iPhone 15 Proಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್: Periscope ಲೆನ್ಸ್‌ನೊಂದಿಗೆ ಸಿಗಲಿದೆ 10X ಝೂಮ್‌!

iPhone 15 Pro ನಲ್ಲಿರುವ ಮೂರು ಕ್ಯಾಮೆರಾಗಳಲ್ಲಿ ಒಂದು ಪೆರಿಸ್ಕೋಪ್ ಲೆನ್ಸ್  ಜತೆಗೆ ಬರಲಿದೆ. ಇದು  ಕನಿಷ್ಠ 10X ಆಪ್ಟಿಕಲ್ ಜೂಮ್ ಅನ್ನು ನೀಡುತ್ತದೆ. ಇದು ಅಸ್ತಿತ್ವದಲ್ಲಿರುವ iPhone 13 Pro ಮಾದರಿಗಳು ನೀಡುವ 3X ಆಪ್ಟಿಕಲ್ ಜೂಮ್‌ಗಿಂತ ಉತ್ತಮವಾಗಿದೆ ಎಂದು ವರದಿಗಳು ತಿಳಿಸಿವೆ.

One of the three cameras on the iPhone 15 Pro will use a periscope lens mnj

Tech Desk: ಭವಿಷ್ಯದ ಐಫೋನ್ ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ( Periscope) ಬರಲಿದೆ ಎಂದು  ಕೇಳಿ ಸುಮಾರು ಎರಡು ವರ್ಷಗಳಾಗಿವೆ. 2020 ರಲ್ಲಿ, ವಿಶ್ಲೇಷಕ ಮಿಂಗ್-ಚಿ ಕುವೊ (Ming-Chi Kuo) ಐಫೋನ್ 13 ಪೆರಿಸ್ಕೋಪ್ ಲೆನ್ಸ್ ಜತೆಗೆ ಬರಲಿದೆ ಎಂದು ಹೇಳಿದ್ದರು ಆದರೆ ದುರದೃಷ್ಟವಶಾತ್, ಅದು ಸಂಭವಿಸಲಿಲ್ಲ. ಈಗ, ಹೊಸ ವರದಿಯೊಂದು ಐಫೋನ್ 15 ಮಾದರಿಗಳಲ್ಲಿ ಒಂದು ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಬರುತ್ತದೆ ಎಂದು ಹೇಳುತ್ತದೆ. ಇತ್ತೀಚಿನ ಮ್ಯಾಕ್‌ರೂಮರ್ಸ್ ವರದಿಯ ಪ್ರಕಾರ, ವಿಶ್ಲೇಷಕ ಜೆಫ್ ಪು ಅವರು ಕುವೊ ಅವರ ಭವಿಷ್ಯವನ್ನು ದೃಢಪಡಿಸಿದರು ಮತ್ತು 2023 ರಲ್ಲಿ ಪ್ರಾರಂಭಿಸುವ ಕನಿಷ್ಠ ಒಂದು ಐಫೋನ್‌ನಲ್ಲಿ ಪೆರಿಸ್ಕೋಪ್ ಲೆನ್ಸ್ ಇರುತ್ತದೆ ಎಂದು ಹೇಳಿದ್ದಾರೆ

McRumors ಇತ್ತೀಚೆಗೆ ವರದಿ ಮಾಡಿದಂತೆ, ವಿಶ್ಲೇಷಕ ಜೆಫ್ ಪು ಕುವೊ ಅವರು ಇದನ್ನು ದೃಢಪಡಿಸಿದ್ದು 2023 ರಲ್ಲಿ ಬಿಡುಗಡೆಯಾಗುವ ಕನಿಷ್ಠ ಒಂದು ಐಫೋನ್ ಪೆರಿಸ್ಕೋಪ್ ಲೆನ್ಸ್ ಅನ್ನು ಹೊಂದಿರುತ್ತದೆ, ಅದರ ಪೂರ್ವವರ್ತಿಗಳಿಗಿಂತ ಉತ್ತಮವಾದ ಜೂಮ್ ಸಾಮರ್ಥ್ಯಗಳನ್ನು ನೀಡುತ್ತದೆ ಎಂದು ತಿಳಿದು ಬಂದಿದೆ. ವಿಶ್ಲೇಷಕರ ಪ್ರಕಾರ, ಆಯ್ದ iPhone 15 ಸರಣಿಯ ಮಾದರಿಗಳಲ್ಲಿನ ಪೆರಿಸ್ಕೋಪ್ ಲೆನ್ಸ್ 10x ಜೂಮ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಪೆರಿಸ್ಕೋಪ್ ಲೆನ್ಸ್ ಮೆಕಾನಿಸಮ್ ಹೊಸದಲ್ಲ

Samsung Galaxy S21 Ultra ಮತ್ತು Huawei P40 Pro+ ನಂತಹ ಹಲವಾರು Android ಫ್ಲ್ಯಾಗ್‌ಶಿಪ್‌ಗಳು (Flagship) ತಮ್ಮ ಹಿಂದಿನ ಕ್ಯಾಮೆರಾ ವ್ಯವಸ್ಥೆಗಳಲ್ಲಿ ಪೆರಿಸ್ಕೋಪ್ ಸೆನ್ಸರ್‌ಗಳನ್ನು ನೀಡಿದ್ದವು. ಆಪಲ್ ತನ್ನ ಮುಂಬರುವ ಐಫೋನ್‌ಗಳ ವೈಶಿಷ್ಟ್ಯಗಳ ಬಗ್ಗೆ ಬಿಡುಗಡೆ ಕಾರ್ಯಕ್ರಮದ ಮೊದಲು ಯಾವುದೇ ಮಾಹಿತಿ ಬಹಿರಂಗಪಡಿಸುವುದಿಲ್ಲ, ಆದ್ದರಿಂದ ಇದೀಗ  ಕನಿಷ್ಠ ಒಂದು ವರ್ಷಪೆರಿಸ್ಕೋಪ್ ಕ್ಯಾಮೆರಾದೊಂದಿಗೆ ಐಫೋನ್‌ನ ಸಾಧ್ಯತೆಯು ಊಹಾಪೋಹವಾಗಿರುತ್ತದೆ. ಆದರೆ ಐಫೋನ್ ಪೆರಿಸ್ಕೋಪ್ ಲೆನ್ಸ್ ನೆಕ್ಸ್ಟ್‌ ಜನರೇಶನ್ ಮೊಬೈಲ್ ಫೋಟೊಗ್ರಾಫಿಗೆ ಇನ್ನಷ್ಟು ಬಲ ತುಂಬಬಹುದು.ಐಫೋನ್ 13 ಪ್ರೊ ಮಾದರಿಗಳಲ್ಲಿ ನಿಯಮಿತ 3X ಆಪ್ಟಿಕಲ್ ಜೂಮ್ ಸಾಮಾನ್ಯವಾಗಿದೆ, ಆದರೆ ಹಲವಾರು ಆಂಡ್ರಾಯ್ಡ್ ಫೋನ್‌ಗಳು ಈಗಾಗಲೇ ಆ ಮೈಲಿಗಲ್ಲನ್ನು ಮುಟ್ಟಿವೆ.

ಹೊಸ ಐಫೋನ್‌ ಮಾದರಿಯಲ್ಲಿ ಸಿಮ್‌ ಕಾರ್ಡ್‌ ಸ್ಲಾಟೇ ಇರೋಲ್ವಂತೆ

ಆ್ಯಪಲ್‌ ಕಂಪನಿಯ ಐಫೋನ್‌ 15 ಪ್ರೋ (iPhone 15 Pro) ಮೊಬೈಲ್‌ನಲ್ಲಿ ಸಿಮ್‌ ಕಾರ್ಡ್‌ ಸ್ಲಾಟ್‌ ಇರುವುದಿಲ್ಲ. ಇದರ ಬದಲಾಗಿ ಎರಡು ಇ-ಸಿಮ್‌ಗೆ (E Sim) ಅವಕಾಶ ನೀಡಲಾಗುತ್ತಿದೆ ಎಂದು ಬ್ರೆಜಿಲ್‌ ಮೂಲದ ಬ್ಲಾಗ್‌ ಡು ಐಫೋನ್‌ ಹೇಳಿದೆ. ತನ್ನ ಇಯರ್‌ಬಡ್‌ ಅನ್ನು ಪ್ರಚುರ ಪಡಿಸಲು ಹೆಡ್‌ಫೋನ್‌ ಜಾಕ್‌ ಅನ್ನು ತೆಗೆದುಹಾಕಿದ್ದ ನಂತರ ಇದು ಅತಿ ದೊಡ್ಡ ಆವಿಷ್ಕಾರವಾಗಿದೆ. ಐಫೋನ್‌ 15 ಪ್ರೋ 2023ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಫೋನಿಗೆ ಸಿಮ್‌ಕಾರ್ಡ್‌ಗಳನ್ನು ಅಳವಡಿಸಲು ಸಾಧ್ಯವಿರುವುದಿಲ್ಲ (iPhone Without Sim). ಸಿಮ್‌ ಕಾರ್ಡ್‌ಗಳ ಸೇವೆಯನ್ನು ನೀಡುವ ಇಂಟಿಗ್ರೇಟೆಡ್‌ ಎಲೆಕ್ಟ್ರಾನಿಕ್‌ ಸಕ್ರ್ಯೂಟ್‌ ಕಾರ್ಡ್‌ ಅನ್ನು ಅಳವಡಿಸಲಾಗಿರುತ್ತದೆ. ಈ ಎಲೆಕ್ಟ್ರಾನಿಕ್‌ ಡಿವೈಸ್‌ ಸಿಮ್‌ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇ-ಸಿಮ್‌ನೊಂದಿಗೆ ಪೆರಿಸ್ಕೋಪ್‌ ಆಕಾರದ ಲೆನ್ಸ್‌ ಅನ್ನು ಈ ಫೋನಿನ ಕ್ಯಾಮೆರಾಗೆ ಅಳವಡಿಸಲಾಗುತ್ತದೆ.

ಇದನ್ನೂ ಓದಿAmazon's Best Phone: ಐಫೋನ್ 13 ಅಮೆಜಾನ್ ಗ್ರಾಹಕರ ಆಯ್ಕೆಯ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್!

ಆಪಲ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿತು, ಇದರಲ್ಲಿ iPhone 13, iPhone 13 Mini, iPhone 13 Pro ಮತ್ತು iPhone 13 Pro Max ಸೇರಿವೆ. ಕಂಪನಿಯು ಮುಂದಿನ ವರ್ಷ ಇದೇ ಸಮಯದಲ್ಲಿ ಐಫೋನ್ 14 ಸರಣಿಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇನ್ನೂ ತಿಂಗಳುಗಳ ದೂರದಲ್ಲಿರುವ iPhone 14 ಸರಣಿಯ ಬಿಡುಗಡೆಗೆ ಮುಂಚಿತವಾಗಿ, ವರದಿಗಳು ಈಗಾಗಲೇ 2023 ಐಫೋನ್‌ಗಳು ಪಡೆಯುವ ನಿರೀಕ್ಷೆಯ ವೈಶಿಷ್ಟ್ಯಗಳನ್ನು ವಿವರಿಸಲು ಪ್ರಾರಂಭಿಸಿವೆ. ಇದೀಗ ಐಫೋನ್ 15 ಸರಣಿಯ ಸಿಮ್ ಕಾರ್ಡ್ ಸ್ಲಾಟ್ ಕುರಿತು ಹೊಸ ವರದಿ ಹೊರಬಿದ್ದಿದೆ. ಇದು ನಿಜವಾಗಿದ್ದರೆ, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂದು ಕರೆಯಲ್ಪಡುವ 2023 ರ ಐಫೋನ್ ಪ್ರೊ ಮಾದರಿಗಳು ಸಿಮ್ ಕಾರ್ಡ್ ಸ್ಲಾಟ್ ಇಲ್ಲದೆ ಬರಲಿವೆ.

Latest Videos
Follow Us:
Download App:
  • android
  • ios