Whatsapp ನಿಂದ ಮತ್ತೊಂದು ಫೀಚರ್, ಗ್ರೂಪ್ ಸದಸ್ಯರ ಮಿತಿ 512ಕ್ಕೆ ಏರಿಕೆ!

  • ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿರುವ ವ್ಯಾಟ್ಸ್ಆ್ಯಪ್
  • 256 ಇದ್ದ ವ್ಯಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರ ಮಿತಿ ಹೆಚ್ಚಿಳ 
  • ಬೀಟಾ ವರ್ಶನ್‌ಲ್ಲಿ ಹೊಸ ಫೀಚರ್ಸ್ ಲಭ್ಯ
WhatsApp introduce new feature Group can now accommodate 512 members instead of 256 ckm

ನವದೆಹಲಿ(ಜೂ.12): ವಿಶ್ವದ ಅತೀ ದೊಡ್ಡ ಮೆಸೇಂಜಿಂಗ್ ಆ್ಯಪ್ ವ್ಯಾಟ್ಸ್ಆ್ಯಪ್ ಗ್ರಾಹಕರಿಗೆ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಪರಿಚಯಿಸಿದೆ. ಹೊಸ ಫೀಚರ್ಸ್ ಪ್ರಕಾರ ವ್ಯಾಟ್ಸ್ಆ್ಯಪ್ ಗ್ರೂಪ್ ಸದಸ್ಯರ ಮಿತಿಯನ್ನು 512ಕ್ಕೆ ಏರಿಕೆ ಮಾಡಿದೆ.

ಸದ್ಯ ವ್ಯಾಟ್ಸ್ಆ್ಯಪ್ ಗ್ರೂಪ ಸದಸ್ಯರ ಮಿತಿ 256 ಮಾತ್ರ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರೂಪ್‌ಗೆ ಸದಸ್ಯರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಹೊಸ ಫೀಚರ್ಸ್ ಪ್ರಕಾರ 512 ಮಂದಿಯನ್ನು ಗ್ರೂಪ್ ಸದಸ್ಯರಾಗಿ ಸೇರಿಸಿಕೊಳ್ಳಲು ಸಾಧ್ಯವಿದೆ. ಈ ಹೊಸ ಫೀಚರ್ಸ್ ಸದ್ಯ ವ್ಯಾಟ್ಸ್ಆ್ಯಪ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಫೀಚರ್ಸ್ ಆ್ಯಪ್‌‌ನಲ್ಲಿ ಲಭ್ಯವಾಗಲಿದೆ.

WhatsApp ಹೊಸ ಫೀಚರ್ಸ್: ಯಾರಿಗೂ ಗೊತ್ತಾಗದಂತೆ ಗ್ರೂಪಿನಿಂದ ನಿರ್ಗಮಿಸಬಹುದು!

ಇದೇ ತಿಂಗಳಲ್ಲಿ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಲಭ್ಯವಾಗಲಿದೆ. ಸದ್ಯ ವ್ಯಾಟ್ಸ್‌ಆ್ಯಪ್ ಬೀಟಾ ಬಳಕೆದಾರರು ಆ್ಯಂಡ್ರಾಯ್ಡ್ ಹಾಗೂ ioS ಬಳಕೆದಾರರು ಹೊಸ ಫೀಚರ್ಸ್ ಬಳಕೆ ಮಾಡಲು ಸಾಧ್ಯವಿದೆ. ಹಲವು ಬಳಕೆದಾರರು ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಿಸಲು ಕೋರಿದ್ದರು. ಇದೀಗ ಮನವಿಯನ್ನು ಪುರಸ್ಕರಿಸಿರುವ ವ್ಯಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರ ಮಿತಿ ಹೆಚ್ಚಿಸಿದೆ.

ವಾಟ್ಸಾಪ್‌ನಲ್ಲಿ ಇನ್ನು ಏಕಕಾಲಕ್ಕೆ 32 ಜನರಿಗೆ ಕರೆ ಮಾಡಬಹುದು!
ವಾಟ್ಸಾಪ್‌ನಲ್ಲಿ ಏಕಕಾಲಕ್ಕೆ 32 ಜನರ ಗ್ರುಪ್‌ ವಾಯ್‌್ಸ ಕಾಲ್‌ ಮಾಡುವುದು, 2 ಜಿಬಿ (ಗೀಗಾ ಬೈಟ್‌) ಗಾತ್ರದ ಫೈಲ್‌ಗಳನ್ನು ರವಾನಿಸುವುದು ಸೇರಿದಂತೆ ಹಲವಾರು ಹೊಸ ಫೀಚರ್‌ಗಳನ್ನು ಸೇರಿಸಲಾಗುವುದು ಎಂದು ಗುರುವಾರ ಕಂಪನಿ ಘೋಷಿಸಿದೆ.

ಪ್ರಸ್ತುತ ವಾಟ್ಸಾಪ್‌ನಲ್ಲಿ ಕೇವಲ 8 ಜನರಿಗೆ ಮಾತ್ರ ಏಕಕಾಲಕ್ಕೆ ಗ್ರುಪ್‌ ವಾಯ್‌್ಸ ಕಾಲ್‌ ಮಾಡಬಹುದಾಗಿದೆ. ಅಲ್ಲದೇ 1 ಜಿಬಿಕ್ಕಿಂತಲೂ ಕಡಿಮೆ ಗಾತ್ರದ ಫೈಲ್‌ಗಳನ್ನು ಮಾತ್ರ ರವಾನೆ ಮಾಡಬಹುದಾಗಿದೆ.‘ಇದಲ್ಲದೇ ವಾಟ್ಸಾಪ್‌ ಗ್ರುಪ್‌ನ ಎಡ್ಮಿನ್‌, ಯಾವುದೇ ಸಮಯದಲ್ಲೂ ಸಂದೇಶವನ್ನು ಅಳಸಿಹಾಕಬಹುದು. ಅಳಿಸಿ ಹಾಕಿದ ಸಂಭಾಷಣೆಗಳು ಗ್ರುಪ್‌ನಲ್ಲಿರುವ ಸದಸ್ಯರಿಗೆ ಕಾಣಿಸದಂತೆ ಮಾಡುವ ಹೊಸ ಫೀಚರ್‌ ಅನ್ನು ಅಳವಡಿಸಲಾಗುವುದು’ ಕಂಪನಿ ವಕ್ತಾರ ತಿಳಿಸಿದ್ದಾರೆ.

ವಾಟ್ಸಾಪ್‌ನಲ್ಲಿ‌ ಕಳುಹಿಸಿದ ಮೆಸೇಜ್‌ ಎಡಿಟ್‌ ಮಾಡಲು ಶೀಘ್ರದಲ್ಲೇ ಹೊಸ ಫೀಚರ್‌?

ವಾಟ್ಸಾಪ್‌ನಲ್ಲಿಎಡಿಟ್‌ ಬಟನ್‌
ಟ್ವೀಟರ್‌ಗಿಂತಲೂ ಮೊದಲೇ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಎಡಿಟ್‌ ಬಟನ್‌ ಒದಗಿಸುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಸಂದೇಶ ರವಾನಿಸಿದ ಮೇಲೆ ಅದನ್ನು ಅಳಿಸಿ ಹಾಕಬಹುದೇ ಹೊರತು ತಿದ್ದಲು ಸಾಧ್ಯವಿಲ್ಲ. ಆದರೆ ಎಡಿಟ್‌ ಬಟನ್‌ ಒದಗಿಸುವುದರೊಂದಿಗೆ ರವಾನಿಸಿದ ಮೇಲೂ ಸಂದೇಶವನ್ನು ಮತ್ತೆ ಎಡಿಟ್‌ ಮಾಡುವುದು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಕಳೆದ 5 ವರ್ಷಗಳ ಹಿಂದೆಯೇ ಈ ಹಿನ್ನೆಲೆಯಲ್ಲಿ ಕಾರ್ಯವನ್ನು ವಾಟ್ಸಾಪ್‌ ಆರಂಭಿಸಿದ್ದು, ಎಡಿಟ್‌ ಬಟನ್‌ ಈಗಾಗಲೇ ಟೆಸ್ಟಿಂಗ್‌ ಹಂತದಲ್ಲಿದೆ. ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಾಪಿ ಮಾಡುವ ಹಾಗೂ ಫಾರ್ವರ್ಡ್‌ ಮಾಡುವ ಆಯ್ಕೆಯೊಂದಿಗೆ ಮುಂದೆ ಎಡಿಟ್‌ ಆಯ್ಕೆ ಕೂಡಾ ನೀಡಲಾಗುವುದು. ಇದರೊಂದಿಗೆ ರವಾನಿಸಿದ ಸಂದೇಶದಲ್ಲಿನ ತಪ್ಪುಗಳನ್ನು ಸರಿಪಡಿಸಬಹುದಾಗಿದೆ. ಶೀಘ್ರವೇ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಈ ಹೊಸ ಸೌಲಭ್ಯವನ್ನು ಒದಗಿಸಲಿದೆ ಎಂದು ಕಂಪನಿ ತಿಳಿಸಿದೆ.

Latest Videos
Follow Us:
Download App:
  • android
  • ios