Asianet Suvarna News Asianet Suvarna News

ದಸರಾ ಹಬ್ಬಕ್ಕೆ ರಿಲಯನ್ಸ್ ಡಿಜಿಟಲ್ಸ್‌ನಲ್ಲಿ ವಿಶೇಷ ಆಫರ್!

ದಸರಾ ಹಬ್ಬದ ಪ್ರಯುಕ್ತ ರಿಲಯನ್ಸ್ ಡಿಜಿಟಲ್ ವಿಶೇಷ ಆಫರ್ ಘೋಷಿಸಿದೆ. ಡಿಸ್ಕೌಂಟ್, ಗಿಫ್ಟ್ ವೋಚರ್, ಕ್ಯಾಶ್ ಬ್ಯಾಕ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿವೆ.

Reliance Digital announces Electronics Festival Wonderful offers for Dussehra special ckm
Author
Bengaluru, First Published Oct 25, 2020, 3:10 PM IST

ಬೆಂಗಳೂರು(ಅ.25):  ರಿಲಯನ್ಸ್ ಡಿಜಿಟಲ್ ನಿಂದ ಮತ್ತೆ ಹಬ್ಬದ ಆಫರ್ ಬಂದಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ದೊಡ್ಡ ಹಾಗೂ ಅತ್ಯುತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ. ಆಯ್ಕೆ ಮಾಡಿಕೊಳ್ಳುವುದಕ್ಕೆ ಗ್ರಾಹಕರ ಮುಂದೆ ಅಗಾಧ ಪ್ರಮಾಣದ ಉತ್ಪನ್ನಗಳಿವೆ. ಇದರ ಜತೆಗೆ ರಿಲಯನ್ದ್ ಡಿಜಿಟಲ್, ಮೈ ಜಿಯೋ ಸ್ಟೋರ್ ಹಾಗೂ ಆನ್ ಲೈನ್ ನಲ್ಲಿ ಎಚ್ ಡಿಎಫ್ ಸಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಈಸಿ ಇಎಂಐಗಳ ಮೇಲೆ 10% ಕ್ಯಾಶ್ ಬ್ಯಾಕ್* ಆಫರ್ ಸಹ ಇದೆ.

ರಿಲಯನ್ಸ್ ಡಿಜಿಟಲ್‌ನಲ್ಲಿ ಭರ್ಜರಿ ಆಫರ್; Apple ಐಪ್ಯಾಡ್, ವಾಚ್ ಪ್ರಿ ಬುಕಿಂಗ್!.

 ಸ್ಟೋರ್ ಗಳಲ್ಲಿ ಖರೀದಿ ಮಾಡುವವರಿಗೆ ಸಿಟಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಗಳು ಮತ್ತು ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಗ್ರಾಹಕರ ಸಾಲಕ್ಕೆ 2500 ರುಪಾಯಿ ತನಕ ಕ್ಯಾಶ್ ಬ್ಯಾಕ್* ದೊರೆಯುತ್ತದೆ. ಇನ್ನು ರಿಲಯನ್ಸ್ ಅಧೀಕೃತ ವೆಬ್್‌ಸೈಟ್ ಮೂಲಕ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದಲ್ಲಿ ಸಿಟಿ ಬ್ಯಾಂಕ್ ಕ್ರೆಡಿಟ್/ ಡೆಬಿಟ್ ಕಾರ್ಡ್ ಮೇಲೆ ಎಕ್ಸ್ ಕ್ಲೂಸಿವ್ ಆಗಿ 15% ಕ್ಯಾಶ್ ಬ್ಯಾಕ್* ದೊರೆಯುತ್ತದೆ.

ಹಬ್ಬದ ಋತುವಿನ ಕೊಡುಗೆಯಾಗಿ ರಿಲಯನ್ಸ್ ಡಿಜಿಟಲ್ ನಿಂದ ಖರೀದಿದಾರರಿಗೆ 1000 ರುಪಾಯಿ ಮೌಲ್ಯದ AJIO ಹಾಗೂ ರಿಲಯನ್ಸ್ ಟ್ರೆಂಡ್ಸ್ ವೋಚರ್ಸ್ ನೀಡಲಾಗುತ್ತದೆ. ಸದ್ಯಕ್ಕೆ ಮಾರಾಟ ಚಾಲನೆಯಲ್ಲಿದ್ದು, ನವೆಂಬರ್ 16, 2020ರ ತನಕ ಆಫರ್ ಇರುತ್ತದೆ.

ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಲಾಂಚ್; ಪ್ಲಾನ್ ಒಂದು, ಲಾಭ ಹಲವು!.

ಎಲ್ಲ ವಿಭಾಗಗಳಲ್ಲೂ ಅದ್ಭುತವಾದ ಕೊಡುಗೆಗಳಿವೆ. ಅದರಲ್ಲಿ ಮೊಬೈಲ್ ಫೋನ್ ಗಳ ಮೇಲೂ ಒಳ್ಳೆ ಆಫರ್ ಗಳಿವೆ. ಸ್ಯಾಮ್ಸಂಗ್ ಗ್ಯಾಲಕ್ಸಿ S20 ಈಗ ಕೇವಲ 47,999 ರುಪಾಯಿಗೆ ಸಿಗುತ್ತಿದೆ (32% ಕಡಿತದ ಬೆಲೆಯಲ್ಲಿ). ಜತೆಗೆ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಗಳಿಗೆ 1500 ರುಪಾಯಿ ಕ್ಯಾಶ್ ಬ್ಯಾಕ್* ಇದೆ.

ಗ್ರಾಹಕರು ಹೊಸ ಆಪಲ್ ಐಫೋನ್ 12 ಹಾಗೂ ಐಫೋನ್ 12 ಪ್ರೊ ಮುಂಚಿತವಾಗಿ ಬುಕ್ ಮಾಡಬಹುದು. ಒನ್ ಪ್ಲಸ್, ಒಪ್ಪೊ ಹಾಗೂ ವಿವೋದ ಈಚಿನ ಆಫರ್ ಗಳನ್ನು ತಿಳಿದುಕೊಳ್ಳಿ.

ರಿಲಯನ್ಸ್ ಡಿಜಿಟಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಲಾಂಚ್

ನಿಮ್ಮ ಕೆಲಸದ ವೇಗ ಮತ್ತಷ್ಟು ಹೆಚ್ಚು ಮಾಡಬೇಕು ಅಂತಿದ್ದಲ್ಲಿ Asus ಲ್ಯಾಪ್ ಟಾಪ್ ಖರೀದಿ ಮಾಡಬಹುದು, ತೆಳು ಹಾಗೂ ಹಗುರವಾದ ಲ್ಯಾಪ್ ಟಾಪ್ ರು. 18,999*ಕ್ಕೆ ಲಭ್ಯವಿದ್ದು, ಜತೆಗೆ 2 ವರ್ಷದ ವಾರಂಟಿ ಮತ್ತು ಹೆಚ್ಚುವರಿಯಾಗಿ 6,800 ರುಪಾಯಿಯ ಅನುಕೂಲ ದೊರೆಯಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ಲೆಟ್ ಗಳ ಮೇಲೆ ಆಕರ್ಷಕವಾದ ಆಫರ್ ಗಳಿವೆ. Tab S5E ಸೂಪರ್ AMOLED ಡಿಸ್ ಪ್ಲೇ WiFi + LTE ಎಕ್ಸ್ ಕ್ಲೂಸಿವ್ ಬೆಲೆ ರು. 33,999/-, Tab A7 Wifi + LTE ರು. 21,999 ಮತ್ತು Tab S7 ಜತೆಗೆ Ultra Smooth 120hz ಡಿಸ್ ಪ್ಲೇ ಎಕ್ಸ್ ಕ್ಲೂಸಿವ್ ಆಗಿ ರು. 55,999* ಇದೆ. ಕೀಬೋರ್ಡ್ ಕವರ್ ಗೆ ವಿಶೇಷ ಆಫರ್ ಗಳು ಮತ್ತು ಎಚ್ ಡಿಎಫ್ ಸಿ ಕಾರ್ಡ್ ಗಳ ಮೇಲೆ ಕ್ಯಾಶ್ ಬ್ಯಾಕ್* ಇದೆ.

ಟಿವಿಗಳ ಮೇಲೂ ಗ್ರಾಹಕರಿಗೆ ಅದ್ಭುತವಾದ ಆಫರ್ ಗಳಿವೆ. ಉದಾಹರಣೆಗೆ ಸ್ಯಾಮ್ಸಂಗ್ 50 ಇಂಚಿನ QLED TV ರು. 69,990/-* ಜತೆಗೆ 3 ವರ್ಷಗಳ ವಾರಂಟಿ* ಮತ್ತು ರು. 1,990* ರಿಂದ ಇಎಂಐ ಶುರು ಮತ್ತು 32 ಇಂಚಿನ ಆಂಡ್ರಾಯಿಡ್ ಟಿವಿಗಳು ರು. 12,490* ರಿಂದ ಆರಂಭ. ಜತೆಗೆ 3 ವರ್ಷದ ವಾರಂಟಿ*.

ಗೃಹಬಳಕೆ ವಸ್ತುಗಳನ್ನು ಖರೀದಿ ಮಾಡಬೇಕು ಎಂದಿರುವ ಗ್ರಾಹಕರು, ಪ್ಯಾನಸೋನಿಕ್ 584 ಲೀಟರ್ ಸೈಡ್ ಬೈ ಸೈಡ್ ರೆಫ್ರಿಜರೇಟರ್ ರು. 49,990*ಕ್ಕೆ ಪಡೆಯಬಹುದು ಮತ್ತು ಫ್ರಂಟ್ ಲೋಡ್ ವಾಷಿಂಗ್ ಮಶೀನ್ ರು. 18,990* ರಿಂದ ಆರಂಭವಾಗುತ್ತದೆ.

ಈ ವರ್ಷದ ಹಬ್ಬದ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್ ಗಳ ಹಬ್ಬ. ಸುಲಭ ಹಣಕಾಸು ಸೌಲಭ್ಯ ಹಾಗೂ ಇಎಂಐ ಆಯ್ಕೆಗಳು. ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ಸ್ ಅಥವಾ ಆನ್ ಲೈನ್ ಯಾವುದೋ ಬೇಕೋ ಅದನ್ನು ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆರಿಸಿಕೊಳ್ಳಬಹುದು. ತಕ್ಷಣವೇ ಡೆಲಿವರಿ ಆಗುತ್ತದೆ (ಮೂರು ಗಂಟೆಗಿಂತ ಕಡಿಮೆ ಅವಧಿಗೆ ಡೆಲಿವರಿ) ಮತ್ತು ಹತ್ತಿರದ ಸ್ಟೋರ್ ಗಳಿಂದಲೇ ತೆಗೆದುಕೊಂಡು ಹೋಗಬಹುದಾದ ಆಯ್ಕೆಯೂ ಇದೆ.

Follow Us:
Download App:
  • android
  • ios