ನವದೆಹಲಿ[ಜ.01]: ಕಳೆದೊಂದು ದಶಕದಲ್ಲಿ ವಿಶ್ವನ್ನೇ ಹತ್ತಿರವಾಗಿಸಿದ, ಜೀವನ ಶೈಲಿಯನ್ನೇ ಬದಲಾಯಿಸಿದ ಆ್ಯಪ್‌ಗಳು

ಓಲಾ, ಉಬರ್‌ನಿಂದ ಸರ್ವರಿಗೂ ಕ್ಯಾಬ್ ಹತ್ತಿರ

ದಶಕದ ಹಿಂದೆ ಟ್ಯಾಕ್ಸಿಯಲ್ಲಿ ಓಡಾಡುವುದು ದುಬಾರಿ ಬಾಬತ್ತು. ಆದರೆ ಓಲಾ, ಉಬರ್ ಆ್ಯಪ್‌ಗಳಿಂದಾಗಿ ಯಾರು ಬೇಕಾದರೂ ಕ್ಯಾಬ್‌ನಲ್ಲಿ ಓಡಾಡುವಂತಾಯಿ ತು. ಎಂದೂ ಟ್ಯಾಕ್ಸಿ ಹತ್ತದವರು ಕೂಡ ಹೊಸ ವ್ಯವ ಸ್ಥೆಗೆ ಒಗ್ಗಿಕೊಂಡರು. ಮೊದಲಿಗಿಂತ ದರವೂ ಕಡಿಮೆ

ಮನೆಗೇ ಬರುತ್ತೆ ಬಯಸಿದ ತಿನಿಸು

ಹಸಿವು ನೀಗಿಸಿಕೊಳ್ಳಲು ಹೋಟೆಲ್ ಹುಡುಕುತ್ತಾ ಹೋಗಬೇಕಿಲ್ಲ. ಮನೆಯಲ್ಲೇ ಕುಳಿತು ತರಿಸಬಹುದು. ಜೊಮ್ಯಾಟೋ, ಸ್ವಿಗ್ಗಿಯಿಂದ ಜೀವನ ಸುಲಭವಾಗಿದೆ. ಯಾರಿಗೆ ಏನನ್ನಾದರೂ ಕುಳಿತಲ್ಲಿಂದಲೇ ಕಳಿಸಲು ಡುಂಜೋ ಆ್ಯಪ್ ಬಳಕೆಯಾಗುತ್ತಿದೆ. ಇದೆಲ್ಲಾ 10 ವರ್ಷದ ಹಿಂದೆ ಇರಲಿಲ್ಲ.

ಮನೆಯಲ್ಲೇ ಕೂತು ಶಾಪಿಂಗ್

ಮೊಬೈಲ್, ಟೀವಿಯಿಂದ ಹಿಡಿದು ಬಟ್ಟೆಯವರೆಗೆ ಎಲ್ಲವೂ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಇದೀಗ ಬಹುತೇಕ ಜನರಿಗೆ ಅಭ್ಯಾಸವಾಗಿಬಿಟ್ಟಿದೆ. ಫ್ಲಿಪ್‌ಕಾರ್ಟ್, ಅಮೆಜಾನ್‌ನಿಂದ ಇದು ಸಾಧ್ಯವಾಗಿದೆ. ಸಾಕಷ್ಟು ಆಫರ್‌ಗಳು ಕೂಡ ಲಭ್ಯ.

ವಾಟ್ಸ್‌ಆ್ಯಪ್, ಫೇಸ್‌ಬುಕ್ ಹವಾ

ಸಂದೇಶ ಕಳುಹಿಸಲು ಎಸ್‌ಎಂಎಸ್ ಅವಲಂಬಿಸಬೇಕಾದ ದಿನಗಳು ಈಗಿಲ್ಲ. ಸಂದೇಶ, ಚಿತ್ರ, ವಿಡಿಯೋ ಕಳುಹಿಸಲು ವಾಟ್ಸ್‌ಆ್ಯಪ್ ಬಳಕೆಯಾಗುತ್ತಿದೆ. ಸ್ನೇಹಿತರ ಹುಡುಕಲು, ಅವರ ಖುಷಿ, ದುಃಖದಲ್ಲಿ ಭಾಗಿಯಾಗಲು ಫೇಸ್‌ಬುಕ್, ಇನ್‌ಸ್ಟಾ ಗ್ರಾಂ ಇದೆ. ವಿಡಿಯೋ ಮೂಲಕವೇ ಜನರ ಮನಗೆಲ್ಲಲು ಟಿಕ್‌ಟ್ಯಾಕ್, ಚುಟುಕು ಸುದ್ದಿ, ಸಂದೇಶಕ್ಕೆ ಟ್ವಿಟರ್ ಪ್ರಸಿದ್ಧವಾಗಿದೆ.