ವಾಟ್ಸಾಪ್‌ನಲ್ಲಿ 'ಎಮೋಜಿ ರಿಯಾಕ್ಷನ್' ಸೇರಿದಂತೆ ಹಲವು ಫೀಚರ್ಸ್ ಬಿಡುಗಡೆ: ಹೊಸದೇನಿದೆ ನೋಡಿ

WhatsApp Reaction Feature:ಟೆಲಿಗ್ರಾಮ್, ಐಮೆಸೇಜ್, ಸ್ಲಾಕ್ ಮತ್ತು ಮೆಟಾದ ಇನ್‌ಸ್ಟಾಗ್ರಾಮ್‌ನಲ್ಲಿ ನಾವು ಪಡೆಯುವ ಸಂದೇಶಗಳಿಗೆ ನಾವು ಎಮೋಜಿಗಳನ್ನು ಹೇಗೆ ಸೇರಿಸಬಹುದು ಎಂಬುದರಂತೆಯೇ ವಾಟ್ಸಾಪ್‌ ಎಮೋಜಿಗಳು ಕೆಲಸ ಮಾಡಲಿವೆ. 

Whatsapp Latest update Reactions files Size 2GB Group limit 512 members and more features mnj

WhatsApp Latest Features: ಮೆಟಾ ಒಡೆತನದ ಮೇಸೆಜಿಂಗ್‌ ಪ್ಲಾಟಫಾರ್ಮ್‌ ವಾಟ್ಸಾಪ್ ತನ್ನ ಎಲ್ಲಾ ಬಳಕೆದಾರರಿಗೆ ಎಮೋಜಿ ಪ್ರತಿಕ್ರಿಯೆಗಳನ್ನು‌ (Emoji Reactions) ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಈ ಮೂಲಕ ಟೆಲಿಗ್ರಾಮ್, ಆಪಲ್‌ನ ಐಮೇಸೆಜ್ ಮತ್ತು ಸ್ಲ್ಯಾಕ್‌ನಂತಹ ಪ್ಲಾಟಫಾರ್ಮ್ಸ್‌ಗಳ ವಿರುದ್ದ ವಾಟ್ಸಾಪ್‌ ಸ್ಪರ್ಧಿಸಲಿದೆ. ಎಮೋಜಿಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ನಲ್ಲಿ ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳಿಗೆ ಪ್ರತಿಕ್ರಿಯಿಸುವ ವೈಶಿಷ್ಟ್ಯವನ್ನು ಕಳೆದ ತಿಂಗಳು ಘೋಷಿಸಲಾಗಿತ್ತು. ಮತ್ತು ಕಳೆದ ಕೆಲವು ಸಮಯದಿಂದ ಈ ವೈಶಿಷ್ಟ್ಯವನ್ನು ವಾಟ್ಸಾಪ್ ಪರೀಕ್ಷಿಸುತಿತ್ತು. 

ಪ್ರತಿಕ್ರಿಯೆಗಳ ಜೊತೆಗೆ, ವಾಟ್ಸಾಪ್ ಫೈಲ್‌ಗಳನ್ನು ಹಂಚಿಕೊಳ್ಳುವ ಗಾತ್ರದ ಮಿತಿಯನ್ನು ಅಸ್ತಿತ್ವದಲ್ಲಿರುವ 100MB ಹಂಚಿಕೆಯಿಂದ 2GB ವರೆಗೆ ಹೆಚ್ಚಿಸಲಿದೆ. ಅಲ್ಲದೇ ಮೆಟಾ ಒಡೆತನದ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಕ್ರಮೇಣ ಗುಂಪಿನ ಗಾತ್ರದ ಮಿತಿಯನ್ನು 256 ರಿಂದ 512 ಸದಸ್ಯರಿಗೆ ವಿಸ್ತರಿಸಲಿದೆ. 

ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯಲ್ಲಿ ಎಮೋಜಿ ಪ್ರತಿಕ್ರಿಯೆಗಳು ಲಭ್ಯವಿದೆ ಎಂದು ಮೆಸೇಜಿಂಗ್ ಅಪ್ಲಿಕೇಶನ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಗುರುವಾರ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಪ್ರತಿಕ್ರಿಯೆಗಳ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ವಾಟ್ಸಾಪ್ ಸ್ಟೇಟಸ್‌ನಲ್ಲಿ ಲೊಕೇಶನ್ ಸ್ಟಿಕ್ಕರ್‌ ಸೇರಿಸುವುದು ಹೇಗೆ?

ವ್ಯಕ್ತಿಗಳಿಂದ ಮತ್ತು ಗುಂಪು ಚಾಟ್‌ಗಳಲ್ಲಿ ಸ್ವೀಕರಿಸುವ ನಿರ್ದಿಷ್ಟ ಸಂದೇಶಗಳಿಗೆ ಪಠ್ಯದಲ್ಲಿ ಪ್ರತಿಕ್ರಿಯೆಗಳನ್ನು ಕಳುಹಿಸುವ ಬದಲಾಗಿ ಜನರು ತಮ್ಮ ಭಾವನೆಗಳನ್ನು ತ್ವರಿತವಾಗಿ ವ್ಯಕ್ತಪಡಿಸುವುದು ಪ್ರತಿಕ್ರಿಯೆಗಳ ಉದ್ದೇಶವಾಗಿದೆ. ಕಳೆದ ತಿಂಗಳು ವಾಟ್ಸಾಪ್ ಪ್ರತಿಕ್ರಿಯೆಗಳ ಆಗಮನದ ಜತೆಗೆ ಸಮುದಾಯಗಳು ಸೇರಿದಂತೆ ಇತರ ದೊಡ್ಡ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿತ್ತು. ಈ ವೈಶಿಷ್ಟ್ಯಗಳು ಕಳೆದ ಕೆಲವು ತಿಂಗಳುಗಳಿಂದ ಪರೀಕ್ಷೆಯಲ್ಲಿವೆ.

ಯಾವೆಲ್ಲಾ ಎಮೋಜಿಸ್?:  ಪ್ರತಿಕ್ರಿಯೆಗಳನ್ನು ಬಳಸಿಕೊಂಡು, ವಾಟ್ಸಾಪ್ ಬಳಕೆದಾರರು ತಮ್ಮ ಚಾಟ್‌ಗಳಿಗೆ ಲೈಕ್, ಲವ್, ಲಾಫ್, ಸರ್‌ಪ್ರೈಸ್, ದುಃಖ ಮತ್ತು ಥ್ಯಾಂಕ್ಸ್ ಮುಂತಾದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ಪರೀಕ್ಷೆಯಗಳಲ್ಲಿ ಕಾಣಿಸಿಕೊಂಡ ಉಲ್ಲೇಖದ ಪ್ರಕಾರ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳಿಗಾಗಿ ಆಯ್ಕೆ ಮಾಡಲು ಶೀಘ್ರದಲ್ಲೇ ಎಮೋಜಿಗಳ ಆಯ್ಕೆಯನ್ನು ಪಡೆಯಬಹುದು. 

ಬಳಸುವುದು ಹೇಗೆ?:  ಪ್ರತಿಕ್ರಿಯೆಯನ್ನು ಸೇರಿಸಲು, ನೀವು ಪ್ರತಿಕ್ರಿಯಿಸಲು ಬಯಸುವ ಸಂದೇಶದ ಮೇಲೆ ದೀರ್ಘವಾಗಿ ಒತ್ತಿ ಮತ್ತು ನಂತರ ಪ್ರದರ್ಶಿಸಲಾದ ಎಮೋಜಿಯನ್ನು ಆಯ್ಕೆ ಮಾಡಲು ಟ್ಯಾಪ್ ಮಾಡಬೇಕಾಗುತ್ತದೆ. ನೀವು ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿದ ನಂತರ ಪ್ರತಿಕ್ರಿಯಿಸಿದ ಸಂದೇಶವನ್ನು ಕಳುಹಿಸುವವರು ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ.

FAQ ಪುಟದಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ನೀವು ಪ್ರತಿ ಸಂದೇಶಕ್ಕೆ ಒಂದು ಪ್ರತಿಕ್ರಿಯೆಯನ್ನು ಮಾತ್ರ ಸೇರಿಸಬಹುದು. ಇದರರ್ಥ ನೀವು ಒಂದು ನಿರ್ದಿಷ್ಟ ಸಂದೇಶದಲ್ಲಿ ಬಹು ಪ್ರತಿಕ್ರಿಯೆಗಳನ್ನು ನೀಡಲಾಗುವುದಿಲ್ಲ. ಆದರೆ ನೀವು ಪ್ರತಿಕ್ರಿಯಿಸಿದ ಸಂದೇಶದ ಮೇಲೆ ದೀರ್ಘಕಾಲ ಒತ್ತುವ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ಬದಲಾಯಿಸಬಹುದು ಮತ್ತು ನಂತರ ಬೇರೆ ಎಮೋಜಿಯನ್ನು ಟ್ಯಾಪ್ ಮಾಡಬಹುದು.

ಇದನ್ನೂ ಓದಿವಾಟ್ಸಾಪ್‌ ಖಾತೆ‌ ಸುರಕ್ಷಿತವಾಗಿಡಲು ಈ 7 ಭದ್ರತಾ ಸಲಹೆಗಳನ್ನು ನೀವು ತಿಳಿದಿರಲೇಬೇಕು

ನಿಮ್ಮ ಸಂದೇಶದ ಪ್ರತಿಕ್ರಿಯೆಯನ್ನು ಸಹ ನೀವು ತೆಗೆದುಹಾಕಬಹುದು. ಇದಕ್ಕಾಗಿ, ನೀವು ಪ್ರತಿಕ್ರಿಯಿಸಿದ ಸಂದೇಶವನ್ನು ನೀವು ದೀರ್ಘವಾಗಿ ಒತ್ತಿ ಮತ್ತು ಅದನ್ನು ತೆಗೆದುಹಾಕಲು ನೀವು ಪ್ರತಿಕ್ರಿಯಿಸಿದ ಎಮೋಜಿಯನ್ನು ಟ್ಯಾಪ್ ಮಾಡಬೇಕಾಗುತ್ತದೆ. ನೀವು ಪ್ರತಿಕ್ರಿಯೆಯನ್ನು ತೆಗೆದುಹಾಕಿದರೆ ಸಂದೇಶವನ್ನು ಕಳುಹಿಸುವವರು ಅಧಿಸೂಚನೆಯನ್ನು ಸ್ವೀಕರಿಸುವುದಿಲ್ಲ.

ಟೆಲಿಗ್ರಾಮ್, ಐಮೆಸೇಜ್, ಸ್ಲಾಕ್ ಮತ್ತು ಮೆಟಾದ ಇನ್‌ಸ್ಟಾಗ್ರಾಮ್‌ನಲ್ಲಿ ನಾವು ಪಡೆಯುವ ಸಂದೇಶಗಳಿಗೆ ನಾವು ಎಮೋಜಿಗಳನ್ನು ಹೇಗೆ ಸೇರಿಸಬಹುದು ಎಂಬುದರಂತೆಯೇ ವಾಟ್ಸಾಪ್‌ ಎಮೋಜಿಗಳು ಕೆಲಸ ಮಾಡಲಿವೆ.  ಸುಮಾರು ಒಂದು ವಾರದಲ್ಲಿ ಪ್ರತಿಕ್ರಿಯೆಗಳು ವೈಶಿಷ್ಟ್ಯ ಎಲ್ಲರಿಗೂ ಲಭ್ಯವಿರುತ್ತವೆ ಎಂದು ವರದಿಗಳು ಸೂಚಿಸಿವೆ. 

2GB ಫೈಲ್ಸ್‌ ಶೇರ್:‌ ಪ್ರತಿಕ್ರಿಯೆಗಳ ಜೊತೆಗೆ, ಪಿಡಿಎಫ್‌ಗಳನ್ನು (PDF)ಒಳಗೊಂಡಂತೆ  2GBಯಷ್ಟು ಫೈಲ್‌ಗಳನ್ನು ಹಂಚಿಕೊಳ್ಳಲು ವಾಟ್ಸಾಪ್ ತನ್ನ ಫೈಲ್ ಗಾತ್ರದ ಮಿತಿಯನ್ನು ವಿಸ್ತರಿಸುತ್ತಿದೆ. ಇದು ಗಮನಾರ್ಹವಾಗಿ ಡಾಕ್ಯುಮೆಂಟ್‌ಗಳಿಗೆ ಸೀಮಿತವಾಗಿರುತ್ತದೆ ಮತ್ತು ಫೋಟೋಗಳು, ವೀಡಿಯೊಗಳು ಮತ್ತು ಧ್ವನಿ ಸಂದೇಶಗಳಂತಹ ಮಾಧ್ಯಮ ಫೈಲ್‌ಗಳಿಗೆ ಅಲ್ಲ. ಆ ಫೈಲ್‌ಗಳ ಮಿತಿ ಇನ್ನೂ 16MB ಆಗಿರುತ್ತದೆ. ಹೆಚ್ಚಿದ ಫೈಲ್ ಗಾತ್ರದ ಮಿತಿ - ಪ್ರತಿಕ್ರಿಯೆಗಳಂತೆಯೇ - ವೈಯಕ್ತಿಕ ಚಾಟ್‌ಗಳು ಮತ್ತು ಗುಂಪುಗಳೆರಡಕ್ಕೂ ಅನ್ವಯಿಸುತ್ತದೆ.

‌ಅಲ್ಲದೇ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಡೀಫಾಲ್ಟ್ ಗರಿಷ್ಠ ಗಾತ್ರದ ಗುಂಪುಗಳನ್ನು 512 ಸದಸ್ಯರಿಗೆ ವಿಸ್ತರಿಸುತ್ತಿದೆ ಎಂದು ಪ್ರತ್ಯೇಕವಾಗಿ ಘೋಷಿಸಿದೆ. ಇದರರ್ಥ ವಾಟ್ಸಾಪ್‌ ಗುಂಪುಗಳು ಮುಂಬರುವ ದಿನಗಳಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಲು ಸಾಧ್ಯವಾಗುತ್ತದೆ.

Latest Videos
Follow Us:
Download App:
  • android
  • ios