ಬೆಂಗಳೂರಿನಲ್ಲಿದ್ದು ಕನ್ನಡ ಬರಲ್ವಾ? ಇದು ಸಾಮಾನ್ಯವಾಗಿ ಚರ್ಚೆಯಾಗುವ ವಿಷಯ.ಹೊರ ರಾಜ್ಯದಿಂದ ಬಂದವರು ಕನ್ನಡ ಕಲಿತಿದ್ದಾರೋ ಇಲ್ವೋ? ಆದರೆ ಮೈಕ್ರೋಸಾಫ್ಟ್‌ಗೆ ನೀವು ಕನ್ನಡದಲ್ಲೇ ಕೋಡಿಂಗ್ ಮಾಡಲು ಸಾಧ್ಯವಿದೆ. ಏನಿದು ಕೋಪೈಲೆಟ್ ವರ್ಕ್‌ಸ್ಪೇಸ್?  

ಬೆಂಗಳೂರು(ಜ.18) ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ.ಇದರ ಜೊತೆಗೆ ಸ್ಥಳೀಯ ಭಾಷೆಗಳಿಗೆ ಹೆಚ್ಚಿನ ಮನ್ನಣೆಯೂ ಸಿಗುತ್ತಿದೆ. ಇದೀಗ ಮೈಕ್ರೋಸಾಫ್ಟ್‌‌ಗೆ ಕನ್ನಡ ಅರ್ಥವಾಗುತ್ತೆ. ಹೌದು, ನೀವು ಕನ್ನಡದಲ್ಲೇ ಕೋಡಿಂಗ್ ಮಾಡಬಹುದು. ನಿಮ್ಮ ಕನ್ನಡದ ಕಮಾಂಡ್‌ಗೆ ಮೈಕ್ರೋಸಾಫ್ಟ್ ಇದೀಗ ಅಸಿಸ್ಟ್ ಮಾಡಲಿದೆ. ಮೈಕ್ರೋಸಾಫ್ಟ್ ಹೊಸ ಎಐ ಗಿಟ್‌ಹಬ್ ಕೋಪೈಲೆಟ್ ವರ್ಕ್‌ಸ್ಪೇಸ್ ಈ ಹೊಸತನಕ್ಕೆ ನಾಂದಿ ಹಾಡಿದೆ. ಮತ್ತೊಂದು ವಿಶೇಷತೆ ಇದೆ. ವಿಶ್ವದ ಹಲವು ಭಾಷೆಗಳನ್ನು ಗಿಟ್‌ಹಬ್ ಕೋಪೈಲೆಟ್ ವರ್ಕ್‌ಸ್ಪೇಸ್ ಅರ್ಥ ಮಾಡಿಕೊಳ್ಳಲಿದೆ. ಈ ಪೈಕಿ ಭಾರತದ ಭಾಷೆಗಳ ಪೈಕಿ ಸದ್ಯ ಕನ್ನಡ ಹಾಗೂ ಹಿಂದಿ ಸೇರಿದಂತೆ ಕೆಲ ಭಾಷೆಗಳಲ್ಲಿ ಕಮಾಂಡ್ ನೀಡದರೆ ಮೈಕ್ರೋಸಾಫ್ಟ್ ಅಸಿಸ್ಟ್ ಮಾಡಲಿದೆ.

ಪ್ರತಿಯೊಬ್ಬರು ತಮ್ಮ ತಮ್ಮ ಭಾಷೆಯಲ್ಲಿ ಕೋಡಿಂಗ್ ಮಾಡುವಂತಿರಬೇಕು. ಈ ಉದ್ದೇಶದಲ್ಲಿ ಮೈಕ್ರೋಸಾಫ್ಟ್ ಮತ್ತಷ್ಟು ಸ್ಥಳೀಯತೆಗೆ ಒತ್ತು ನೀಡಿದೆ. ಈ ಮೂಲಕ ಮೈಕ್ರೋಸಾಫ್ಟ್ ಇಂಗ್ಲೀಷ್ ಬಲ್ಲವರಿಗೆ ಮಾತ್ರ ಅನ್ನೋ ಸಂಕೋಲೆ ತೊಡೆದು ಇದೀಗ ಸ್ಥಳೀಯ ಭಾಷೆಗಳಲ್ಲೂ ಕೋಡಿಂಗ್ ಮಾಡುವ ಹಾಗೂ ಅದನ್ನು ಮೈಕ್ರೋಸಾಫ್ಟ್ ಅರ್ಥೈಸಿ ಅಸಿಸ್ಟ್ ಮಾಡುವ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾವನ್ನು ಬಳಸಿಕೊಂಡಿದೆ.

ಮಹಾಕುಂಭದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ವಿಡಿಯೋ ಆಸಲಿಯತ್ತೇನು?

ಗಿಟ್‌ಗಬ್ ಕೋಪೈಲೆಟ್ ವರ್ಕ್‌ಸ್ಪೇಸ್ ಇದೀಗ ಹೊಸತನಕ್ಕೆ ನಾಂದಿ ಹಾಡಿದೆ. ಈ ಕುರಿತು ಗಿಟ್‌ಹಬ್ ಅಂತಾರಾಷ್ಟ್ರೀಯ ಅಂತಾರಾಷ್ಟ್ರೀಯ ನಿರ್ದೇಶಕ ಕರಣ್ ಎಂವಿ ಪ್ರಯೋಗಿಕವಾಗಿ ಸ್ಥಳೀಯ ಭಾಷೆಗಳ ಕಮಾಂಡ್ ಮೂಲಕ ಹೇಗೆ ಕೆಲಸ ಮಾಡಲಿದೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ. ಪ್ರಾಯೋಗಿಕವಾಗಿ ವಿವರಣೆ ನೀಡುವಾಗ, ಕನ್ನಡದಲ್ಲೇ ಕಮಾಂಡ್ ನೀಡಲಾಗಿದೆ. ಇಮೇಜ್ ಅಪ್ಲೋಡ್ ಮಾಡಿದ ಮೇಲೆ ಪ್ರೀವ್ಯೂ ತೋರ್ಸಿ ಎಂದು ಕಮಾಂಡ್ ನೀಡಲಾಗಿತ್ತು. ಅಡ್ಮಿನ್ ಪೇಜ್‌ನಲ್ಲಿ ಮಾರಾಟದ ಇಮೇಜ್ ಅಪ್ಲೋಡ್ ಮಾಡುವ ವೇಳೆ ಈ ಕಮಾಂಡ್ ನೀಡಲಾಗಿತ್ತತು. ತಕ್ಷಣವೇ ಗಿಟ್‌ಗಬ್ ಕೋಪೈಲೆಟ್ ವರ್ಕ್‌ಸ್ಪೇಸ್ ಕನ್ನಡದ ಕಮಾಂಡ್‌ನ್ನು ಅರ್ಥ ಮಾಡಿಕೊಂಡು ಪ್ರಶ್ನೆಗೆ ಉತ್ತರಿಸಿದೆ.

ಕೋಪೈಲೆಟ್ ವರ್ಕ್‌ಸ್ಪೇಸ್ ಮೂಲಕ ಫೈಲ್ ಇನ್‌ಪುಟ್, ಎಲಿಮೆಂಟ್ ಸೇರಿಸುವುದು, ಡ್ಯಾಗ್ ಆ್ಯಂಡ್ ಡ್ರಾಪ್ ಬಳಕೆ ಮಾಡುವುದು ಅಥವಾ ಥರ್ಡ್ ಪಾರ್ಟಿ ಲೈಬ್ರರಿ ಕ್ರಿಯೇಟ್ ಮಾಡುವುದು ಸೇರಿದಂತೆ ಹಲವು ಕೋಡಿಂಗ್‌ಗಳನ್ನು ಯಾವುದೇ ಸ್ಛಳೀಯ ಭಾಷೆಯಲ್ಲಿ ನೀಡಿದರೂ ಕೋಪೈಲೆಟ್ ವರ್ಕ್‌ಸ್ಪೇಸ್ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹಲವು ಕಮೆಂಟ್‌ಗಳು ಹರಿದಾಡುತ್ತಿದೆ. ಮೈಕ್ರೋಸಾಫ್ಟ್ ಇದೀಗ ಕನ್ನಡ ಕಲಿತಿದೆ ಅನ್ನೋ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

View post on Instagram