ವಿಂಡೋಸ್ ಆಪರೇಟಿಂಗ್ ಲ್ಯಾಪ್‌ಟಾಪ್ ಅಥವಾ ಸಿಸ್ಟಮ್ ಬಳಕೆ ಮಾಡುವವರು ವಿಂಡೋಸ್ ಬ್ಲೂ ಸ್ಕ್ರೀನ್ ನೋಡಿರುತ್ತೀರಿ. ಆದರೆ ಈ ವಿನ್ಯಾಸವನ್ನು ಮೈಕ್ರೋಸಾಫ್ಟ್ ಬದಲಾಯಿಸುತ್ತಿದೆ. ಅಷ್ಟಕ್ಕೂ ಈ ಐಕಾನಿಕ್ ಡಿಸೈನ್ ಬದಲಾವಣೆ ಯಾಕೆ?
ಮೈಕ್ರೋಸಾಫ್ಟ್ ನಿರ್ಧಾರ ಇದೀಗ ವಿಶ್ವದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಕಾರಣ ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಬ್ಲೂ ಸ್ಕ್ರೀನ್ ಆಫ್ ಡೆತ್ ಬದಲಾಗುತ್ತಿದೆ. ಇನ್ನು ಮುಂದೆ ಇದು ನೀಲಿ ಬಣ್ಮದಲ್ಲಿ ಇರುವುದಿಲ್ಲ, ವಿಂಡೋಸ್ ಸ್ಕ್ರೀನ್ ಕಪ್ಪು ಬಣ್ಣಕ್ಕೆ ಬದಲಾಗುತ್ತಿದೆ. ಲ್ಯಾಪ್‌ಟಾಪ್ ಅಥವಾ ಡೆಸ್ಕ್ ಟಾಪ್ ಬಳಸುತ್ತಿರುವಾಗ ಸಮಸ್ಯೆ ಎದುರಾದಲ್ಲಿ , ಪ್ರಮುಖವಾಗಿ ಕ್ರಾಶ್ ಆದಾಗ, ಎರರ್ ಬಂದಾಗ ಈ ಬ್ಲೂ ಸ್ಕ್ರೀನ್ ಕಾಣುತ್ತದೆ. ಇನ್ನು ಮುಂದೆ ಈ ಬ್ಲೂ ಸ್ಕ್ರೀನ್ ಇರುವುದಿಲ್ಲ. ಮೈಕ್ರೋಸಾಫ್ಟ್ ಮಹತ್ವದ ಬದಲಾವಣೆಯಲ್ಲಿ ಈ ಸ್ಕ್ರೀನ್ ಇನ್ನು ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ.
ಯೂಸರ್ ಇಂಟರ್‌ಫೇಸ್ ಸುಲಭಗೊಳಿಸಲು ಮೈಕ್ರೋಸಾಫ್ಟ್ ನಿರ್ಧಾರ
ನೀಲಿ ಬಣ್ಣದ ಸ್ಕ್ರೀನ್ ಬದಲಾಯಿಸಲು ಮುಖ್ಯ ಕಾರಣ ಯೂಸರ್ ಇಂಟರ್‌ಫೇಸ್ ಸರಳಗೊಳಿಸುವುದಾಗಿದೆ. ಸ್ಕ್ರೀನ್ ಬಣ್ಣ ಬದಲಾವಣೆ ಬಳಕೆದಾರರಿಗೆ ಹೊಸತನದ ಸ್ಪರ್ಶ, ಕೋಡಿಂಗ್ ನೆರವು, ನಕರಾತ್ಮಕದಿಂದ ಸಕರಾತ್ಮಕ ಬದಲಾವಣೆಗೆ ಈ ಬದಲಾವಣೆ ನಾಂದಿ ಹಾಡಿದೆ.
ಕಂಪ್ಯೂಟರ್‌ನ ಹಾರ್ಡ್‌ವೇರ್ ಅಥವಾ ಸಾಫ್ಟ್‌ವೇರ್‌ನಲ್ಲಿ ಸಮಸ್ಸೆ ತೀವ್ರಗೊಂಡಾಗ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಕ್ರಾಶ್ ಆಗುತ್ತದೆ. ಈ ವೇಳೆ ವಿಂಡೋಸ್ ನೀಲಿ ಬಣ್ಣಕ್ಕೆ ತಿರುಗುತ್ತದೆ. ಕೆಲ ಸೂಚನೆಗಳನ್ನು ವಿಂಡೋಸ್ ಒಎಸ್ ನೀಡಲಿದೆ. ಜೊತೆಗೊಂದು ಕ್ಯೂಆರ್ ಕೋಡ್ ನೀಡಲಿದೆ. ಸಂಪೂರ್ಣ ವಿನ್ಯಾಸ ನೀಲಿ ಬಣ್ಣದಲ್ಲಿ ಇರಲಿದೆ. ಆದರೆ ಇನ್ನು ಮುಂದೆ ಇದು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಇರಲಿದೆ.ಸಂದೇಶ, ಸ್ಕ್ಯಾನಿಂಗ್ ಸೇರಿದಂತೆ ಇತರ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇತ್ತೀಚೆಗೆ ವಿಂಡೋಸ್ ಬ್ಲೂ ಸ್ಕ್ರೀನ್ ಭಾರಿ ವೈರಲ್ ಆಗಿತ್ತು
ಇತ್ತೀಚೆಗೆ ವಿಂಡೋಸ್ ಬ್ಲೂ ಸ್ಕ್ರೀನ್ ಬಾರಿ ವೈರಲ್ ಆಗಿತ್ತು. ಕಾರಣ ಮೈಕ್ರೋಸಾಫ್ಟ್‌ನ ಸೈಬರ್ ಭದ್ರತಾ ವೇದಿಕೆ ಕ್ರೌಡ್‌ಸ್ಟ್ರೈಕ್‌ನ ವೈಫಲ್ಯದಿಂದಾಗಿ ವಿಂಡೋಸ್ ಕ್ರಾಶ್ ಆಗಿತ್ತು. ಈ ವೇಳೆ ವಿಶ್ವದ ಬಹುತೇಕ ರಾಷ್ಟ್ರದ ಸಿಸ್ಟಮ್ ನೀಲಿ ಬಣ್ಣಕ್ಕೆ ತಿರುಗಿತ್ತು. ಲಕ್ಷಾಂತರ ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಂಪ್ಯೂಟರ್‌ಗಳು ತಾಂತ್ರಿಕ ಸಮಸ್ಯೆಯಿಂದಾಗಿ ಶಟ್‌ಡೌನ್ ಅಥವಾ ರೀಸ್ಟಾರ್ಟ್ ಆಗಿತ್ತು. ಕ್ರೌಡ್‌ಸ್ಟ್ರೈಕ್ ಅಪ್‌ಡೇಟ್‌ನಿಂದ ಈ ಸಮಸ್ಯೆ ಉಂಟಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿತ್ತು.
ಮೈಕ್ರೋಸಾಫ್ಟ್ ವಿಂಡೋಸ್ ಕ್ರ್ಯಾಶ್‌ನಿಂದ ಜಾಗತಿಕವಾಗಿ ಹಲವು ಸೇವೆಗಳು ಸ್ಥಗಿತಗೊಂಡಿತ್ತು. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು, ಷೇರುಪೇಟೆ, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಐಟಿ ಉದ್ಯಮ, ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಮಾಧ್ಯಮ ಸಂಸ್ಥೆಗಳು ತೀವ್ರ ಸಂಕಷ್ಟ ಅನುಭವಿಸಿತ್ತು. ಭಾರತದಲ್ಲಿ ಸ್ಪೈಸ್‌ಜೆಟ್ ತಾಂತ್ರಿಕ ಸಮಸ್ಯೆ ಎದುರಿಸಿತ್ತು. ಆನ್‌ಲೈನ್ ಟಿಕೆಟ್ ಬುಕಿಂಗ್ ಮತ್ತು ಚೆಕ್-ಇನ್‌ನಲ್ಲಿ ಸಮಸ್ಯೆ ಆಗಿತ್ತು. ಅಕಾಸ ಏರ್ ಮತ್ತು ಇಂಡಿಗೋ ಕೂಡ ಇದೇ ರೀತಿಯ ಸಮಸ್ಯೆ ಎದುರಿಸಿತ್ತು.
