1 ವರ್ಷ ಉಚಿತ ಕರೆ ಹಾಗೂ 600 ಜಿಬಿ ಫ್ರೀ ಡೇಟಾ, ಬಿಎಸ್‌ಎನ್ಎಲ್ ವಾರ್ಷಿಕ ಪ್ಲಾನ್ ಘೋಷಣೆ!
- ಬಿಎಸ್ಎನ್ಎಎಲ್ ಗ್ರಾಹಕರಿಗೆ ಭರ್ಜರಿ ಕೊಡುಗೆ
- ಒಂದು ವರ್ಷದ ಕರೆಗಳು ಸಂಪೂರ್ಣ ಉಚಿತ
- 365 ದಿನ ವ್ಯಾಲಿಟಿಡಿ, ಹತ್ತು ಹಲವು ಸೌಲಭ್ಯ
ಬೆಂಗಳೂರು(ಜೂ.30): ಬಿಎಸ್ಎನ್ಎಲ್ ಮತ್ತೊಂದು ಭರ್ಜರಿ ಕೂಡುಗೆ ಘೋಷಿಸಿದೆ. ಪ್ರೀ ಪೇಯ್ಡ್ ಗ್ರಾಹಕರಿಗೆ ವಾರ್ಷಿಕ ಪ್ಲಾನ್ ಘೋಷಿಸಿದೆ. ಈ ಪ್ಲಾನ್ ಅಡಿಯಲ್ಲಿ ಒಂದು ವರ್ಷದ ವರೆಗೆ ಉಚಿತ ಕರೆ ಹಾಗೂ 600 ಜಿಬಿ ಉಚಿತ ಡೇಟಾ ಸಿಗಲಿದೆ. 365 ದಿನಗಳ ವರೆಗೆ ಯಾವುದೇ ವ್ಯಾಲಿಟಿಡಿ, ರಿಚಾರ್ಜ್ ತಲೆನೋವು ದೂರವಾಗಲಿದೆ.
ಈ ವಾರ್ಷಿಕ ಪ್ಲಾನ್‌ನಲ್ಲಿ ಹಲವು ಸೌಲಭ್ಯಗಳಿವೆ. ಗ್ರಾಹಕರು 1,999 ರೂಪಾಯಿ ರೀಚಾರ್ಜ್ ಮಾಡಿದರೆ ಬಿಎಸ್ಎನ್ಎಲ್ ವಾರ್ಷಿಕ ಪ್ಲಾನ್ ಆ್ಯಕ್ಟೀವೇಟ್ ಆಗಲಿದೆ. 365 ದಿನ ಅನ್‌ಲಿಮಿಟೆಡ್ ಕಾಲ್, ಉಚಿತ 100 ಎಸ್ಎಂಎಸ್, ಹಾಗೂ 600 ಜಿಬಿ ಉಚಿತ ಡೇಟಾಸಿಗಲಿದೆ.
1GB ದೈನಂದಿನ ಡೇಟಾದೊಂದಿಗೆ BSNL ರೂ. 87 ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಲಾಂಚ್
ಹಲವು ಆಫರ್‌ಗಳಲ್ಲಿ ಪ್ರತಿ ದಿನ 1, 1.5 ಅಥವಾ 3 ಜಿಬಿ ಗರಿಷ್ಠ ಬಳಕೆಗೆ ಅವಕಾಶವಿರುತ್ತದೆ. ಹೆಚ್ಚುವರಿ ಡೇಟಾಗೆ ಮತ್ತೆ ಹೆಚ್ಚುವರಿ ರೀಚಾರ್ಜ್ ಮಾಡಿಕೊಳ್ಳಬೇಕು. ಆದರೆ ಬಿಎಸ್‌ಎನ್ಎಲ್ ವಾರ್ಷಿಕ ಪ್ಲಾನ್ ರಿಚಾರ್ಜ್ ಮಾಡಿದರೆ ಗ್ರಾಹಕರು 600 ಜಿಬಿ ಡೇಟಾವನ್ನು ಹೇಗೆ ಬೇಕಾದರು ಉಪಯೋಗಿಸಿಕೊಳ್ಳಬಹುದು.
ಸ್ವದೇಶಿ 4ಜಿ ನೆಟ್‌ವರ್ಕ್ ಸೇವೆ ಬಿಎಸ್‌ಎನ್‌ಎಲ್ ಮೂಲಕ ಆರಂಭವಾಗಲಿದೆ. ಆಗಸ್ಟ್ 15 ರಂದು ಬಿಎಸ್ಎನ್ಎಲ್ 4ಜಿ ಸೇವೆ ಆರಂಭಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ದೇಶಾದ್ಯಂತ 2343 ಟವರ್‌ಗಳಿಗೆ (ಸೈಟ್ಸ್) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಸಂಹವನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಭಾರತೀಯ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳಿಂದಲೇ ಅಭಿವೃದ್ಧಿಪಡಿಸಲಾಗಿರುವ ದೇಶೀಯ 4ಜಿ ನೆಟ್‌ವರ್ಕ್ ಸೇವೆ ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಬಿಎಸ್‌ಎನ್‌ಎಲ್ ಮೂಲಕ ದೇಶದ ಜನರಿಗೆ ಈ ಸೇವೆ ಲಭ್ಯವಾಗಲಿದೆ. ಇದಕ್ಕಾಗಿ ವಿವಿಧ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ 2400 ಕೋಟಿ ರು.ಗೂ ಹೆಚ್ಚು ಮೊತ್ತದಲ್ಲಿ ಒಟ್ಟು 2343 ಟವರ್‌ಗಳನ್ನು 4ಜಿಗೆ ಉನ್ನತೀಕರಿಸಲಾಗುತ್ತಿದೆ. ಇದಕ್ಕೆ ಸ್ಥಳಾವಕಾಶವನ್ನೂ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.
BSNL 197 Prepaid Plan: 150 ದಿನ ವ್ಯಾಲಿಡಿಟಿ, 2 ಜಿಬಿ ಡೇಟಾ ಪ್ಲ್ಯಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್!
ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆ ವಿಚಾರದಲ್ಲಿ ಸರ್ಕಾರದ ಗುರಿ ಏನು ಎಂಬ ಪ್ರಶ್ನೆಗೆ, ಭಾರತದ ಸೆಮಿ ಕಂಡಕ್ಟರ್ ಉದ್ಯಮದ ಕಡೆ ಜಗತ್ತೇ ತಿರುಗಿ ನೋಡುವ ಕಾಲ ಬಂದಿದೆ. ಭಾರತವನ್ನು ಮುಂದಿನ ಎರಡು ದಶಕದಲ್ಲಿ ಈ ಕ್ಷೇತ್ರದಲ್ಲಿ ಮುಂಚೂಣಿಗೆ ಕೊಂಡೊಯ್ಯುವ ಗುರಿ ಹೊಂದಿದೆ. ಇದರ ಫಲ ಪಡೆಯಲು ತಾಳ್ಮೆ ಬೇಕು. ಹೂಡಿಕೆದಾರರನ್ನು ಮನವೊಲಿಸಿ ಹೆಚ್ಚು ಬಂಡವಾಳ ತರಬೇಕು. ನಮ್ಮಲ್ಲಿರುವ ಅರೆ-ಉದ್ಯಮದಾರರನ್ನು ಹೆಚ್ಚಿನ ಉತ್ಪಾದನೆಗೆ ಉತ್ತೇಜಿಸಬೇಕು. ಇದರಿಂದ ಮುಂದಿನ 10 ವರ್ಷಗಳಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ 110 ಬಿಲಿಯನ್ ಡಾಲರ್‌ನಷ್ಟುಬೇಡಿಕೆ ದೇಶಕ್ಕೆ ಬರುವ ನಿರೀಕ್ಷೆ ಇದೆ. ಈಗ ಈ ಕ್ಷೇತ್ರದ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.2ರಷ್ಟಿದೆ. ಮುಂದೆ ಇದನ್ನು ಶೇ.10ಕ್ಕೆ ಹೆಚ್ಚಿಸುವುದು ನಮ್ಮ ಗುರಿ. ಇದಕ್ಕಾಗಿ ಮೊದಲ ಹಂತದಲ್ಲಿ 10 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಲಾಗಿದೆ ಎಂದರು.