ಭಾರತ ಸೇರಿದಂತೆ ಹಲೆವೆಡೆ ಇನ್‌ಸ್ಟಾಗ್ರಾಂ ಲಾಗಿನ್ ಸಮಸ್ಯೆ, ಸಂಕಷ್ಟದಲ್ಲಿ ಬಳಕೆದಾರರು!

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಬಳಕೆದಾರರು ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ನಿಮಗೂ ಈ ಸಮಸ್ಯೆಯಾಗುತ್ತಿದೆಯಾ? ಸಮಸ್ಸೆಗೆ ಪರಿಹಾರವೇನು?
 

Users report Instagram down in India and globally face login issues ckm

ನವದೆಹಲಿ(ನ.19) ಇನ್‌ಸ್ಟಾಗ್ರಾಂ ಬಳಕೆದಾರರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಬಳಕೆಗಾರರು ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದರೆ. ಸರ್ವರ್ ಸಮಸ್ಯೆ ಕಾಡಿದ್ದು, ವಿಶ್ವದ ಹಲವು ಭಾಗದಲ್ಲಿ ಇನ್‌ಸ್ಟಾಗ್ರಾಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಡೌನ್‌ಡಿಟೆಕ್ಟರ್ ವರದಿ ಪ್ರಕಾರ ಬೆಳಗ್ಗೆ 19.37ರ ಸುಮಾರಿಗೆ ಇನ್‌ಸ್ಟಾಗ್ರಾಂ ಸರ್ವರ್ ಸಮಸ್ಯೆ ಕಾಣಿಸಿಕೊಂಡು ಲಾಗಿನ್ ಆಗಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ 1,000ಕ್ಕೂ ಹೆಚ್ಚುರಿಪೋರ್ಟ್ಸ್ ಬೆಳಗ್ಗೆ 10.45ರ ವೇಳೆಗೆ ಇನ್‌ಸ್ಟಾಗ್ರಾಂ ಸಮಸ್ಯೆ ಕುರಿತು ಉಲ್ಲೇಖಿಸಿದೆ. 

ಇನ್‌ಸ್ಟಾಗ್ರಾಂ ಡೌನ್ ಕುರಿತು ಬಳಕೆದಾರರು ದೂರು ನೀಡುತ್ತಿದ್ದಾರೆ. ಈ ಪೈಕಿ ಶೇಕಡಾ 42 ರಷ್ಟು ಮಂದಿ ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಇನ್ನು ಶೇಕಡಾ 39 ರಷ್ಟು ಮಂದಿ ಸರ್ವರ್ ಕನೆಕ್ಷನ್ ಸಮಸ್ಯೆ ಎದುರಿಸತ್ತಿದ್ದಾರೆ ಎಂದಿದ್ದರೆ,  ಶೇಕಡಾ 19 ರಷ್ಟು ಮಂದಿ ಆ್ಯಪ್ ಸಂಬಂಧಿತ ಸಮಸ್ಯೆ ಎದುರಾಗಿದೆ ಎಂದು ವರದಿ ಮಾಡಿದ್ದಾರೆ. ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಬಳಕೆದಾರರು ಎಕ್ಸ್ ಮೂಲಕ ಕಮೆಂಟ್ ಮಾಡಿದ್ದಾರೆ. 

ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕುವವರಿಗೆ ಗುಡ್ ನ್ಯೂಸ್, ಇನ್‌ಸ್ಟಾಗ್ರಾಂ ರೀತಿ ಫೀಚರ್!

ಲಾಗಿನ್ ಸಮಸ್ಯೆ ಎದುರಿಸಿದ ಹಲವು ಬಳಕೆದಾರರು ಹೊಸ ಲಾಗಿನ್ ಪಾಸ್‌ವರ್ಡ್ ಹಾಕಿದ್ದಾರೆ. ಫರ್ಗಾಟ್ ಪಾಸ್‌ವರ್ಡ್ ಮೂಲಕ ಹೊಸ ಪಾಸ್‌ವರ್ಡ್ ಕ್ರಿಯೇಟ್ ಮಾಡಿದ್ದಾರೆ. ಆದರೂ ಲಾಗಿನ್ ಆಗಲು ಸಾಧ್ಯವಾಗಿಲ್ಲ. ಒಂದೆರೆಡು ಬಾರಿ ಹೊಸ ಪಾಸ್‌ವರ್ಡ್ ಹಾಕಿರುವ ಬಳಕೆದಾರರು ಇದೀಗ ಯಾವ ಪಾಸ್‌ವರ್ಡ್ ಮೂಲಕ ಒಪನ್ ಮಾಡುವುದು ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ. ಟ್ವಿಟರ್ ಸೇರಿದಂತೆ ಇತರ ಸೋಶಿಯಲ್ ಮೀಡಿಯಾ ಮೂಲಕ ಇನ್‌ಸ್ಟಾಗ್ರಾಂ ಬಳಕೆದಾರರು ಸ್ಪಷ್ಟನೆ ಕೇಳಿದ್ದಾರೆ.

ವಿಶ್ವಾದ್ಯಂತ ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಆದರೆ ಮೆಟಾ ಮಾತ್ರ ಫುಲ್ ಬ್ಯೂಸಿಯಾಗಿದೆ. ಕನಿಷ್ಠ ಇನ್‌ಸ್ಟಾಗ್ರಾಂ ಡೌನ್ ಅನ್ನೋ ಸಂದೇಶವನ್ನೂ ನೀಡಿಲ್ಲ ಎಂದು ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ಇನ್‌ಸ್ಟಾಗ್ರಾಂಗೆ ಏನಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್‌ಸ್ಟಾಗ್ರಾಂ ಮ್ಯೂಸಿಕ್ ಫೀಚರ್ ಡೌನ್ ಆಗಿದೆ ಕೆಲವರು ದೂರಿದ್ದಾರೆ.

 

 

ಇನ್‌ಸ್ಟಾಗ್ರಾಂ ಡೌನ್ ಆದಾಗ ಏನು ಮಾಡಬೇಕು?

ಈ ಬಾರಿ ಹೆಚ್ಚಿನ ಇನ್‌ಸ್ಟಾಗ್ರಾಂ ಬಳಕೆದಾರರು ಲಾಗಿನ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ರೀತಿ ಇನ್‌ಸ್ಟಾಗ್ರಾಂ ಡೌನ್ ಸಮಸ್ಯೆ ಎದುರಾದಾಗ ತಕ್ಷಣವೇ ಬದಲಾವಣೆ ಮಾಡಲು, ಲಾಗಿನ್ ಆಗಲು ಪ್ರಯತ್ನಿಸಬೇಡಿ. ಇದಕ್ಕಿದ್ದಂತೆ ಲಾಗಿನ್ ಪಾಸ್‌ವರ್ಡ್ ಕೇಳಿದಾಗ ನೀವು ಸರಿಯಾದ ಪಾಸ್‌ವರ್ಡ್ ಹಾಕಿದರೂ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಸರ್ವರ್ ಸಮಸ್ಯೆಗಳು ಕಾಣಿಸಿಕೊಂಡಿರುವ ಕಾರಣ ಬಳಕೆದಾರರಿಗೆ ತಮ್ಮ ತಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಜನರು, ಫರ್ಗಾಟ್ ಪಾಸ್‌ವರ್ಡ್ ಮೂಲಕ ಅಥವಾ ಹೊಸ ಪಾಸ್‌ವರ್ಡ್ ಹಾಕಿ ಖಾತೆ ತೆರೆಯುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಇದಕ್ಕಿಂತ ಕೆಲ ಹೊತ್ತು ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗುವ ಪ್ರಯತ್ನ ಮಾಡಬೇಡಿ. ಅಥವಾ ಇನ್‌ಸ್ಟಾಗ್ರಾಂ ಖಾತೆಯನ್ನು ಬಳಸಬೇಡಿ. ಸರ್ವರ್ ಅಥವಾ ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಲು ಸಾಧ್ಯವಿದೆ. ತಾಳ್ಮೆಯಿಂದ ಕೆಲ ಹೊತ್ತು ಆ್ಯಪ್ ಬಳಕೆ ಮಾಡಬೇಡಿ, ಲಾಗಿನ್ ಅಥವಾ ಇನ್ಯಾವುದೇ ಪಾಸ್‌ವರ್ಡ್ ಒಟಿಪಿ ಕೇಳಿದರೂ ದಾಖಲಿಸಿ ಲಾಗಿನ್ ಆಗುವ ಪ್ರಯತ್ನ ಮಾಡಬೇಡಿ. ಸರ್ವರ್ ಸಮಸ್ಯೆ ಪರಿಹರಿಸಿದ ಬಳಿಕ ಇನ್‌ಸ್ಟಾಗ್ರಾಂ ಆ್ಯಪ್ ಬಳಕೆ ಮಾಡಿದರೆ ಯಾವುದೇ ಸಮಸ್ಸೆ ಇರುವುದಿಲ್ಲ. ಹೀಗಾಗಿ ಡೌನ್ ಆಗಿದೆ ಎಂದ ತಕ್ಷಣ ಆ್ಯಪ್ ಬಳಕೆ ನಿಲ್ಲಿಸಿ.
 

Latest Videos
Follow Us:
Download App:
  • android
  • ios