Asianet Suvarna News Asianet Suvarna News

ಹೊಸ ದಾಖಲೆ ಬರೆದ ರಿಲಯನ್ಸ್, ಸ್ಥಿರ ದೂರವಾಣಿಯಲ್ಲಿ ಸೇವೆಯಲ್ಲಿ ಬಿಎಸ್​ಎನ್​ಎಲ್ ಹಿಂದಿಕ್ಕಿದ ಜಿಯೋ!

 ಭಾರತದಲ್ಲಿ ಜಿಯೋ ಟೆಲಿಕಾಂ ಸೇವೆ ಆರಂಭಗೊಂಡ ಬಳಿಕ ಹಲವು ದಾಖಲೆ ಬರೆದಿದೆ. ಅತೀ ವೇಗದ ಡೇಟಾ, ಎಲ್ಲೆಡೆ ನೆಟ್‌ವರ್ಕ್ ಸೇರಿದಂತೆ ಹಲವು ಸೇವೆಗಳಲ್ಲಿ ಜಿಯೋ ಮುಂಚೂಣಿಯಲ್ಲಿದೆ. ಇದೀಗ ಬಿಎಸ್‌ಎನ್‌ಎಲ್ ಹಿಂದಿಕ್ಕಿದೆ. 

New achievement Reliance Jio topples BSNL to become largest fixed-line service provider ckm
Author
First Published Oct 19, 2022, 9:13 PM IST

ನವದೆಹಲಿ(ಅ.19): ಜಿಯೋ ಟೆಲಿಕಾಂ ಸೇವೆ ಹಲವು ಹೊಸತನಕ್ಕೆ ಕಾರಣವಾಗಿದೆ. ಸ್ಪೀಡ್ ಡೇಟಾ, ಡೌನ್ಲೋಡ್ ಸ್ಪೀಡ್, ಎಲ್ಲೆಡೆ 4ಜಿ ನೆಟ್‌ವರ್ಕ್ ಸೇರಿದಂತೆ ಹಲವು ಕೊಡುಗೆಗಳನ್ನು ಜಿಯೋ ನೀಡಿದೆ. ಇದೀಗ ಮತ್ತೊಂದು ಸಾಧನೆ ಮಾಡಿದೆ. ಸ್ಥಿರ ದೂರವಾಣಿಯಲ್ಲಿ ಜಿಯೋ, ಬಿಎಸ್‌ಎನ್ಎಲ್ ಹಿಂದಿಕ್ಕಿದೆ.  ಹೆಸರಾಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​ನ್ನು ಹಿಂದಿಕ್ಕಿದೆ. ಈ ಮೂಲಕ ದೇಶದ ಅತಿದೊಡ್ಡ ಸ್ಥಿರ ದೂರವಾಣಿ ಸೇವೆಯ ಪೂರೈಕೆದಾರರಾನಾಗಿ ಹೊರಹೊಮ್ಮಿದೆ. ದೇಶದಲ್ಲಿ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ವೈರ್‌ಲೈನ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜಿಯೋದ ವೈರ್‌ಲೈನ್ ಚಂದಾದಾರರ ಮೂಲವು ಆಗಸ್ಟ್‌ನಲ್ಲಿ 73.52 ಲಕ್ಷಕ್ಕೆ ತಲುಪಿದ್ದರೆ, BSNLನ ಚಂದಾದಾರರ ಸಂಖ್ಯೆ 71.32 ಲಕ್ಷಕ್ಕೆ ತಲುಪಿದೆ. BSNL ಕಳೆದ 22 ವರ್ಷಗಳಿಂದ ದೇಶದಲ್ಲಿ ವೈರ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆ, ಆದರೆ Jio ತನ್ನ ವೈರ್‌ಲೈನ್ ಸೇವೆಯನ್ನು ಮೂರು ವರ್ಷಗಳ ಹಿಂದೆಯಷ್ಟೇ ಪ್ರಾರಂಭಿಸಿದೆ. ಹೀಗಿದ್ದರೂ ದೇಶದಲ್ಲಿ ವೈರ್‌ಲೈನ್ ಚಂದಾದಾರರ ಸಂಖ್ಯೆ ಜುಲೈನಲ್ಲಿ 2.56 ಕೋಟಿಯಿಂದ ಆಗಸ್ಟ್‌ನಲ್ಲಿ 2.59 ಕೋಟಿಗೆ ಏರಿದೆ. ಕರ್ನಾಟಕದಲ್ಲೇ ಇದು 4 ಲಕ್ಷಕ್ಕೂ ಹೆಚ್ಚು ಜಿಯೋ ಸ್ಥಿರ ದೂರವಾಣಿ ಚಂದಾದಾರರನ್ನು ಹೊಂದಿದೆ.

ವೈರ್‌ಲೈನ್ ಸೇವೆಗಳನ್ನು ಬಳಸುವ ಗ್ರಾಹಕರ ಸಂಖ್ಯೆಯಲ್ಲಿನ ಈ ಹೆಚ್ಚಳಕ್ಕೆ ಖಾಸಗಿ ವಲಯದ ಕೊಡುಗೆ ಬಹಳಷ್ಟಿದೆ. TRAI ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ಜಿಯೋಗೆ 2.62 ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ. ಭಾರ್ತಿ ಏರ್‌ಟೆಲ್ 1.19 ಲಕ್ಷವಾದರೆ, ವೊಡಾಫೋನ್ ಐಡಿಯಾ ಮತ್ತು ಟಾಟಾ ಟೆಲಿಸರ್ವಿಸಸ್ ಕ್ರಮವಾಗಿ 4,202 ಮತ್ತು 3,769 ಹೊಸ ಗ್ರಾಹಕರನ್ನು ತನ್ನ ತೆಕ್ಕೆಗೆ ಸೆಳೆದಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯ-ಚಾಲಿತ ಟೆಲಿಕಾಂಗಳು BSNL ಮತ್ತು MTNL ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 15,734 ಮತ್ತು 13,395 ವೈರ್‌ಲೈನ್ ಚಂದಾದಾರರನ್ನು ಕಳೆದುಕೊಂಡಿವೆ.

ಹಬ್ಬದ ಸಂಭ್ರಮಕ್ಕೆ ಜಿಯೋ ಭರ್ಜರಿ ಕೊಡುಗೆ, ಉಚಿತ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸೇರಿ ಹಲವು ಆಫರ್!

ಇದಲ್ಲದೇ ಆಗಸ್ಟ್‌ನಲ್ಲಿ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗೆ 32.81 ಲಕ್ಷ ಹೊಸ ಮೊಬೈಲ್ ಗ್ರಾಹಕರು ಸೇರ್ಪಡೆಗೊಂಡಿದ್ದರೆ, ಭಾರ್ತಿ ಏರ್‌ಟೆಲ್ ಕೇವಲ 3.26 ಲಕ್ಷ ಹೊಸ ಮೊಬೈಲ್ ಗ್ರಾಹಕರನ್ನು ಪಡೆಯುವ ಮೂಲಕ ಈ ರೇಸ್‌ನಲ್ಲಿ ಹಿಂದುಳಿದಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ವಿಐ ಈ ತಿಂಗಳಲ್ಲಿ 19.58 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. ಈ ಅವಧಿಯಲ್ಲಿ BSNL 5.67 ಲಕ್ಷ, MTNL 470 ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ 32 ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.

2023ರ ಡಿಸೆಂಬರ್‌ನೊಳಗೆ ದೇಶದ ಮೂಲೆಮೂಲೆಯಲ್ಲೂ ಎಲ್ಲ ಹಳ್ಳಿಗಳು, ತಾಲೂಕು ಮಟ್ಟದಲ್ಲೂ ಜಿಯೋ ಕಂಪನಿಯಿಂದ ಅತ್ಯಂತ ವೇಗದ 5ಜಿ ಸೇವೆ ಲಭ್ಯವಾಗಲಿದೆ. ಇದರ ದರ ಗ್ರಾಹಕರ ಕೈಗೆಟಕುವಂತಿರುತ್ತದೆ ಎಂದು ಮುಕೇಶ್ ಅಂಬಾನಿ ಭರವಸೆ ನೀಡಿದ್ದಾರೆ.
 

Follow Us:
Download App:
  • android
  • ios