Reliance Jio 5G ಟೆಸ್ಟ್ ಮಾಹಿತಿ ಲೀಕ್: 4Gಗಿಂತ 8 ಪಟ್ಟು ವೇಗದ ಡೌನ್‌ಲೋಡ್ ಸ್ಪೀಡ್!
ರಿಲಯನ್ಸ್ ಜಿಯೊದ 5G ಸ್ಪೀಡ್ ಟೆಸ್ಟ್ ವಿವರಗಳು ಬಿಡುಗಡೆಗೆ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. 5G ನೆಟ್‌ವರ್ಕ್ ಬಳಸಿ ಎರಡು ಗಂಟೆಗಳ ಅವಧಿಯ ಚಲನಚಿತ್ರವನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗಬಹುದು
Tech Desk: ಸಿಲಿಕಾನ್ ಸಿಟಿ ಬೆಂಗಳೂರು (Bengaluru), ಮುಂಬೈ, ದೆಹಲಿ, ಅಹಮದಾಬಾದ್ ಸೇರಿದಂತೆ ಮಹಾ ನಗರಗಳಲ್ಲಿ ಮುಂದಿನ ವರ್ಷದಿಂದಲೇ ಅತೀ ವೇಗದ ಇಂಟರ್ನೆಟ್ ಸೇವೆ 5ಜಿ ಸೇವೆ (5G Internet Services) ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ಸಂಬಂಧ 2022ರ ಮಾರ್ಚ್ -ಏಪ್ರಿಲ್‌ನಲ್ಲಿ 5ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ 5G ರೋಲ್ ಔಟ್ ಆಗುವ ನಿರೀಕ್ಷೆಯಿದೆ.
ದೂರಸಂಪರ್ಕ ಇಲಾಖೆ (DoT) ಪ್ರಕಟಣೆಯ ಇದನ್ನು ಮೊದಲು 13 ಮೆಟ್ರೋ ನಗರಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುವುದು ತಿಳಿಸಿದೆ. ರಿಲಯನ್ಸ್ ಜಿಯೋ ಈಗಾಗಲೇ ಈ ವಿಭಾಗದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಟೆಲಿಕಾಂ ಆಪರೇಟರ್ ಇತ್ತೀಚೆಗೆ ದೇಶದಾದ್ಯಂತ 1,000 ಮಹಾನಗರಗಳಿಗೆ 5G ಕವರೇಜ್ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ಘೋಷಿಸಿತ್ತು. 5G ಪ್ರಯೋಗಗಳಿಗಾಗಿ ಕಂಪನಿಯು ತನ್ನದೇ ಆದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5G ಉಪಕರಣಗಳು ಮತ್ತು ತಂತ್ರಜ್ಞಾನದ ಘಟಕಗಳನ್ನು ಬಳಸುತ್ತಿದೆ. ಈಗ, ಟೆಲಿಕಾಂ ಆಪರೇಟರ್‌ನ 5G ಸ್ಪೀಡ್ ಟೆಸ್ಟ್ ವಿವರಗಳು ಬಿಡುಗಡೆಗೂ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
ಇದನ್ನೂ ಓದಿ: JioPhone 5G: ಭಾರತದ ಅತಿ ಅಗ್ಗದ ರಿಲಯನ್ಸ್ 5G ಫೋನ್ ಬಿಡುಗಡೆ ಸಾಧ್ಯತೆ: ಫೀಚರ್ಸ್ ಲೀಕ್!
2 ಗಂಟೆಗಳ ಮೂವಿ ಕ್ಚಿಕ್ ಡೌನ್‌ಲೋಡ್: 91ಮೊಬೈಲ್ಸ್ ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ, ರಿಲಯನ್ಸ್ ಜಿಯೊದ 5G ನೆಟ್‌ವರ್ಕ್ ಗ್ರಾಹಕರಿಗೆ 4G ನೆಟ್‌ವರ್ಕ್‌ಗೆ ಹೋಲಿಸಿದರೆ ಎಂಟು ಪಟ್ಟು ವೇಗದ ಡೌನ್‌ಲೋಡ್ ವೇಗ ಮತ್ತು 15 ಪಟ್ಟು ವೇಗದ ಅಪ್‌ಲೋಡ್ ವೇಗವನ್ನು ನೀಡುತ್ತದೆ. ಈ ಮೂಲಕ ಜಿಯೋ 420Mbps ಡೌನ್‌ಲೋಡ್ ವೇಗ ಮತ್ತು 412 Mbps ಅಪ್‌ಲೋಡ್ ವೇಗವನ್ನು ಪಡೆಯಲು ಸಾಧ್ಯವಾಯಿತು ಎಂದು ತಿಳಿದುಬಂದಿದೆ. ಇದು ಬಹಳ ವೇಗವಾಗಿದೆ. 5G ನೆಟ್‌ವರ್ಕ್ ಬಳಸಿ ಬಳಕೆದಾರರು ಎರಡು ಗಂಟೆಗಳ ಅವಧಿಯ ಚಲನಚಿತ್ರವನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗಬಹುದು.
Picture Credits: 91 Mobiles
ಪೈಲಟ್ ಪರೀಕ್ಷೆ ಮಾಹಿತಿ: ಮುಂಬೈನಲ್ಲಿ ನಡೆಸಲಾದ ಪರೀಕ್ಷೆಯು ಜಿಯೋದ 4G ನೆಟ್‌ವರ್ಕ್ ವೇಗವನ್ನು ಬಹಿರಂಗಪಡಿಸಿದೆ. ಇದು 46.82Mbps ಡೌನ್‌ಲೋಡ್ ವೇಗ ಮತ್ತು 25.31Mbps ಅಪ್‌ಲೋಡ್ ವೇಗವನ್ನು ನೀಡುತ್ತದೆ. ಇದರರ್ಥ ಬಳಕೆದಾರರು 5G ನೆಟ್‌ವರ್ಕ್‌ನೊಂದಿಗೆ ವೇಗವನ್ನು ಆನಂದಿಸಲು ಸಾಧ್ಯವಾಗುತ್ತದೆ. ಆದರೆ ಇದು ಪೈಲಟ್ ಪರೀಕ್ಷೆಯ ಸ್ಕ್ರೀನ್‌ಶಾಟ್ ಆಗಿರುವುದರಿಂದ 5G ನೆಟ್‌ವರ್ಕ್ ಸಾರ್ವಜನಿಕರಿಗೆ ಲಭ್ಯವಾದಾಗ ನಿಜವಾದ ವೇಗವು ಬದಲಾಗಬಹುದು. 4G ಬಿಡುಗಡೆ ಸಂದರ್ಭದಲ್ಲೂ ಈ ರೀತಿ ವರದಿಗಳು ಕಾಣಿಸಿಕೊಂಡಿದ್ದವು. ಆದರೆ ಬಿಡಗಡೆ ನಂತರ ಕಡಿಮೆ ಸ್ಪೀಡ್ ದಾಖಲಾಗಿತ್ತು.
ಇದನ್ನೂ ಓದಿ: 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್!
5ಜಿ ಸ್ಪೆಕ್ಟ್ರಂನ ಮೂಲ ದರ, ಬ್ಯಾಂಡ್ ಪ್ಲ್ಯಾನ್, ಬ್ಲಾಕ್ ಗಾತ್ರ, ಎಷ್ಟುಪ್ರಮಾಣದ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕು ಎಂಬ ವಿಷಯದ ಬಗ್ಗೆ ಶಿಫಾರಸು ಮಾಡುವಂತೆ ದೂರ ಸಂಪರ್ಕ ಇಲಾಖೆಯು, ಟ್ರಾಯ್‌ಗೆ (TRAI) ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟೆಲಿಕಾಂ ಉದ್ಯಮ ವಲಯದ (Telecom) ಪಾಲುದಾರರ ಜೊತೆ ಸಮಾಲೋಚನೆ ನಡೆಸಿದ್ದ ಟ್ರಾಯ್ ಕೆಲವೊಂದಿಷ್ಟುಶಿಫಾರಸುಗಳನ್ನು ಮಾಡಿತ್ತು.
ಎಲ್ಲೆಲ್ಲಿ ಆರಂಭ?: ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್, ಲಖನೌ, ಚೆನ್ನೈ, ಹೈದ್ರಾಬಾದ್, ಪುಣೆ, ಗಾಂಧೀ ನಗರ
5ಜಿ ಲಾಭ ಏನು?: 4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್, ಅತ್ಯಂತ ವೇಗದ ಸೇವೆ, ನಿರ್ವಹಣಾ ವೆಚ್ಚ ಕಡಿಮೆ, ಎಚ್‌ಡಿ (HD) ಚಲನಚಿತ್ರ ಸೆಕೆಂಡ್‌ಗಳಲ್ಲೇ ಡೌನ್‌ಲೋಡ್, ಗೇಮಿಂಗ್, ವೀಡಿಯೋ ಉದ್ಯಮಕ್ಕೆ ಹೊಸ ಅವಕಾಶ