Asianet Suvarna News Asianet Suvarna News

ಗಣೇಶ ವಿಸರ್ಜನೆಗೆ ವಿಐ ಕೊಡುಗೆ, ಇದು ಬೆಂಗಳೂರು ನಿವಾಸಿಗಳಿಗೆ ಮಾತ್ರ!

ಗಣೇಶ ವಿಸರ್ಜನೆ ತಯಾರಿಯಲ್ಲಿರುವ ಬೆಂಗಳೂರಿನ ನಿವಾಸಿಗಳಿಗೆ ವೋಡಾಫೋನ್ ಐಡಿಯಾ ವಿಶೇಷ ಕೊಡುಗೆ ನೀಡಿದೆ. ಬೆಂಗಳೂರಿನ ನಿವಾಸಿಗಳು ತಮ್ಮ ಹಬ್ಬದ ಆಚರಣೆಯಲ್ಲಿ ವಿಐ ನೀಡಿದ ಕೊಡುಗೆ ಏನು?

VI celebrate ganesh visarjan with bengaluru residence offers truck for idol immersion ckm
Author
First Published Sep 10, 2024, 2:58 PM IST | Last Updated Sep 10, 2024, 2:58 PM IST

ಬೆಂಗಳೂರು(ಸೆ.10) ಕರ್ನಾಟಕದಲ್ಲಿ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಲಾಗಿದೆ. ಇದೀಗ ಎಲ್ಲೆಡೆ ಗಣೇಶನ ವಿಸರ್ಜನೆ ಕಾರ್ಯಗಳು ನಡೆಯುತ್ತಿದೆ. ಪ್ರಮುಖವಾಗಿ ಬೆಂಗಳೂರಿನ ಮನೆ ಮನೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಕೂರಿಸಿದ ಗಣೇಶನ ವಿಸರ್ಜನೆಗೆ ಎಲ್ಲೆಡೆ ಸಂಭ್ರಮಗಳು ನಡೆಯುತ್ತಿದೆ. ವೋಡಾಫೋನ್ ಐಡಿಯಾ ಇದೀಗ ಬೆಂಗಳೂರು ನಿವಾಸಿಳಿಗೆ ವಿಶೇಷ ಕೂಡುಗೆ ಘೋಷಿಸಿದೆ. ಬೆಂಗಳೂರು ನಿವಾಸಿಗಳಿಗೆ ಗಣೇಶ ವಿಸರ್ಜನೆ ಸರಾಗವಾಗಿ ಹಾಗೂ ಭಕ್ತಿ ಗೌರವಯುತವಾಗಿ ಮಾಡಲು ವಿಐ ಟ್ರಕ್‌ ಸೇವೆ ಲಭ್ಯವಿದೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವಿಐ ಟ್ರಕ್ ಲಭ್ಯವಿದ್ದು, ಗಣೇಶನ ಆರಾಧಾಕರು ಈ ಟ್ರಕ್‌ನಲ್ಲಿ ಗಣೇಶ ವಿಸರ್ಜನೆ ಮಾಡಬಹುದು.

ಬೆಂಗಳೂರಿನ  ಕೋರಮಂಗಲ, ಸರ್ಜಾಪುರ ರಸ್ತೆ, ಯಲಹಂಕ, ಬನಶಂಕರಿ, ಜೆ.ಪಿ.ನಗರ, ಇಂದಿರಾನಗರ, ದೊಮ್ಮಲೂರು, ಮಲ್ಲೇಶ್ವರಂ, ಎಲೆಕ್ಟ್ರಾನಿಕ್ಸ್ ಸಿಟಿ, ಬಸವೇಶ್ವರನಗರ, ರಾಜರಾಜೇಶ್ವರಿನಗರ, ಯಶವಂತಪುರ, ಬಿಟಿಎಂ ಲೇಔಟ್ ಸೇರಿ ನಗರದ ಹಲವು ಬಡಾವಣೆಗಳಲ್ಲಿ ವಿಐ ಟ್ರಕ್ ಸಂಚರಿಸಲಿದೆ. ವಿಐ ಗಣೇಶನ ವಿಸರ್ಜನೆಗಾಗಿ ವಿಶೇಷ ವಾಹನ ವಿನ್ಯಾಸ ಮಾಡಿದೆ. ಗಣೇಶನ ಸುಲಭವಾಗಿ ವಿಸರ್ಜನೆ ಮಾಡಲು ಇದು ಅವಕಾಶ ಮಾಡಿಕೊಡಲಿದೆ. ಇಷ್ಟೇ ಅಲ್ಲ ಭಕ್ತಿ ಹಾಗೂ ಗೌರವದಿಂದ ಗಣೇಶ ವಿಸರ್ಜನೆಗೂ ವಿಐ ಟ್ರಕ್ ಅವಕಾಶ ನೀಡಿದೆ. 

ಗಣಪತಿ ವಿಸರ್ಜನೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ!

ನಿವಾಸಿಗಳು ತಮ್ಮ ಮನೆ ಬಾಗಿಲ ಮುಂದೆ ಗಣೇಶ ವಿಸರ್ಜನೆ ಮಾಡಿ ಪುನೀತರಾಗಲು ಸಾಧ್ಯವಿದೆ. ಇದರಿಂದ ವಿಷಕಾರಕ ಬಣ್ಣಗಳು, ವಿಗ್ರಹಗಳಿಗೆ ಮಾಡುವ ವಿವಿಧ ಅಲಂಕಾರಿಕ ವಸ್ತುಗಳ ಶೇಖರಣೆ, ಜಲಮೂಲಗಳಲ್ಲಿ ಹೂಳು ಶೇಖರಣೆ ತಪ್ಪಲಿದೆ. ಜಲಚರಗಳಿಗೆ,ಪರಿಸರಕ್ಕೆ ಆಗುವ ಹಾನಿಯೂ ತಪ್ಪಲಿದೆ. ನಾಗರಿಕರು ಅಥವಾ ನಿವಾಸಿಗಳು ಆಳದ ಕೆರೆ ಅಥವಾ ಕೊಳಗಳಿಗೆ ಇಳಿಯುವ ಅಪಾಯಗಳನ್ನು ಇದು ತಪ್ಪಿಸುತ್ತದೆ. ಜೀವ ಹಾನಿ ಮತ್ತಿತರ ಗಂಡಾಂತರಗಳನ್ನು ತಪ್ಪಿಸುವ ಜತೆಗೆ, ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ವಿಐ ಹೇಳಿದೆ. ಗಣೇಶ ವಿಸರ್ಜನೆಯನ್ನು ಪರಿಸರ ಸ್ನೇಹಿಯಾಗಿ ನಿರ್ವಹಿಸಲು ಸಹಾಯ ಮಾಡುವ ಮೂಲಕ ಜವಾಬ್ದಾರಿಯ ಹಂಚಿಕೆಯ ಪ್ರಜ್ಞೆಯನ್ನು ಪ್ರೇರೇಪಿಸಲು ಇದು ಸಾಧ್ಯವಾಗಲಿದೆ ಎಂದಿದ್ದಾರೆ.

ಸ್ವಚ್ಛ ಮತ್ತು ಹಸಿರು ಬೆಂಗಳೂರು ಉತ್ತೇಜಿಸುವ ನಮ್ಮ ಬದ್ಧತೆಯೊಂದಿಗೆ ಸೇರುವಂತೆ ನಾವು ಬೆಂಗಳೂರು ನಗರದ ಎಲ್ಲಾ ನಿವಾಸಿಗಳನ್ನು ಆಹ್ವಾನಿಸುತ್ತೇವೆ. ಕರ್ನಾಟಕ ರಾಜ್ಯದ ಎಲ್ಲಾ ನಿವಾಸಿಗಳಿಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಗಣೇಶ ಸುಖ ಶಾಂತಿ ನೆಮ್ಮದಿ, ಸಮೃದ್ದಿ ಎಲ್ಲರ ಬಾಳಲ್ಲಿ ತರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಗಣೇಶ ಹಬ್ಬದಲ್ಲಿ ರೌಡಿಶೀಟರ್‌ಗಳಿಗೆ ಬಾಲ ಬಿಚ್ಚದಂತೆ ಎಚ್ಚರಿಕೆ ಕೊಟ್ಟ ಪೊಲೀಸ್ ಕಮಿಷನರ್!

VI celebrate ganesh visarjan with bengaluru residence offers truck for idol immersion ckm
 

Latest Videos
Follow Us:
Download App:
  • android
  • ios