ಭಾರತದ ಮಹಿಳೆಯರು ಹೆಚ್ಚು ಮಾತನಾಡುವ ವಿಷಯ ಯಾವುದು? ಟ್ವಿಟರ್ ವರದಿ ಬಹಿರಂಗ!
ಭಾರತದ ಮಹಿಳೆಯರು ಹೆಚ್ಚು ಮಾತನಾಡುವ ವಿಷಯ ಯಾವುದು? ಟ್ವಿಟರ್ ಇಂಡಿಯಾ ಸಂಶೋಧನಾ ವರದಿ ಬಹಿರಂಗಪಡಿಸಿದೆ. 2019ರಿಂದ 2021ರ ನಡುವೆ ಭಾರತದ 10 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಮಾ.05): ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ, ಟ್ವಿಟರ್ ಭಾರತದಲ್ಲಿ ಮಹಿಳೆಯರು ಟ್ವಿಟರ್‌ನಲ್ಲಿ ಹೆಚ್ಚು ಏನು ಮಾತನಾಡುತ್ತಾರೆ ಎಂಬುದರ ಕುರಿತು ತಿಳಿಯಲು ಸಂಶೋಧನೆ ನಡೆಸಿತ್ತು. ಟ್ವಿಟರ್‌ನಲ್ಲಿ ಜೊತೆಗೆ ಮಹಿಳಾ ಟ್ವಿಟ್ಟರ್ ಖಾತೆಗಳಿಂದ ಜನವರಿ 2019 ಮತ್ತು ಫೆಬ್ರವರಿ 2021 ರ ನಡುವೆ 10 ಭಾರತೀಯ ನಗರಗಳಲ್ಲಿ ಮಹಿಳೆಯರು ಕಳುಹಿಸಿದ 522,992 ಟ್ವೀಟ್‍ಗಳ ಗುಣಾತ್ಮಕ ಪರಿಮಾಣ ಮತ್ತು ವಿಶ್ಲೇಷಣೆಯೊಂದಿಗೆ 700 ಮಹಿಳೆಯರಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.
ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಡೈರೆಕ್ಟ್ ಮೆಸೇಜ್! ಹೇಗೆ ಗೊತ್ತಾ..?.
ಭಾರತದಲ್ಲಿ ಮಹಿಳೆಯರು ವೈವಿಧ್ಯಮಯ ಸಂಭಾಷಣೆಗಳೊಂದಿಗೆ ಟ್ವಿಟರ್‌ನಲ್ಲಿ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಸಂಶೋಧನೆಯು ಹೇಳಿದೆ. ಟ್ವೀಟ್‍ಗಳ ಆಳವಾದ ನೋಟದಿಂದ ಒಂಬತ್ತು ಪ್ರಬಲ ಸಂಭಾಷಣಾ ವಿಷಯಗಳು ಬೆಳಕಿಗೆ ಬಂದಿದೆ. ಮಹಿಳೆಯರು ಟ್ವಿಟರ್‌ನಲ್ಲಿ ಫ್ಯಾಷನ್, ಪುಸ್ತಕಗಳು, ಸೌಂದರ್ಯ, ಮನರಂಜನೆ ಮತ್ತು ಆಹಾರದ ಬಗ್ಗೆ ಹೆಚ್ಚು ಮಾತನಾಡಿದ್ದಾರೆ.
ಫ್ಯಾಶನ್ ಕುರಿತು ಮಹಿಳೆಯರು ಶೇಕಡಾ 24.9% ರಷ್ಟು ಟ್ವಿಟರ್‌ನಲ್ಲಿ ಮಾತನಾಡಿದ್ದಾರೆ. ಇನ್ನು ಪ್ರಚಲಿತ ವಿದ್ಯಮಾನಗಳು (20.8%), ಸಂಭ್ರಮಾಚರಣೆಯ ಕ್ಷಣಗಳು (14.5%), ಸಮುದಾಯಗಳು (11.7%) ಮತ್ತು ಸಾಮಾಜಿಕ ಬದಲಾವಣೆ (8.7%) ಕೂಡ ಟ್ವಿಟರ್‌ನಲ್ಲಿ ಮಹಿಳೆಯರಲ್ಲಿ ಮೊದಲ ಐದು ಸಂಭಾಷಣೆ ವಿಷಯಗಳಲ್ಲಿ ಕಾಣಿಸಿಕೊಂಡಿವೆ. ದೈನಂದಿನ ಹರಟೆ ಮತ್ತು ಸಂಭ್ರಮಾಚರಣೆಯ ಕ್ಷಣಗಳ ಸುತ್ತಲಿನ ಸಂಭಾಷಣೆಗಳು ಪ್ರತಿ ಟ್ವೀಟ್‍ಗೆ ಸರಾಸರಿ ಸಂಖ್ಯೆಯ ಲೈಕ್‍ಗಳು ಮತ್ತು ರಿಪ್ಲೈಗಳ ವಿಷಯದಲ್ಲಿ ಹೆಚ್ಚಿನ ತೊಡಗುವಿಕೆಯೊಂದಿಗೆ, ಪ್ಯಾಶನ್ ಪಾಯಿಂಟ್‍ಗಳು ಮತ್ತು ಅಭಿರುಚಿಗಳು, ಸಮುದಾಯಗಳು ಮತ್ತು ಹಂಚಿಕೆಯ ಸವಾಲುಗಳು ಹೆಚ್ಚು ರಿಟ್ವೀಟ್ ಮಾಡಲಾದ ವಿಭಾಗಗಳಾಗಿವೆ.
ಸರ್ಕಾರದ ನೋಟಿಸ್‌ಗೆ ಬೆಚ್ಚಿದ ಟ್ವೀಟರ್: ಸಚಿವರ ಜತೆ ಮಾತುಕತೆಗೆ ಯತ್ನ!.
ಪ್ರತಿ ನಗರದಲ್ಲಿನ ಮಹಿಳೆಯರ ಸಂಭಾಷಣೆ ಭಿನ್ನವಾಗಿದೆ. ಚೆನ್ನೈನಲ್ಲಿ ಮಹಿಳೆಯರು ಸಂಭ್ರಮಾಚರಣೆ ಕ್ಷಣಗಳನ್ನು ಹೆಚ್ಚು ಟ್ವೀಟ್ ಮಾಡಿದ್ದಾರೆ. ಸಮುದಾಯಗಳು, ಸಾಮಾಜಿಕ ಬದಲಾವಣೆ ಮತ್ತು ಹಂಚಿಕೆಯ ಸವಾಲುಗಳ ಸುತ್ತ ಬೆಂಗಳೂರು ಮಹಿಳೆಯರು ಪ್ರಾಬಲ್ಯ ಸಾಧಿಸಿದ್ದಾರೆ. ಪ್ಯಾಶನ್ ಪಾಯಿಂಟ್‍ಗಳು ಮತ್ತು ಅಭಿರುಚಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಸಂಭಾಷಣಲ್ಲಿ ಗುವ್ಹಾಟಿ ಮಹಿಳೆಯರು ಮುಂದಿದ್ದಾರೆ.
ನಾವು ಟ್ವಿಟರ್‍ನಲ್ಲಿ ಮಹಿಳೆಯರ ಬಗ್ಗೆ ನಮ್ಮ ಅರಿವನ್ನು ಬೆಳೆಸಲು ಈ ಸಂಶೋಧನೆಯನ್ನು ನಿಯೋಜಿಸಿದೆವು ಮತ್ತು ಫಲಿತಾಂಶಗಳಿಂದ ನಾವು ಬಹಳ ಪ್ರೇರಿತರಾಗಿದ್ದೇವೆ. ಟ್ವಿಟರ್ ಪ್ರತಿಯೊಬ್ಬ ಮಹಿಳೆಗಾಗಿಯೂ ಎಂದು ಈ ಒಳನೋಟಗಳು ನಮಗೆ ತೋರಿಸುತ್ತದೆ. ಅವರ ಸಮುದಾಯಗಳು ಮತ್ತು ಸಂಭಾಷಣೆಗಳು ಸೇವೆಯ ಅನನ್ಯತೆ ಮತ್ತು ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ. ಅಂತರ್ಜಾಲಕ್ಕೆ ಉಚಿತ ಮತ್ತು ಮುಕ್ತ ಪ್ರವೇಶವು ಪ್ರತಿಯೊಬ್ಬರೂ ಅಡೆತಡೆಗಳಿಲ್ಲದೆ ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಾಡಿದೆ. ಒಂದು ಸೇವೆಯಾಗಿ, ಜನರಿಗೆ ಸಂಭಾಷಿಸಲು, ಸಮುದಾಯಗಳನ್ನು ರೂಪಿಸಲು ಮತ್ತು ಸಂವಾದದಲ್ಲಿ ಅವರೊಂದಿಗೆ ಯಾರು ಸಂವಹನ ನಡೆಸಬಹುದು ಎಂಬುದನ್ನು ನಿಯಂತ್ರಿಸಲು ಹೊಸ ಮಾರ್ಗಗಳನ್ನು ನೀಡಲು ಈ ಅಡಿಪಾಯದ ಮೇಲೆ ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಎಂದು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಮನೀಶ್ ಮಹೇಶ್ವರಿ ಹೇಳಿದರು
ಮಹಿಳೆಯರು (24.9%) ಟ್ವಿಟರ್‌ಗೆ ಬರಲು ಮುಖ್ಯ ಕಾರಣವೆಂದರೆ ಅವರ ಆಸಕ್ತಿಗಳನ್ನು ಮುಂದುವರಿಸುವುದು ಮತ್ತು ಅವರ ಮನೋಭಾವವನ್ನು ಪ್ರತಿನಿಧಿಸುವುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಮಹಿಳೆಯ ಫ್ಯಾಷನ್ (30%), ಪುಸ್ತಕಗಳು (28%), ಸೌಂದರ್ಯ (25%), ಚಲನಚಿತ್ರಗಳು ಮತ್ತು ಟಿವಿ (21%), ಸಂಗೀತ (18%), ಆಹಾರ (18%), ತಂತ್ರಜ್ಞಾನ (17) %), ಕಲೆ (17%) ಮತ್ತು ಕ್ರೀಡೆ (14%) ಗಳ ವಿಷಯವನ್ನು ಹುಡುಕುತ್ತಾರೆ.
41% ಮಹಿಳೆಯರು ಟ್ವಿಟರ್‌ನಲ್ಲಿ ಹೊಸ ಆಸಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ಹೇಳುತ್ತಾರೆ. ಜನರಿಗೆ ಅಭಿರುಚಿಗಳನ್ನು ಹುಡುಕಲು ಮತ್ತು ಅನುಸರಿಸಲು ಸುಲಭವಾಗುವಂತೆ ಮಾಡಲು ಈ ಸೇವೆ ಬದ್ಧವಾಗಿದೆ. ಇದು ಕಸ್ಟಮೈಸ್ ಮಾಡಿದ ಟ್ವಿಟರ್ ಪಟ್ಟಿಯನ್ನು ರಚಿಸಲು, ಹಂಚಿಕೊಳ್ಳಲು ಮತ್ತು ಪಿನ್ ಮಾಡುವ ಸಾಮಥ್ರ್ಯವನ್ನು ಜನರಿಗೆ ಸರಳೀಕರಿಸಿದೆ ಮತ್ತು ವಿಷಯದ ಶಿಫಾರಸುಗಳನ್ನು ಸುಧಾರಿಸಲು ಯಂತ್ರ ಕಲಿಕೆಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಪ್ರಸ್ತುತ ಸುಮಾರು 6,000 ದಷ್ಟು ಅನುಸರಿಸಬಹುದಾದ ವಿಷಯಗಳಿವೆ ಎಂದು ಟ್ವಿಟರ್ ಇಂಡಿಯಾ ಸಂಶೋಧನೆ ವರದಿ ಹೇಳುತ್ತಿದೆ.