Asianet Suvarna News Asianet Suvarna News

ಭಾರತದಲ್ಲಿ ಡಿಜಿಟಲ್ ಸರ್ಕಾರಿ ಡೈರೆಕ್ಟರಿ ಆರಂಭಿಸಿದ Truecaller

*ಕರೆಗಳನ್ನು ಗುರುತಿಸುವ ಟ್ರೂಕಾಲರ್‌ನಿಂದ ಮತ್ತೊಂದು ಹೊಸ ಮತ್ತು ವಿಶಿಷ್ಟ ಸೇವೆ ಶುರು
*ಪರಿಶೀಲಿಸಿದ ಸರ್ಕಾರಿ ಅಧಿಕಾರಿಗಳ ಸಂಪರ್ಕಗಳ ಡೈರೆಕ್ಟರಿ ಆರಂಭಿಸಿದ ಟ್ರೂಕಾಲರ್
*ಹೊಸ ಫೀಚರ್‌ನಿಂದ ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಳ್ಳುವ ಬಲೆಯಿಂದ ತಪ್ಪಿಸಿಕೊಳ್ಳಬಹುದು
 

True caller introduced Government digital directory in India
Author
First Published Dec 7, 2022, 4:34 PM IST

ಕಾಲರ್ ಐಡೆಂಟಿಫಿಕೇಷನ್ ಕಾರ್ಯ ನಿರ್ವಹಿಸುವ ಟ್ರೂಕಾಲರ್ (Truecaller) ಭಾರತದಲ್ಲಿ ಸರ್ಕಾರಿ ವಲಯಕ್ಕೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಆಪ್‌ಗೆ ಸರ್ಕಾರಿ ಇಲಾಖೆಗಳ ನಾನಾ ಅಧಿಕಾರಿಗಳ ಅಧಿಕೃತ ಫೋನ್ ನಂಬರ್ಗಳನ್ನು ಆ್ಯಡ್ ಮಾಡಲಾಗಿದೆ. ಈ ಹೊಸ ಫೀಚರ್ ಅನ್ನು  ಇತ್ತೀಚೆಗಷ್ಟೇ ಟ್ರೂಕಾಲರ್ ಪರಿಚಯಿಸಿದೆ. ಟ್ರೂಕಾಲರ್ನ ಈ ಹೊಸ ಫೀಚರ್ನಿಂದ ಸಾಕಷ್ಟು ಲಾಭವಾಗಲಿವೆ. ಸರ್ಕಾರಿ ಅಧಿಕಾರಿಗಳೆಂದು ನಂಬಿಸಿ ವಂಚನೆ ಮಾಡುವ ಜಾಲ ಇದ್ದೇ ಇದೆ. ಈ ಜನರು ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಮಾಹಿತಿಯನ್ನು ಕದಿಯುವ ಪ್ರಯತ್ನ ಮಾಡುತ್ತಾರೆ. ಇದಕ್ಕೆಲ್ಲ ಈ ಟ್ರೂಲ್ ಕಾಲರ್ನ ಹೊಸ ವೈಶಿಷ್ಟ್ಯವು ಕೊಕ್ಕೆ ಹಾಕಲಿದೆ ಎಂದು ಹೇಳಲಾಗುತ್ತಿದೆ. Truecaller ಬಳಕೆದಾರರು ಅದರ ನೀಲಿ ಟಿಕ್ ಮತ್ತು ಹಿನ್ನೆಲೆಯಿಂದ ಪ್ರಮಾಣೀಕೃತ ಸರ್ಕಾರಿ ಸಂಖ್ಯೆಯನ್ನು ಗುರುತಿಸಬಹುದು. ಇದಲ್ಲದೆ, ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಡೈರೆಕ್ಟರಿಯನ್ನು ವಿಸ್ತರಿಸಲು ಅವಕಾಶವಿದೆ. ಇದಕ್ಕಾಗಿಯೇ ಟ್ರೂಕಾಲರ್ ಇತರ ಸರ್ಕಾರಿ ಇಲಾಖೆಗಳೊಂದಿಗೆ ಕೂಡಿಕೊಂಡು ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯವು ನಾಗರಿಕರಿಗೆ ಸರ್ಕಾರಿ ಪ್ರತಿನಿಧಿಗಳನ್ನು ಸಂಪರ್ಕಿಸಲು ಸುಲಭವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 

ಪರಿಶೀಲಿಸಿ ಖಚಿತಪಡಿಸಿಕೊಳ್ಳಲಾದ ಸಾವಿರಾರು ಅಧಿಕಾರಿಗಳ ನಂಬರ್‌ಗಳಿಗೆ ಪ್ರವೇಶವನ್ನು ಟ್ರೂ ಕಾಲರ್‌ನ ಹೊಸ ಫೀಚರ್ ಒದಗಿಸುತ್ತದೆ ಎಂದು ಹೇಳಬಹುದು. ಈ ಡಿಜಿಟಲ್ ಡೈರೆಕ್ಟರಿಯು ಬಳಕೆದಾರರಿಗೆ ಸಹಾಯವಾಣಿಗಳು, ಕಾನೂನು ಜಾರಿ ಸಂಸ್ಥೆಗಳು, ರಾಯಭಾರ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸರಿಸುಮಾರು 23 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಇತರ ಪ್ರಮುಖ ಇಲಾಖೆಗಳಿಗೆ ಸಂಪರ್ಕ ಮಾಹಿತಿಯನ್ನು ಒದಗಿಸುತ್ತದೆ.

ಎಲಾನ್‌ ಮಸ್ಕ್‌ ಹೊಸ ಸಾಹಸ, ಮಾನವನ ಮೆದುಳಿಗೆ ಚಿಪ್‌!

ಕಾಲರ್-ಐಡಿ ಕಂಪನಿಯ ಟ್ರೂಕಾಲರ್  ಪ್ರಕಾರ, ಈ ಸಂಖ್ಯೆಗಳನ್ನು ನೇರವಾಗಿ ಸರ್ಕಾರ ಮತ್ತು ಅಧಿಕೃತ ಸರ್ಕಾರಿ ಮೂಲಗಳಿಂದ ಪಡೆಯಲಾಗುತ್ತದೆ. ಇದು ಸರ್ಕಾರಿ ಸಂಸ್ಥೆಗಳಿಗೆ ತಮ್ಮ ಫೋನ್ ಸಂಖ್ಯೆಗಳನ್ನು ಮೌಲ್ಯೀಕರಿಸಲು ಮತ್ತು ಡೈರೆಕ್ಟರಿಯಲ್ಲಿ ಸೇರಿಸಲು ಸುಲಭವಾಗಿಸಿದೆ. ಮುಂದಿನ ಹಂತದಲ್ಲಿ, ಟ್ರೂಕಾಲರ್ ಜಿಲ್ಲಾ ಮತ್ತು ಪಟ್ಟಣಗಳ ಮಟ್ಟದಲ್ಲಿ ಸರ್ಕಾರಿ ಸಂಖ್ಯೆಗಳನ್ನು ಸೇರಿಸಲು ಯೋಜನೆಯನ್ನು ರೂಪಿಸಿಕೊಂಡಿದೆ.

ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ, ಇದು ಪ್ರಸ್ತುತ ಹೆಚ್ಚಿನ ಸಂಪರ್ಕಗಳನ್ನು ಸೇರಿಸಲು ಹಲವು ಸರ್ಕಾರಿ ಇಲಾಖೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ವ್ಯಾಪಕ ಸಮಾಲೋಚನೆಯ ಬಗ್ಗೆ ಮುಂದುವರಿಯಲಿದೆ. ಟ್ರೂಕಾಲರ್ ಮತ್ತು ಕರ್ನಾಟಕ ಸರ್ಕಾರವು ಮಾರ್ಚ್ 202 ರಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲು ಮುಂದಾಗಿದ್ದವು. ಆದಾಗ್ಯೂ, ಈ ವೈಶಿಷ್ಟ್ಯವನ್ನು ಭಾರತದಾದ್ಯಂತ ಲಭ್ಯವಾಗುವಂತೆ ಮಾಡುವುದು ಟ್ರೂ ಕಾಲರ್‌ನ ಉದ್ದೇಶವಾಗಿದೆ ಎನ್ನಲಾಗಿದೆ. ಟ್ರೂಕಾಲರ್ ಈಗ ಸರ್ಕಾರಿ ಸೇವೆಗಳ ಸಾಧನವು 240 ಮಿಲಿಯನ್ ಭಾರತೀಯ ಬಳಕೆದಾರರನ್ನು ತೊಂದರೆ-ಮುಕ್ತ ರೀತಿಯಲ್ಲಿ ಸರ್ಕಾರವನ್ನು ಸಂಪರ್ಕಿಸಲು ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಡಿ.12ಕ್ಕೆ ಭಾರತೀಯ ಮಾರುಕಟ್ಟೆಗೆ OnePlus X27 ಮತ್ತು E24 ಮಾನಿಟರ್ ಲಾಂಚ್!

 ಈ ವರ್ಷದ ಆರಂಭದಲ್ಲಿ ಟ್ರೂಕಾಲರ್,  ಅಪ್ಲಿಕೇಶನ್‌ನ ಹಿಂದಿನ ಆವೃತ್ತಿಗಳಿಗಿಂತ ಹತ್ತು ಪಟ್ಟು ಉತ್ತಮವಾದ ಸ್ಪ್ಯಾಮ್ (Scam), ವಂಚನೆ ಮತ್ತು ವ್ಯಾಪಾರ ಕರೆ (Business Calls) ಗುರುತಿಸುವಿಕೆಯೊಂದಿಗೆ iOS ನವೀಕರಣವನ್ನು ಬಿಡುಗಡೆ ಮಾಡಿತು. ಇದಲ್ಲದೆ, ದಕ್ಷತೆಯನ್ನು ಸುಧಾರಿಸುವಾಗ ಅಪ್ಲಿಕೇಶನ್‌ನ ಗಾತ್ರವನ್ನು ಕಡಿಮೆ ಮಾಡಲಾಗಿದೆ. iOS ಅಪ್‌ಗ್ರೇಡ್‌ಗಾಗಿ ಈ Truecaller ಹೊಸ ಬಳಕೆದಾರರ ಆನ್‌ಬೋರ್ಡಿಂಗ್ ಅನ್ನು ವೇಗವಾಗಿ ಮತ್ತು ಸುಗಮವಾಗಿ ಮಾಡುವ ಮೂಲಕ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಟ್ರೂಕಾಲರ್ ಆಪ್ (True Caller App) ಸಾಕಷ್ಟು ಲಾಭಕಾರಿಯಾಗಿದೆ. ಕ್ರೌಡ್ ಸ್ಟೋರ್ಸ್ ಮೂಲಕ ಸ್ಪ್ಯಾಮ್ ಕರೆಗಳನ್ನು ಗುರುತಿಸಲು ಟ್ರೂಕಾಲರ್ ನೆರವು ನೀಡುತ್ತದೆ. ಇದರಿಂದ ಬಳಕೆದಾರರು ಸಂಭಾವ್ಯ ವಂಚನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಹಾಗಾಗಿ, ಇತ್ತೀಚಿನ ದಿನಗಳಲ್ಲಿ ಟ್ರೂಕಾಲರ್ ಬಳಕೆ ಕೂಡ ಹೆಚ್ಚಾಗುತ್ತಲೇ ಇದೆ. ಈಗ ಈ ಹೊಸ ಫೀಚರ್‌ನಿಂದ ಇನ್ನಷ್ಟು ಪರಿಣಾಮಕಾರಿಯಾದಂಥ ಬಳಕೆಯನ್ನು ನಿರೀಕ್ಷಿಸಬಹುದಾಗಿದೆ.

Follow Us:
Download App:
  • android
  • ios