ನವದೆಹಲಿ[ನ.15]: ಖಾಸಗಿ ವಲಯದ ವೊಡಾಫೋನ್‌- ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಗುರುವಾರ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಈ ವೇಳೆ ವೊಡಾಫೋನ್‌- ಐಡಿಯಾ ಭರ್ಜರಿ 50921 ಕೋಟಿ ರು. ಮತ್ತು ಭಾರ್ತಿ ಏರ್‌ಟೆಲ್‌ 23045 ಕೋಟಿ ರು.ನಷ್ಟ ಹೊಂದಿರುವುದಾಗಿ ತಿಳಿಸಿವೆ.

ಜಾಗತಿಕ ಮಟ್ಟದಲ್ಲೂ ಸಾಧನೆ ವಿಶಿಷ್ಟ, ಜಿಯೋಗೆ ಮತ್ತೊಂದು ಕಿರೀಟ!

ವೊಡಾಫೋನ್‌ ಘೋಷಿಸಿರುವ ನಷ್ಟದ ಪ್ರಮಾಣವು ಭಾರತೀಯ ಕಾರ್ಪೊರೆಟ್‌ ಇತಿಹಾಸದಲ್ಲೇ, ಯಾವುದೇ ತ್ರೈಮಾಸಿಕವೊಂದರಲ್ಲಿ ಕಂಪನಿಯೊಂದರ ಗರಿಷ್ಠ ನಷ್ಟದ ಪ್ರಮಾಣ ಎನ್ನಲಾಗಿದೆ. ಸುಪ್ರೀಂಕೋರ್ಟ್‌ ಇತ್ತೀಚಿಗೆ ಪಾವತಿ ಮಾಡಲು ಸೂಚಿಸಿರುವ 44150 ಕೋಟಿ ರು. ಎಜಿಆರ್‌ ಶುಲ್ಕವನ್ನು ಪಾವತಿಸುವ ಸಲುವಾಗಿ, ವೊಡಾಫೋನ್‌ ಕಂಪನಿಯು ಪ್ರಸಕ್ತ ತ್ರೈಮಾಸಿಕದಲ್ಲಿ 25680 ಕೋಟಿ ರು. ತೆಗೆದಿರಿಸಿದೆ.

ಸರ್ಕಾರ ನೆರವಿಗೆ ಬರದಿದ್ರೆ ಭಾರತದಲ್ಲಿ ನಮ್ಮ ಅಸ್ತಿತ್ವ ಅನುಮಾನ:ವೊಡಾಫೋನ್

ಹೀಗಾಗಿ ನಷ್ಟದ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು ಏರ್‌ಟೆಲ್‌ ಕೂಡಾ ಎಜಿಆರ್‌ ಶುಲ್ಕ ಪಾವತಿಸಲು 28450 ಕೋಟಿ ರು. ತೆಗೆದಿರಿಸಿದ ಪರಿಣಾಮ ಭಾರೀ ನಷ್ಟದ ಲೆಕ್ಕ ತೋರಿಸಿದೆ.

ಅಚ್ಚರಿಯ ಗುಮಾನಿ: ಏರ್‌ಟೆಲ್, ವೋಡಾಫೋನ್'ಗೆ ಏನ್ಮಾಡ್ಬೇಕು ಅಂತಾ ಹೇಳಿದ ಅಂಬಾನಿ!