Asianet Suvarna News Asianet Suvarna News

ರಿಲಯನ್ಸ್ ಜಿಯೋದಿಂದ ಪ್ರಿಪೇಯ್ಡ್ ಗ್ರಾಹಕರಿಗೆ ದೀಪಾವಳಿ ಧಮಾಕಾ ಆಫರ್!

ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಿಸಿದೆ. ಪ್ರಿಪೇಯ್ಡ್ ಪ್ಲಾನ್ ಲಾಂಚ್ ಮಾಡಲಾಗಿದ್ದು, ಈ ಪ್ಲಾನ್ ಖರೀದಿಸಿದರೆ ಹಲವು ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಈ ಪ್ಲಾನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Reliance Jio launch One Lite Subscription On Prepaid Plans for prepaid customers ckm
Author
First Published Nov 10, 2023, 3:14 PM IST

ಮುಂಬೈ(ನ.10): ಇದೇ ಮೊದಲ ಬಾರಿಗೆ ಪ್ರಿಪೇಯ್ಡ್ ಪ್ಲಾನ್ ಒಂದನ್ನು ರಿಲಯನ್ಸ್ ಜಿಯೋ ಘೋಷಣೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದ ಹಿನ್ನಲೆಯಲ್ಲಿ ಈ ಯೋಜನೆ ಲಾಂಚ್ ಮಾಡಲಾಗಿದೆ. ಈ ಪ್ರಿಪೇಯ್ಡ್ ಪ್ಲಾನ್ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯೂ ಉಚಿತವಾಗಿ ಸಿಗಲಿದೆ. ಅಂದ ಹಾಗೆ ಇದು ಜಿಯೋ ಪ್ರಿಪೇಯ್ಡ್ 866 ರೂಪಾಯಿಯ ಪ್ಲಾನ್ ಆಗಿದೆ. ಇಷ್ಟು ಮೊತ್ತಕ್ಕೆ ಬಳಕೆದಾರರು ರೀಚಾರ್ಜ್ ಮಾಡಿಸಿಕೊಂಡಲ್ಲಿ ಯಾವುದೇ ಅಡೆತಡೆಯಿಲ್ಲದ ಸಂಪರ್ಕ ಪಡೆಯಬಹುದು.  ಜಿಯೋ ಪ್ರಿಪೇಯ್ಡ್ ಗ್ರಾಹಕರು ಸ್ವಿಗ್ಗಿಯಲ್ಲಿ ಉಚಿತ ಡೆಲಿವರಿ ಅನುಕೂಲಗಳನ್ನು ಪಡೆಯಬಹುದಾಗಿದೆ. ಅದು ಕೂಡ ಸ್ವಿಗ್ಗಿಯ ಆಹಾರ, ದಿನಸಿ ಮತ್ತು ಇತರ ವಿಭಾಗಗಳಿಗೂ ಅನ್ವಯ ಆಗಲಿದೆ.

ಜಿಯೋ- ಸ್ವಿಗ್ಗಿ ಜತೆಗಿನ ಪ್ಲಾನ್ ರೀಚಾರ್ಜ್ ಮಾಡಿಸುವಂಥವರ ಮೈಜಿಯೋ ಖಾತೆಗೆ ಐವತ್ತು ರೂಪಾಯಿಯ ಕ್ಯಾಶ್ ಬ್ಯಾಕ್ ಸಹ ದೊರೆಯಲಿದೆ. ಒಂದು ವೇಳೆ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು ಮೂರು ತಿಂಗಳ ಅವಧಿಗೆ ಪಡೆಯಬೇಕು ಎಂದಾದಲ್ಲಿ 99 ರೂಪಾಯಿ ಆಗುತ್ತದೆ. 

ದೀಪಾವಳಿ ಬಂಪರ್‌ ಆಫರ್ ನೀಡಿದ ಮುಕೇಶ್ ಅಂಬಾನಿ; ಕೇವಲ 2599 ರೂ. ಸಿಗ್ತಿದೆ ಜಿಯೋ ಸ್ಮಾರ್ಟ್‌ಫೋನ್‌

ರಿಲಯನ್ಸ್ ಜಿಯೋದ 866 ರೂಪಾಯಿಯ ಪ್ಲಾನ್ ಪಡೆದುಕೊಂಡಲ್ಲಿ ದಿನಕ್ಕೆ 2 ಜಿಬಿ ಡೇಟಾ ಸಿಗುತ್ತದೆ. ಅದರ ಜತೆಗೆ ಅನಿಯಮಿತ ಕರೆ ದೊರೆಯುತ್ತದೆ. ಈ ಪ್ಲಾನ್ ಅಡಿಯಲ್ಲಿ ಚಂದಾದಾರರಿಗೆ ಅನಿಯಮಿತ 5ಜಿ ಡೇಟಾ ದೊರೆಯಲಿದೆ. ಇದರ ವ್ಯಾಲಿಡಿಟಿ 84 ದಿನಗಳ ಅವಧಿಗೆ ಇರುತ್ತದೆ. ಈ ಪ್ಲಾನ್ ನಲ್ಲಿ ಮೂರು ತಿಂಗಳ ಅವಧಿಗೆ ಸ್ವಿಗ್ಗಿ ಒನ್ ಲೈಟ್ ಸಬ್ ಸ್ಕ್ರಿಪ್ಷನ್ ಮತ್ತು ಜಿಯೋಸೂಟ್ ಅಪ್ಲಿಕೇಷನ್ ಗಳಿಗೆ ಸಂಪರ್ಕ ಸಹ ದೊರೆಯಲಿದೆ.

ಸ್ವಿಗ್ಗಿ ಒನ್ ಲೈಟ್ ಸಬ್ ಸ್ಕ್ರಿಪ್ಷನ್ ಅನುಕೂಲಗಳಿವು:
- 149 ರೂಪಾಯಿ ಮೇಲ್ಪಟ್ಟ ಆಹಾರ ಪದಾರ್ಥ ಹತ್ತು ಉಚಿತ ಹೋಮ್ ಡೆಲಿವರಿ
- 199 ರೂಪಾಯಿ ಮೇಲ್ಪಟ್ಟ ಹತ್ತು ಇನ್ ಸ್ಟಾಮಾರ್ಟ್ ಆರ್ಡರ್ ಗಳ ಹತ್ತು ಉಚಿತ ಹೋಮ್ ಡೆಲಿವರಿ
- ಆಹಾರ ಮತ್ತು ಇನ್ ಸ್ಟಾಮಾರ್ಟ್ ಆರ್ಡರ್ ಗಳಿಗೆ ಯಾವುದೇ ಹೆಚ್ಚು ಶುಲ್ಕಗಳಿಲ್ಲ
- ಇಪ್ಪತ್ತು ಸಾವಿರಕ್ಕೂ ಹೆಚ್ಚು ಆಹಾರ ಡೆಲಿವರಿ ರೆಸ್ಟೋರೆಂಟ್ ಗಳಲ್ಲಿ ಸಾಮಾನ್ಯವಾಗಿ ಸಿಗುವಂಥ ಆಫರ್ ಗಳಿಗಿಂತ 30 ಪರ್ಸೆಂಟ್ ತನಕ ಹೆಚ್ಚುವರಿ ರಿಯಾಯಿತಿ
- 60 ರೂಪಾಯಿ ಮೇಲ್ಪಟ್ಟ ಜೆನಿ ಡೆಲಿವರಿಗಳ ಮೇಲೆ ಶೇ 10ರಷ್ಟು ರಿಯಾಯಿತಿ

ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಗೆ ಈ ಕ್ಷೇತ್ರದಲ್ಲಿ ಪೈಪೋಟಿ ನೀಡಲಿರೋ ಏಷ್ಯಾದ ನಂ. 1 ಶ್ರೀಮಂತ ಮುಖೇಶ್‌ ಅಂಬಾನಿ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಭರ್ಜರಿ ಯೋಜನೆಯನ್ನೇ ಘೋಷಣೆ ಮಾಡಿದೆ. ಮತ್ತು ಇದುವರೆಗೆ ಇಂಥದ್ದೊಂದು ಪ್ಲಾನ್ ಅನ್ನು ಉಳಿದ ಯಾವುದೇ ಟೆಲಿಕಾಂ ಕಂಪನಿಗಳು ಜಾರಿಗೆ ತಂದಿಲ್ಲ.

Follow Us:
Download App:
  • android
  • ios