದ್ದಾರೆ. ಕಾಲ ಹೇಗಿರುತ್ತೆ ಎನ್ನಲು ಸಾಧ್ಯವಿಲ್ಲ. ಮತ್ತ್ಯಾರೋ ಒಳ್ಳೆ ಡೈಲಾಗ್ ಹೇಳಿ ಅವರೂ ಪ್ರಸಿದ್ಧಿಪಡೆಯಬಹುದು ಎನ್ನುತ್ತಾರೆ ಜಾಸ್ಮೀನ್ ಕೌರ್. 
 

Follow Us:
Download App:
  • android
  • ios