Asianet Suvarna News Asianet Suvarna News

Signal CEO Resigns: ವಾಟ್ಸಾಪ್ ಪ್ರತಿಸ್ಪರ್ಧಿ ಸಿಗ್ನಲ್ ಸಿಇಒ ಮೋಕ್ಸೀ ರಾಜಿನಾಮೆ, ಅವರ ಸ್ಥಾನಕ್ಕೆ ಯಾರು?

* ಸಿಗ್ನಲ್‍ನ ಹಂಗಾಮಿ ಸಿಇಒ ಆಗಿ ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ನೇಮಕ
* ಮಾರುಕಟ್ಟೆಯಲ್ಲಿ ವಾಟ್ಸಾಪ್‌ ಮತ್ತು ಸಿಗ್ನಲ್‌ಗಳೆರಡೂ ಪ್ರತಿಸ್ಪರ್ಧಿ ಆಪ್‌ಗಳಾಗಿವೆ
* ಮೋಕ್ಸೀ ಮರ್ಲಿನ್‌ಸ್ಪೈಕ್ ಅವರು ಸಿಗ್ನಲ್ ಆಡಳಿತ ಮಂಡಳಿಯಲ್ಲಿ ಮುಂದುವರಿಯಲಿದ್ದಾರೆ.

Signal Founder Moxie Marlinspike steps down WhatsApp CoFounder Takes Over as Interim CEO
Author
Bengaluru, First Published Jan 12, 2022, 3:18 PM IST

Tech Desk: ತ್ವರಿತ ಸಂದೇಶ ರವಾನೆಯ ಸೇವೆಯನ್ನು ಒದಗಿಸುವ  ಮೆಸೇಜಿಂಗ್ ಆಪ್ ಸಿಗ್ನಲ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (CEO) ಮೋಕ್ಸೀ ಮರ್ಲಿನ್‌ಸ್ಪೈಕ್ ( Moxie Marlinspike ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ವಾಟ್ಸಾಪ್ (Whatsapp) ಮತ್ತು ಸಿಗ್ನಲ್ (Signal) ಎರಡೂ ತ್ವರಿತ ಸಂದೇಶ ರವಾನೆ ಆಪ್‌ಗಳಾಗಿದ್ದು, ತಮ್ಮದೇ ಆದ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿವೆ. ಬಳಕೆದಾರರ ಅಗತ್ಯಕ್ಕೆ ತಕ್ಕಂತೆ  ಹಾಗೂ ಅವರ ಮಾಹಿತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುತ್ತವೆ. ಈಗ ವಿಷಯ ಏನೆಂದರೆ, ಸಿಗ್ನಲ್ ಸಂಸ್ಥಾಪಕರೂ ಆಗಿರುವ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ (CEO) ಮೋಕ್ಸೀ ಮಾರ್ಲಿನ್‌ಸ್ಪೈಕ್ (Moxie Marlinspike) ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ ಮತ್ತು ಆ ಜಾಗಕ್ಕೆ ವಾಟ್ಸಾಪ್‌ನ ಸಂಸ್ಥಾಪಕ ಬ್ರಿಯಾನ್ ಆಕ್ಟನ್ (Brian Acton) ಅವರು ತಾತ್ಕಲಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೋಕ್ಸಿ ಮರ್ಲಿನ್‌ಸ್ಪೈಕ್ ಸೋಮವಾರದ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಎರಡೂ ಪ್ರತಿಸ್ಪರ್ಧಿಗಳಾಗಿವೆ ಮತ್ತು ಈಗ ಅವುಗಳ ಮುಖ್ಯಸ್ಥರು ಅದಲು ಬದಲು ಆಗುತ್ತಿದ್ದಾರೆ. 2022 ಹೊಸ ವರ್ಷವಾಗಿದ್ದು, ಈ ವರ್ಷದಲ್ಲಿ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ ಸ್ಥಾನದಿಂದ ಕೆಳೆಗಿಳಿಯಲು ಇದು ಉತ್ತಮ ಸಮಯವಾಗಿದೆ ಎಂದು ಭಾವಿಸಿದ್ದೇನೆ ಎಂದು ಮೋಕ್ಸೀ  ತಿಳಿಸಿದ್ದಾರೆ. ಸಿಇಒ ಸ್ಥಾನದಿಂದ ಕೆಳೆಗಿಳಿದರೂ ಸಿಗ್ನಲ್‌ (Signal)ನ  ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುವುದನ್ನು ಮರ್ಲಿನ್‌ಸ್ಕೈಪ್ ಅವರು ಮುಂದುವರಿಸಲಿದ್ದಾರೆ. ಅಲ್ಲದೇ, ಸಿಗ್ನಲ್‌ಗೆ ತಾವು ಕಾಯಂ ಸಿಇಒ ಪಾತ್ರವನ್ನು ನಿರ್ವಹಿಸಲು ಹುಡುಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಹತ್ತು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವರ್ಷಗಳ ಕಾಲ ಕಂಪನಿಯಲ್ಲಿ ಕಳೆದಿದ್ದೇನೆ. ಹಾಗಾಗಿ, ಈ ಸಿಗ್ನಲ್ ತಮಗೆ ತುಂಬ ಮಹತ್ವದ್ದಾಗಿದೆ. ಹುದ್ದೆ ತೊರೆಯುತ್ತಿರುವುದಾಗಿ ಅವರು  ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ತಾನು ಒಟ್ಟುಗೂಡಿಸಿದ ತಂಡವನ್ನು ಆಧರಿಸಿ ಸಿಇಒ ಆಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುವುದು ಈಗ ಅತ್ಯಂತ ಆರಾಮದಾಯಕವಾಗಿದೆ ಎಂದು ಅವರು ಹೇಳಿದ್ದಾರೆ ಮತ್ತು ಇದು ಸಿಗ್ನಲ್‌ನ ಭವಿಷ್ಯಕ್ಕಾಗಿ ಒಂದು ಪ್ರಮುಖ ಹೆಜ್ಜೆ ಎಂದು ಅವರು ನಂಬುತ್ತಾರೆ ಎಂದು ಮೋಕ್ಸೀ ಅವರು ತಿಳಿಸಿದ್ದಾರೆ.

 ಇದನ್ನೂ ಓದಿ: Apple Headset ಬಹುನಿರೀಕ್ಷಿತ ಆ್ಯಪಲ್ AR and VR ಹೆಡ್‌ಸೆಟ್ ಈ ವರ್ಷ ರೆಡಿ, ಇದರಲ್ಲಿದೆ ಹಲವು ವೈಶಿಷ್ಟ್ಯ!    

ನಾನು ಕೆಲವು ತಿಂಗಳುಗಳಿಂದ ಅಭ್ಯರ್ಥಿಗಳೊಂದಿಗೆ ಮಾತನಾಡುತ್ತಿದ್ದೇನೆ. ಆದರೆ ಸಿಗ್ನಲ್‌ನ ಮುಂದಿನ ದಶಕದಲ್ಲಿ ಶ್ರೇಷ್ಠ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡಲು ಈ ಪ್ರಕಟಣೆಯೊಂದಿಗೆ ಹುಡುಕಾಟವನ್ನು ತೆರೆಯಲು ಮುಖ್ಯವಾಗಿದೆ ಎಂದು ಅವರು ಬ್ಲಾಗ್ ಪೋಸ್ಟ್‌ನಲ್ಲಿ ಅವರು ತಿಳಿಸಿದ್ದಾರೆ. ಸಿಗ್ನಲ್ ಪ್ರತಿಸ್ಪರ್ಧಿಯಾಗಿರುವ ವಾಟ್ಸಾಪ್ ಅನ್ನು ಬ್ರಿಯಾನ್ ಆಕ್ಟನ್ ಅವರು 2009ರಲ್ಲಿ ಆರಂಭಿಸಿದರು. 2014 ರಲ್ಲಿ, ಮೆಟಾ ಪ್ಲಾಟ್‌ಫಾರ್ಮ್ಸ್, ನಂತರ ಫೇಸ್‌ಬುಕ್ (Facebook) ಈ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿತು. 

ಸಿಗ್ನಲ್‌ನ ವೆಬ್‌ಸೈಟ್ ಪ್ರಕಾರ, ಗ್ರಾಹಕರ ಡೇಟಾ ಬಳಕೆ ಮತ್ತು ಉದ್ದೇಶಿತ ಜಾಹೀರಾತಿನ ಬಗ್ಗೆ ಭಿನ್ನಾಭಿಪ್ರಾಯಗಳ ಕಾರಣ ಆಕ್ಟನ್ ನಂತರ 2017 ರಲ್ಲಿ WhatsApp ಅನ್ನು ತೊರೆದರು. ಫೆಬ್ರವರಿ 2018 ರಲ್ಲಿ, ಅವರು ಮತ್ತು ಮಾರ್ಲಿನ್‌ಸ್ಪೈಕ್ ಲಾಭರಹಿತ ಸಿಗ್ನಲ್ ಫೌಂಡೇಶನ್ ಅನ್ನು ಸಹ-ಸ್ಥಾಪಿಸಿದರು, ಇದು ಈಗ ಅಪ್ಲಿಕೇಶನ್ ಅನ್ನು ನಿಯಂತ್ರಿಸುತ್ತದೆ, ಆರಂಭಿಕ 50  ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ (ಸುಮಾರು ರೂ. 369 ಕೋಟಿ) ಆರಂಭವಾಗಿದೆ.

ಇದನ್ನೂ ಓದಿ: 6G Mobile Technology: 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಚೀನಾ, 2030ಕ್ಕೆ ಸೇವೆಗೆ!

ಮಾರ್ಲಿನ್‌ಸ್ಪೈಕ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಸಿಗ್ನಲ್ ಆಪ್‌ನ ಆರಂಭಿಕ ಯಶಸ್ಸಿಗಾಗಿ ಸಿಗ್ನಲ್ ತಂಡ ಮತ್ತು ಬಳಕೆದಾರರನ್ನು ಅಭಿನಂದಿಸಿದ್ದಾರೆ. ಸಿಗ್ನಲ್, ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಕಮ್ಯುನಿಕೇಷನ್ಸ್ ನೆಟ್‌ವರ್ಕ್ ಅನ್ನು ಒಳಗೊಂಡಿದೆ. ಹಾಗೆಯೇ, ಟ್ವಿಟರ್ (Twitter) ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ (Jack Dorsey) ಮತ್ತು ವಿಸ್ಲ್‌ಬ್ಲೋವರ್ ಮತ್ತು ಖಾಸಗಿ ಮಾಹಿತಿ ಹಕ್ಕು ಪ್ರತಿಪಾದಕ ವಕೀಲ ಎಡ್ವರ್ಡ್ ಸ್ನೋಡೆನ್ (Edward Snowden) ಅವರ ಬೆಂಬಲವನ್ನೂ ಹೊಂದಿದೆ.

Follow Us:
Download App:
  • android
  • ios